»   » 'ಬಿಗ್' ಸುದ್ದಿ: ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

'ಬಿಗ್' ಸುದ್ದಿ: ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಕೆಲವು ತಿಂಗಳುಗಳ ಹಿಂದೆ ಚಾಲೆಂಜಿಂಗ್ ಸ್ಟಾರ್‌ ದರ್ಶನ್, ''ನಾನು ಮತ್ತು ಸುದೀಪ್ ಸ್ನೇಹಿತರಲ್ಲ'' ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ವೈಮನಸ್ಸನ್ನ ಬಹಿರಂಗ ಪಡಿಸಿದ್ದರು. ಅಲ್ಲಿಂದ ಇವರಿಬ್ಬರ ಸ್ನೇಹ ಮುರಿದು ಬಿದ್ದಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದ್ದವು.

ಆದ್ರೆ, ಎಲ್ಲರು ಅಂದುಕೊಂಡಂತೆ ಕಿಚ್ಚ ಸುದೀಪ್ ಮತ್ತು ದಾಸ ದರ್ಶನ್ ಅವರ ಗೆಳೆತನ ಮುರಿದು ಬಿದ್ದಿಲ್ಲ. ಇದಕ್ಕೆ ತಾಜಾ ಉದಾಹರಣೆ, ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ' ಹಾಗೂ ವೈಯಕ್ತಿಕವಾಗಿ ದರ್ಶನ್ ಅವರ ಬಗ್ಗೆ ಅಭಿನಯ ಚಕ್ರವರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಾವಿಬ್ಬರು ಈಗಲೂ ಉತ್ತಮ ಸ್ನೇಹಿತರು ಎಂದು ಸುದೀಪ್ ಸಾಬೀತುಪಡಿಸಿದ್ದಾರೆ.

ಅಷ್ಟಕ್ಕೂ, ದರ್ಶನ್ ಬಗ್ಗೆ ಕಿಚ್ಚ ಏನಂದ್ರು? ಕುರುಕ್ಷೇತ್ರದ ದುರ್ಯೋಧನ ಪಾತ್ರದ ಬಗ್ಗೆ ಸುದೀಪ್ ಅಭಿಪ್ರಾಯವೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ......

ದುರ್ಯೋಧನ ಪಾತ್ರಕ್ಕೆ ದರ್ಶನ್ ಸೂಕ್ತ

ಕುರುಕ್ಷೇತ್ರ ಚಿತ್ರದ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್ ''ದುರ್ಯೋಧನ ಪಾತ್ರಕ್ಕೆ ದರ್ಶನ್ ಅವರು ಸೂಕ್ತ ಆಯ್ಕೆ. ಅವರು ಮಾತ್ರ ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು'' ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

'ದರ್ಶನ್-ಸುದೀಪ್ ಸಂಬಂಧ ಸರಿಯಿಲ್ಲ' ಎನ್ನುವುದಕ್ಕು ಮುಂಚೆ ಇಲ್ಲಿ ನೋಡಿ

ದರ್ಶನ್ ಸಾಧನೆಗೆ 'ಕುರುಕ್ಷೇತ್ರ' ಮತ್ತೊಂದು ಹಿರಿಮೆ

''ಕುರುಕ್ಷೇತ್ರ' ಚಿತ್ರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಬರಲಿದೆ'' ಎಂದು ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ.

'ಆಲ್ ದಿ ಬೆಸ್ಟ್' ದರ್ಶನ್

ತನ್ನ 50ನೇ ಚಿತ್ರ ಮಾಡುತ್ತಿರುವ ದರ್ಶನ್ ಅವರಿಗೆ ಈ ಮೂಲಕ ಆಪ್ತಮಿತ್ರ ಸುದೀಪ್ 'ಆಲ್ ದಿ ಬೆಸ್ಟ್' ಹೇಳಿದ್ದಾರೆ.

ಸ್ನೇಹದ ಕಡಲಲ್ಲಿ ತೇಲುತ್ತಿದ್ದ ಕುಚ್ಚಿಕ್ಕೂ ಗೆಳೆಯರ 'ಕಿಚ್ಚಿ'ನ ಕಹಾನಿ

'ಕುರುಕ್ಷೇತ್ರ' ಚಿತ್ರದ ಬಗ್ಗೆ ಮೆಚ್ಚುಗೆ

''ಕುರುಕ್ಷೇತ್ರ ಅಂತಹ ಚಿತ್ರ ಆರಂಭವಾಗಿರುವುದು ತುಂಬ ಸಂತಸದ ವಿಚಾರ. ನಿರ್ಮಾಪಕ ಮುನಿರತ್ನ ಹಾಗೂ ಕುರುಕ್ಷೇತ್ರ ಚಿತ್ರತಂಡಕ್ಕೆ ಶುಭವಾಗಲಿ'' ಎಂದಿದ್ದಾರೆ.

ಕುರುಕ್ಷೇತ್ರದಲ್ಲಿ ಸುದೀಪ್ ಅಭಿನಯಿಸಬೇಕಿತ್ತು

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಕಿಚ್ಚ ಸುದೀಪ್ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನ ಮಾಡಬೇಕಿತ್ತು. ಆದ್ರೆ, ಸುದೀಪ್ ಅವರ ಬಿಜಿ ಶೆಡ್ಯೂಲ್ ನಿಂದ ಅಭಿನಯಿಸಲು ಸಾಧ್ಯವಾಗಲಿಲ್ಲ.

ದರ್ಶನ್-ಸುದೀಪ್ ಚೆನ್ನಾಗಿದ್ದಾರೆ

ಕುರುಕ್ಷೇತ್ರ ಚಿತ್ರದಲ್ಲಿ ಸುದೀಪ್ ಅಭಿನಯಿಸದಿದ್ದಕ್ಕೆ, ದರ್ಶನ್ ಜೊತೆಗಿನ ಬಿನ್ನಾಭಿಪ್ರಾಯವೇ ಕಾರಣವೆಂದು ಹಲವು ಹೇಳುತ್ತಿದ್ದರು. ಆದ್ರೆ, ದರ್ಶನ್ ಮತ್ತು ಸುದೀಪ್ ಸಂಬಂಧ ಚೆನ್ನಾಗಿಯೇ ಇದೆ ಎಂಬುದು ಈ ಬೆಳವಣಿಗೆಗಳಿಂದ ಗೊತ್ತಾಗುತ್ತಿದೆ.

ಟ್ವಿಟ್ಟರ್ ನಲ್ಲೂ ದರ್ಶನ್ ಫಾಲೋ ಮಾಡ್ತಿದ್ದಾರೆ ಕಿಚ್ಚ

ಸುದೀಪ್ ಅವರನ್ನ ದರ್ಶನ್ ತಮ್ಮ ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ್ದರು. ಆದ್ರೆ, ಸುದೀಪ್ ಮಾತ್ರ, ದರ್ಶನ್ ಅವರನ್ನ ಇನ್ನು ಫಾಲೋ ಮಾಡುತ್ತಲೇ ಇದ್ದಾರೆ. ಇದನ್ನ ನೋಡಿದರೆ ಸಾಕು ಇವರಿಬ್ಬರ ನಡುವಿನ ವೈಮನಸ್ಸು ತಣ್ಣಗಾಗಿದೆ ಎನ್ನಲು.

ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು?

English summary
Kiccha sudeep has taken his twitter account to appreciate Challenging Star Darshan and He Wish to Darshan's 50th Movie Kurukshtera

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada