twitter
    For Quick Alerts
    ALLOW NOTIFICATIONS  
    For Daily Alerts

    'ಒಂದು ತುತ್ತು ಒಂದು ಜೀವವನ್ನ ಉಳಸೋದಾದ್ರೆ ಅ ಮೊದಲನೇ ತುತ್ತು ನನ್ನದಾಗಲಿ'- ಸುದೀಪ್

    |

    ಕನ್ನಡ ನಟ ಕಿಚ್ಚ ಸುದೀಪ್ ಆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ, ಬಿಗ್ ಬಾಸ್ ಮಾಡ್ತಿದ್ದಾರೆ, ಕ್ರಿಕೆಟ್ ಆಡ್ತಿದ್ದಾರೆ ಎನ್ನುವುದು ಸಾಮಾನ್ಯ. ಇಷ್ಟೆಲ್ಲದರ ನಡುವೆಯೂ ಮಹತ್ವದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಮೆಚ್ಚುವಂತಹದ್ದು.

    Recommended Video

    ಕಿಚ್ಚ ಸುದೀಪ್ ಕೆಲಸಕ್ಕೆ ಭೇಷ್ ಎನ್ನುತ್ತಿದೆ ಕರ್ನಾಟಕ | Filmibeat Kannada

    ಹೌದು, ಸುದೀಪ್ ಅವರ ಜೊತೆಯಲ್ಲಿರುವ ಸ್ನೇಹಿತರು, ಅಭಿಮಾನಿಗಳು ಹಾಗೂ ಆಪ್ತರು ''ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ'' ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಅಭಿನಯ ಚಕ್ರವರ್ತಿ ಮಾರ್ಗದರ್ಶಕರಾಗಿದ್ದಾರೆ.

     ಹಾರಲಿದ್ದ ಹೆಲೆಕಾಪ್ಟರ್ ಬಳಿ ಓಡಿಬಂದು ಆತಂಕ ತಂದ ಸುದೀಪ್ ಅಭಿಮಾನಿ ಹಾರಲಿದ್ದ ಹೆಲೆಕಾಪ್ಟರ್ ಬಳಿ ಓಡಿಬಂದು ಆತಂಕ ತಂದ ಸುದೀಪ್ ಅಭಿಮಾನಿ

    ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ಬಡಜನರಿಗೆ, ವಿದ್ಯಾರ್ಥಿಗಳಿಗೆ, ವಿಶೇಷ ಚೇತನರಿಗೆ, ಮೂಕಪ್ರಾಣಿಗಳಿಗೆ ಸಹಾಯ ಮಾಡುವ ಕೆಲಸ ಆಗ್ತಿದೆ. ಕಷ್ಟ ಎಂದು ಬಂದವರಿಗೆ, ಚಿಕಿತ್ಸೆಗೆಂದು ಬಂದವರಿಗೆ ಸುದೀಪ್ ಚಾರಿಟೇಬಲ್ ಸೊಸೈಟಿ ನೆರವಾಗಿದೆ.

    Kichcha Sudeepa Charitable Society Completes 4 Years

    ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಗೆ ನಾಲ್ಕು ವರ್ಷ. ಕಳೆದ ನಾಲ್ಕು ವರ್ಷದಿಂದಲೂ ಅನೇಕ ಕೆಲಸಗಳನ್ನು ತೆರೆಮರೆಯಲ್ಲಿ ಮಾಡಿಕೊಂಡು ಬಂದಿದೆ. ಇದೀಗ, ನಾಲ್ಕನೇ ವರ್ಷದ ಪ್ರಯುಕ್ತ ಫೆಬ್ರವರಿ 14 ರಂದು ಕೆಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.

    * ಬೀದಿ ಬದಿಯಲ್ಲಿ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಒಂದು ತುತ್ತು ಅನ್ನ ನೀಡುವ ಮೂಲಕ ನೀರನ್ನು ಕೊಡುವ ಮೂಲಕ...

    * ಪಂಜರದಲ್ಲಿ ಬಂದಿಯಾಗಿರುವ ಪಕ್ಷಿಗಳನ್ನು ಬಿಡುಗಡೆಗೊಳಿಸುವ ಮೂಲಕ...

    * ಗೋಶಾಲೆ ಭೇಟಿ ನೀಡುವ ಮೂಲಕ ಸಂಭ್ರಮಿಸಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ನಿರ್ಧರಿಸಿದೆ.

    ಫೆಬ್ರವರಿ 14 ರಂದು ಪ್ರೇಮಿಗಳ ದಿನ ಅಂತಾರೆ. ಆದರೆ, ಪುಲ್ವಾಮ ದಾಳಿಯಲ್ಲಿ ದೇಶದ ಅನೇಕ ಸೈನಿಕರು ಹುತಾತ್ಮರಾದ ದಿನ ಅದು. ಆ ವೀರಾ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಪ್ರಕಟಿಸಿದೆ.

    ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಮಹತ್ವದ ಕೆಲಸಗಳ ಬಗ್ಗೆ ಸುದೀಪ್ ಸಹ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಒಂದು ತುತ್ತು ಒಂದು ಜೀವವನ್ನ ಉಳಸೋದಾದ್ರೆ ಅ ಮೊದಲನೇ ತುತ್ತು ನನ್ನದಾಗಲಿ'' ಎಂದಿದ್ದಾರೆ.

    s

    English summary
    Kannada actor Kichcha Sudeepa Charitable Society Completes 4 Years.
    Friday, February 12, 2021, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X