For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಫಸ್ಟ್ ಫೋಟೋ ಶೂಟ್ ನೀವು ಒಮ್ಮೆ ನೋಡಿ

  By Pavithra
  |
  ಸುದೀಪ್ ಫಸ್ಟ್ ಫೋಟೋಶೂಟ್ ಹೇಗಿತ್ತು ನೋಡಿ | Filmibeat Kannada

  ಕಿಚ್ಚ ಸುದೀಪ್ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ 'ಸ್ಪರ್ಶ'. ಆದರೆ ಸುದೀಪ್ ಹೀರೋ ಆಗುವ ಮುಂಚೆಯೇ ಫೋಟೋ ಶೂಟ್ ಮಾಡಿಸಿದ್ದರು. ಈ ವಿಚಾರವನ್ನ ಮಜಾ ಟಾಕೀಸ್ ನಲ್ಲಿ ಹೇಳಿಕೊಂಡಿದ್ದರು. ಸೃಜನ್ ಲೋಕೇಶ್ ಅವರ ಅಕ್ಕ ಪೂಜಾ ಲೋಕೇಶ್ ಜೊತೆಯಲ್ಲಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿರುವುದಾಗಿ ಹಳೆ ನೆನಪುಗಳನ್ನ ಹೊರ ಹಾಕಿದ್ದರು.

  ಮಲೇಷಿಯಾದಲ್ಲಿ ಕಿಚ್ಚನ ಫ್ಯಾಮಿಲಿ ಟ್ರಿಪ್ಮಲೇಷಿಯಾದಲ್ಲಿ ಕಿಚ್ಚನ ಫ್ಯಾಮಿಲಿ ಟ್ರಿಪ್

  ಸದ್ಯ ಸುದೀಪ್ ಅವರ ಮೊದಲ ಫೋಟೋ ಶೂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪೂಜಾ ಲೋಕೇಶ್ ಹಾಗೂ ಸುದೀಪ್ ಸಾಕಷ್ಟು ವರ್ಷದ ಹಿಂದೆ ತೆಗಿಸಿಕೊಂಡ ಫೋಟೋಗಳು ಇದಾಗಿದ್ದು ಸೃಜನ್ ಅವರ ಮನೆಯಲ್ಲೇ ಈ ಶೂಟ್ ನಡೆಸಲಾಗಿತ್ತು.

  ನಟಿ ಪೂಜಾ ಲೋಕೇಶ್ ಆಗಿನ ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದರು. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಸುದೀಪ್ ಅವರ ಜೊತೆ ಕ್ಯಾಮೆರಾಗೆ ಪೋಸ್ ನೀಡಬೇಕಿದ್ದ ನಾಯಕಿ ಕಿಚ್ಚನ ಜೊತೆ ಅಭಿನಯಿಸಲು ಒಲ್ಲೆ ಅಂದಿದ್ದರಂತೆ. ಅದೇ ಕಾರಣಕ್ಕೆ ಪೂಜಾ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದರು.

  Kichcha Sudeeps first photo shoot are viral on the social networking site

  ಸುಮಾರು ಇಪ್ಪತ್ತು ವರ್ಷದ ಹಿಂದಿನ ಫೋಟೋಗಳು ಇದ್ದಾಗಿದ್ದು ಸುದೀಪ್ ಮತ್ತು ಪೂಜಾ ಲೋಕೇಶ್ ಜೋಡಿ ನೋಡಿದರೆ ಇವರಿಬ್ಬರು ಒಟ್ಟಿಗೆ ಸಿನಿಮಾದಲ್ಲಿ ಅಭಿನಯಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಭಾವನೆ ಮೂಡುತ್ತದೆ.

  'ದಿ ವಿಲನ್' ಟೀಸರ್ ಬರೋ ಮೊದಲೇ ಪ್ರೇಮ್ ಕೊಟ್ಟ ಗುಡ್ ನ್ಯೂಸ್'ದಿ ವಿಲನ್' ಟೀಸರ್ ಬರೋ ಮೊದಲೇ ಪ್ರೇಮ್ ಕೊಟ್ಟ ಗುಡ್ ನ್ಯೂಸ್

  English summary
  Kannada actor Kichcha Sudeep's first photo shoot are viral on the social networking site. Actress Pooja Lokesh along with Sudeep is also involved in the shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X