ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
ನಟ ಸುದೀಪ್ ಮಾಡಿರುವ, ಮಾಡುತ್ತಿರುವ ಸಮಾಜ ಸೇವೆಗೆ ಪೀಠಿಕೆ ಅಗತ್ಯವಿಲ್ಲ. ಅವರ ಸಮಾಜ ಸೇವೆಗಳ ಬಗ್ಗೆ ಆಗಾಗ್ಗೆ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ.
ಇದೀಗ ಕಿಚ್ಚ ಸುದೀಪ್ ಬೆಂಬಲದೊಂದಿಗೆ ಅವರ ಅಭಿಮಾನಿಗಳು ನಿರ್ವಹಿಸುತ್ತಿರುವ 'ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ' ಅಂಧ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗುವ ಪ್ರಯತ್ನ ಮಾಡಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಔರಾದ್ ಗ್ರಾಮದ ಅಂಧ ಯುವಕ ಸಾಯಿನಾಥ್ ಗೆ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ನೆರವು ದೊರೆತಿದೆ. ನೆರವಿನ ರೂಪದಲ್ಲಿ ಹಣವನ್ನು ನಿರಾಕರಿಸಿದ ಯುವಕ, ತನಗೆ ಒಂದು ಮೈಕ್ ಹಾಗೂ ಒಂದು ಸ್ಪೀಕರ್ ಬೇಕೆಂದು ಕೇಳಿದ್ದಾನೆ.

ಆತನ ಆಸೆಯಂತೆಯೇ ಒಂದು ಮೈಕ್ ಹಾಗೂ ಸ್ಪೀಕರ್ ಅನ್ನು ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಸದಸ್ಯರು ಒದಗಿಸಿದ್ದಾರೆ. ಆ ಮೈಕ್ ಹಾಗೂ ಸ್ಪೀಕರ್ ಮೂಲಕ ಹಾಡುಗಳನ್ನು ಹಾಡಿ ತಾನು ಜೀವನಕ್ಕೆ ಹಣ ಗಳಿಸುವುದಾಗಿ ಸಾಯಿನಾಥ್ ಹೇಳಿದ್ದಾನೆ.
ಉತ್ತಮವಾಗಿ ಹಾಡು ಹೇಳುವ ಸಾಯಿನಾಥ್, ಆ ಮೈಕ್ ಹಾಗೂ ಸ್ಪೀಕರ್ ಮೂಲಕ ಜೀವನಕ್ಕೆ ಹಣ ಗಳಿಸುವ ಉಮೇದು ಹೊಂದಿದ್ದಾನೆ. ಆತನ ಜೀವನ ಸುಗಮವಾಗಿ ನಡೆಯಲು ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ನೆರವಾಗಿದೆ. ಈ ಹಿಂದೆ ಸಹ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯು ಈ ರೀತಿಯ ಹಲವು ಕಾರ್ಯಗಳನ್ನು ಮಾಡಿದೆ.
Recommended Video
ಕೆಲವು ದಿನಗಳ ಹಿಂದೆಯಷ್ಟೆ ಸುದೀಪ್ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಬಂದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ವ್ಯಕ್ತಿಗೆ ನೆರವಾಗಿದ್ದರು.


Click it and Unblock the Notifications











