25 ದಿನ ಪೂರೈಸಿದ ಬೆನ್ನಲ್ಲೇ 'ಮ್ಯಾಕ್ಸ್' ಹಾಗೂ 'ಯುಐ' ಚಿತ್ರಗಳಿಗೆ ಭಾರೀ ಆಘಾತ
ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಮ್ಯಾಕ್ಸ್' ಹಾಗೂ 'ಯುಐ' ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. 5 ದಿನಗಳ ಅಂತರದಲ್ಲಿ ಎರಡೂ ಸಿನಿಮಾಗಳು ತೆರೆಗೆ ಬಂದಿದ್ದವು. ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಆರ್ಭಟ ಕಮ್ಮಿ ಆಗಿತ್ತು. ಆದರೂ ಸಿನಿಮಾ ಯಶಸ್ವಿಯಾಗಿತ್ತು. ವಿದೇಶಗಳಲ್ಲಿ ರಿಯಲ್ ಸ್ಟಾರ್ ಮ್ಯಾಜಿಕ್ ನಡೆದಿತ್ತು.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಆದರೆ ಬಾಕ್ಸಾಫೀಸ್ ಗಳಿಕೆ ಬಗ್ಗೆ ಎರಡೂ ಚಿತ್ರತಂಡಗಳು ಅಧಿಕೃವಾಗಿ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಆಯ್ದ ಚಿತ್ರಮಂದಿರಗಳಲ್ಲಿ ಎರಡೂ ಸಿನಿಮಾಗಳು ಪ್ರದರ್ಶನ ಮುಂದುವರೆಸಿವೆ. ಶೀಘ್ರದಲ್ಲೇ ಎರಡೂ ಸಿನಿಮಾಗಳು ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿವೆ. ಅಷ್ಟರಲ್ಲೇ ಶಾಕ್ ಎದುರಾಗಿದೆ.

'ವಿಕ್ರಾಂತ್ ರೋಣ' ಸಕ್ಸಸ್ ಬಳಿಕ ಸುದೀಪ್ 'ಮ್ಯಾಕ್ಸ್' ಚಿತ್ರದಲ್ಲಿ ನಟಿಸಿದ್ದರು. ಕೊಂಚ ತಡವಾಗಿ ಶುರುವಾಗಿದ್ದ ಸಿನಿಮಾ ಬಿಡುಗಡೆ ಆಗುವುದು ನಿಧಾನವಾಗಿತ್ತು. ಆದರೆ ಕಾದಿದ್ದಕ್ಕೂ ಒಳ್ಳೆ ಸಿನಿಮಾ ಬಂತು ಎಂದು ಅಭಿಮಾನಿಗಳು ಖುಷಿಯಾಗಿದ್ದರು. ಅರ್ಜುನ್ ಮಹಾಕ್ಷಯ್ ಆಗಿ ಕಿಚ್ಚನ ಮಾಸ್ ಪರ್ಫಾರ್ಮನ್ಸ್ ನೋಡಿ ಸಿನಿರಸಿಕರು ಮೆಚ್ಚಿಕೊಂಡಿದ್ದರು. ತಮಿಳಿನ ಕಲೈಪುಲಿ ಎಸ್ ತನು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಮ್ಯಾಕ್ಸ್' ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿತ್ತು. ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಆದರೆ 5 ದಿನಗಳ ಹಿಂದೆ 'ಯುಐ' ಸಿನಿಮಾ ತೆರೆಗೆ ಬಂದಿದ್ದರಿಂದ ಒಳ್ಳೆ ಥಿಯೇಟರ್‌ಗಳು ಸಿಗಲಿಲ್ಲ ಎನ್ನುವ ಬೇಸರವನ್ನು ಸುದೀಪ್ ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಯುಐ' ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿತ್ತು.
3 ದಿನಗಳ ಕಾಲ ಬುಕ್‌ಮೈ ಶೋನಲ್ಲಿ 'ಯುಐ' ಚಿತ್ರದ 3 ಲಕ್ಷ ಟಿಕೆಟ್ ಬುಕ್ ಆಗಿ ದಾಖಲೆ ಬರೆದಿತ್ತು. ಕಳೆದ ವರ್ಷ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸಿದ ಸಿನಿಮಾ ಎನ್ನುವ ಹೆಗ್ಗಳಿಕೆ 'ಮ್ಯಾಕ್ಸ್' ಚಿತ್ರ ಭಾಜನವಾಗಿತ್ತು. ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಗೆದ್ದ ಸಿನಿಮಾ 'ಯುಐ' ಎನಿಸಿಕೊಂಡಿತ್ತು. ಸದ್ಯ ಎರಡೂ ಸಿನಿಮಾಗಳ HD ಪ್ರಿಂಟ್ ಲೀಕ್ ಆಗಿದೆ ಎಂದು ಚರ್ಚೆ ನಡೀತಿದೆ.

ಚಿತ್ರರಂಗಕ್ಕೆ ಪೈರಸಿ ಎನ್ನುವುದು ದೊಡ್ಡ ಸಮಸ್ಯೆಯಾಗಿದೆ. ತೆರೆಕಂಡ ದಿನವೇ ಸಿನಿಮಾಗಳನ್ನು ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಲೀಕ್ ಮಾಡಲಾಗ್ತಿದೆ. ಕೆಲ ಸಿನಿಮಾಗಳ HD ಪ್ರಿಂಟ್ ಬಹಳ ಬೇಗ ಹೊರ ಬಂದುಬಿಡುತ್ತದೆ. ಇತ್ತೀಚೆಗೆ ತೆರೆಕಂಡ ದಿನವೇ ತೆಲುಗಿನ 'ಗೇಮ್ ಚೇಂಜರ್' ಸಿನಿಮಾ ಲೀಕ್ ಆಗಿತ್ತು. 15 ದಿನಗಳ ಹಿಂದೆಯೇ 'ಯುಐ' ಸಿನಿಮಾ ಪೈರಸಿ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೀಗ 'ಮ್ಯಾಕ್ಸ್' ತಮಿಳು ವರ್ಷನ್ HD ಪ್ರಿಂಟ್ ಲೀಕ್ ಆಗಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ದೊಡ್ಡ ಸಿನಿಮಾಗಳು ಹೀಗೆ ಓಟಿಟಿಗೆ ಬರುವ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗುವ ಬಗ್ಗೆ ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಸಿನಿಮಾಗಳು ಹೀಗೆ ಸೋರಿಕೆ ಆಗಿದ್ದರೂ ಸಿನಿರಸಿಕರು ದೊಡ್ಡಪರದೆಯಲ್ಲೇ ನೋಡಲು ಮನಸ್ಸು ಮಾಡುತ್ತಾರೆ. ಎರಡು ದಿನಗಳ ಹಿಂದೆ 'ಮ್ಯಾಕ್ಸ್' ಸಿನಿಮಾ 25 ದಿನ ಪೂರೈಸಿತ್ತು. ಸುದಿಫ್ ಈ ಬಗ್ಗೆ ವೀಡಿಯೋ ಮಾಡಿ ಸಂತಸ ಹಂಚಿಕೊಂಡಿದ್ದರು.
ಇನ್ನು 'ಮ್ಯಾಕ್ಸ್' ಹಾಗೂ 'ಯುಐ' ಸಿನಿಮಾಗಳ ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿಲ್ಲ. 'ಯುಐ' ಚಿತ್ರದ ಡಿಜಿಟಲ್ ರೈಟ್ಸ್ ಯಾರು ಕೊಂಡುಕೊಂಡಿದ್ದಾರೆ ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಈಗಾಗಲೇ ಚಿತ್ರತಂಡ ಸ್ಪಷ್ಟನೆ ನೀಡಿದೆ. 'ಮ್ಯಾಕ್ಸ್' ಚಿತ್ರದ ರೈಟ್ಸ್ ಜೀ ಸಂಸ್ಥೆ ಪಾಲಾಗಿದೆ. ಜನವರಿ ಕೊನೆ ವಾರದಲ್ಲಿ ಚಿತ್ರಗಳು ಓಟಿಟಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











