ಕೌಸಲ್ಯ ಸುಪ್ರಜ ರಾಮ ಟ್ರೈಲರ್ ಲಾಂಚ್‌ನಲ್ಲಿ ಧರಿಸಿದ್ದ ಶೂ ಬೆಲೆ ಇಷ್ಟು ದುಬಾರಿ!
ನಿನ್ನೆ ( ಜುಲೈ 14 ) ಕನ್ನಡದ ಕೌಸಲ್ಯ ಸುಪ್ರಜ ರಾಮ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಜರುಗಿತು. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿದ್ದು, ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ.
ಈ ಹಿಂದೆ ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ ರೀತಿಯ ಹಲವಾರು ಬ್ಲಾಕ್‌ಬಸ್ಟರ್ ಲವ್ ಸ್ಟೋರಿ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಶಶಾಂಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಿನ್ನೆ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಯಾವುದೇ ಕಾರ್ಯಕ್ರಮವಿರಲಿ ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವುದಕ್ಕೆ ಫೇಮಸ್ ಆಗಿರುವ ಸುದೀಪ್ ಈ ಕಾರ್ಯಕ್ರಮದಲ್ಲಿಯೂ ಸಹ ಸ್ಟೈಲಿಷ್ ಲುಕ್ ನಲ್ಲಿ ಮಿಂಚಿದರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಸುದೀಪ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.
ಕಿಚ್ಚನ ಡ್ರೆಸ್ ನೋಡಿ ಮನಸೋತ ಸಿನಿ ರಸಿಕರು ಹಾಗೂ ಫ್ಯಾಷನ್ ಲವರ್ಸ್ ಫಿದಾ ಆಗಿದ್ದಾರೆ. ಅದರಲ್ಲೂ ಸುದೀಪ್ ಧರಿಸಿದ್ದ ಸ್ಟೈಲಿಷ್ ಶೂ ಎಲ್ಲರ ಗಮನ ಸೆಳೆದಿದೆ.
ಹೀಗೆ ಸುದೀಪ್ ಧರಿಸಿರುವ ಶೂ ಎಷ್ಟು ಬೆಲೆಯದ್ದು, ಇಂತಹದ್ದೇ ಶೂ ನಾನು ಕೂಡ ಧರಿಸಬೇಕು ಎಂದು ಅಂತರ್ಜಾಲದಲ್ಲಿ ಹುಡುಕಲು ಆರಂಭಿಸಿದ್ದಾರೆ. ಹೀಗೆ ಸುದೀಪ್ ರೀತಿಯ ಶೂ ಧರಿಸಲು ಆರಂಭಿಸಿದವರಿಗೆ ಶಾಕ್ ಕಾದಿತ್ತು. ಏಕೆಂದರೆ ಸುದೀಪ್ ಧರಿಸಿದ್ದ ಆ ಶೂನ ಬೆಲೆ ಬರೋಬ್ಬರಿ 1,03,000ರೂಪಾಯಿಗಳಷ್ಟಿದೆ.
ಡಿಜಿ ಕಂಪೆನಿಯ ಸ್ನೀಕರ್ ಶೂ ಇದಾಗಿದ್ದು, ನೋಡಲು ಸಖತ್ ಸ್ಟೈಲಿಷ್ ಆಗಿದೆ. ಈ ಶೂ ಖರೀದಿಸಲು ಮುಂದಾದವರು ದೂರದ ಬೆಟ್ಟ ನುಣ್ಣಗೆ ಅಂತ ಸುಮ್ಮನಾಗಿದ್ದಾರೆ.
ಇನ್ನು ನಿನ್ನೆ ಬಿಡುಗಡೆಯಾದ ಈ ಟ್ರೈಲರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ. ಇನ್ನು ಈ ಚಿತ್ರದ ಟ್ರೈಲರ್ ಅನ್ನು ಮೆಚ್ಚಿದ ಸ್ಯಾಂಡಲ್‌ವುಡ್‌ನ ಹಲವಾರು ನಟ ಹಾಗೂ ನಟಿಯರೂ ಸಹ ಈ ಟ್ರೈಲರ್ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಚಿತ್ರದ ಟ್ರೈಲರ್ ವೀಕ್ಷಿಸಿದರೆ ಪುರುಷ ಹಾಗೂ ಮಹಿಳೆಯರ ನಡುವೆ ಸಮಾನತೆಯನ್ನು ಬಯಸದ ಹಾಗೂ ಗಂಡೇ ಮೇಲು ಎಂದು ಬದುಕು ನಡೆಸುವ ನಾಯಕ ಹೇಗೆ ಲವ್ ಹಾಗೂ ಮದುವೆ ಜೀವನವನ್ನು ನಿಭಾಯಿಸುತ್ತಾನೆ ಎಂಬುವುದೇ ಸಿನಿಮಾ ಎಂಬುವುದು ತಿಳಿದುಬಿಡುತ್ತದೆ. ಇಷ್ಟು ದಿನಗಳ ಕಾಲ ಫೀಲಿಂಗ್ ಲವ್ ಸ್ಟೋರಿಗಳ ಮೂಲಕ ಜನರ ಮನಗೆದ್ದಿದ್ದ ಡಾರ್ಲಿಂಗ್ ಕೃಷ್ಣ ಈಗ ಈ ವಿಭಿನ್ನ ಕಥೆಯ ಮೂಲಕ ಯಾವ ರೀತಿ ಮಿಂಚುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications











