ವೀರೇಂದ್ರ ಸೆಹ್ವಾಗ್ ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ ಸುದೀಪ್
ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ, ವಿಶ್ವ ಕ್ರಿಕೆಟ್‌ನಲ್ಲಿ ಡ್ಯಾಶಿಂಗ್ ಆರಂಭಿಕ ಎಂದು ಖ್ಯಾತಿ ಗಳಿಸಿಕೊಂಡಿರುವ ವೀರೇಂದ್ರ ಸೆಹ್ವಾಗ್‌ಗೆ ಇಂದು ಜನುಮದಿನದ ಸಂಭ್ರಮ. ಸೆಹ್ವಾಗ್ ಬರ್ತಡೇ ಕ್ರಿಕೆಟ್ ಪ್ರೇಮಿಗಳು ವಿಶ್ ಮಾಡಿದ್ದಾರೆ.
ಕನ್ನಡ ನಟ ಕಿಚ್ಚ ಸುದೀಪ್ ಸಹ ಸೆಹ್ವಾಗ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ಸುದೀಪ್ ಅವರ ಶುಭಾಶಯಕ್ಕೆ ಸೆಹ್ವಾಗ್ ಪ್ರತಿಕ್ರಿಯಿಸಿ ಥ್ಯಾಂಕ್ಸ್ ಹೇಳಿದ್ದಾರೆ.
''ವೀರೇಂದ್ರ ಸೆಹ್ವಾಗ್ ಸರ್ ನಿಮಗೆ ಈ ಹುಟ್ಟುಹಬ್ಬ ಅದ್ಭುತವಾಗಿರಲಿ, ಜನುಮದಿನದ ಶುಭಾಶಯಗಳು'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್ ''ಧನ್ಯವಾದಗಳು ಸುದೀಪ್. ಚಿನ್ನಸ್ವಾಮಿಯಲ್ಲಿ ನಾವು ಒಟ್ಟಿಗೆ ಬ್ಯಾಟಿಂಗ್ ಮಾಡಿದ ಸಮಯ ನೆನಪಾಗಿದೆ. ನಿಮಗೂ ಒಳ್ಳೆಯದಾಗಲಿ'' ಎಂದಿದ್ದಾರೆ.
2018ರಲ್ಲಿ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಒಟ್ಟಿಗೆ ಸೇರಿ ಕೆಸಿಸಿ ಟೂರ್ನಿ ಆಯೋಜಿಸಿದ್ದರು. ಈ ಟೂರ್ನಿಯಲ್ಲಿ ಸುದೀಪ್ ಮತ್ತು ವೀರೇಂದ್ರ ಸೆಹ್ವಾಗ್ ಒಂದೇ ತಂಡದಲ್ಲಿ ಆಡಿದ್ದರು.
ಸೆಹ್ವಾಗ್ ಸೇರಿದಂತೆ ಶ್ರೀಲಂಕಾ ಆಟಗಾರ ದಿಲ್ಶಾನ್, ಇಂಗ್ಲೆಂಡ್ ಆಟಗಾರ ಓಯಿಸ್ ಶಾ, ಆಡಂ ಗಿಲ್‌ಕ್ರಿಸ್ಟ್, ಹರ್ಷಲ್ ಗಿಬ್ಸ್ ಸಹ ಈ ಟೂರ್ನಿಯಲ್ಲಿ ಆಡಿದ್ದರು.


Click it and Unblock the Notifications











