ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾದ 'ಮ್ಯಾಕ್ಸ್‌'ಗೆ ಹೇಗಿದೆ ರೆಸ್ಫಾನ್ಸ್ ?

ಸುದೀಪ್.. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದವರು ಸುದೀಪ್.

ಹೆಚ್ಚು ಕಡಿಮೆ ಒಂದೂವರೆ ದಶಕಗಳಿಂದ ಬಾಲಿವುಡ್ಡು.. ಕಾಲಿವುಡ್ಡು .. ಟಾಲಿವುಡ್ಡು .. ಅಂಗಳದಲ್ಲಿ ಓಡಾಡಿರೋ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೇವಲ ಕರುನಾಡಿನಲ್ಲಿ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಇದಕ್ಕೆ ಕೈಗನ್ನಡಿಯೇ ಮ್ಯಾಕ್ಸ್ ಚಿತ್ರಕ್ಕೆ ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಿಕ್ತಿರುವ ಪ್ರತಿಕ್ರಿಯೆ.

kichcha-sudeeps-max-has-received-positive-feedback-for-its-telugu-and-tamil-versions

ಹೌದು, ಕನ್ನಡದಲ್ಲಿ ಮೊನ್ನೆ ತೆರೆಗೆ ಬಂದು ಎಲ್ಲರ ಮನ ಗೆದ್ದ ಮ್ಯಾಕ್ಸ್ ಇಂದು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿದೆ. ಅಲ್ಲಿನ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಹೈದ್ರಾಬಾದ್‌ನ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ. ಇನ್ನೂ ಕೆಲ ಕಡೆ ಚಿತ್ರದ ಟಿಕೆಟ್ ಫಾಸ್ಟ್ ಆಗಿ ಬಿಕರಿಯಾಗುತ್ತಿವೆ. ಉದಾಹರಣೆಗೆ ಗಚಿಬೌಲಿಯಲ್ಲಿರುವ ಎಎಮ್‌ಬಿ ಚಿತ್ರಮಂದಿರ, ದಿಲ್ ಸುಖ್ ನಗರದಲ್ಲಿರುವ ಏಷ್ಯನ್ ಗಂಗಾ ಚಿತ್ರಮಂದಿರ, ನಲ್ಲಗಂಡ್ಲದಲ್ಲಿರುವ ಅಪರ್ಣಾ ಸಿನೆಮಾಸ್, ಮತ್ತು ಪಿವಿಆರ್‌ನ ಆರ್‌ಕೆ ಸಿನೆಪ್ಲೆಕ್ಸ್.

ತೆಲುಗಿನಲ್ಲಿ ಚಿತ್ರವನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರು ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸುದೀಪ್ ಅವರ ಅಭಿನಯವನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಈ ವರ್ಷ ನಾವು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಇದು ಕೂಡ ಒಂದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಚಿತ್ರಮಂದಿರದ ಆವರಣದ ಮುಂದೆ ಸಂಭ್ರಮಾಚರಣೆಯನ್ನು ಕೂಡ ಅಲ್ಲಿನ ಚಿತ್ರರಸಿಕರು ಮಾಡಿದ್ದಾರೆ.

ಇನ್ನೂ ತಮಿಳುನಾಡಿನಲ್ಲಿ ಕೂಡ ಮ್ಯಾಕ್ಸ್ ಚಿತ್ರಕ್ಕೆ ಮೊದಲ ದಿನ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಕೆಲ ಕಡೆ ಚಿತ್ರ ಹೌಸ್ ಫುಲ್ ಆದರೆ ಇನ್ನೂ ಕೆಲವಡೆ ಫಾಸ್ಟ್ ಫಿಲ್ಲಿಂಗ್ ಬೋರ್ಡು ಕಾಣುತ್ತಿದೆ. ನಿಜಾ. ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ಮ್ಯಾಕ್ಸ್ ಚಿತ್ರಕ್ಕೆ ತಮಿಳುನಾಡಿನಲ್ಲಿ ಹೆಚ್ಚಿನ ಸ್ಕ್ರೀನ್‌ಗಳು ಸಿಕ್ಕಿಲ್ಲ. ಆದರೆ, ಸಿಕ್ಕಿರುವ ಹನ್ನೊಂದು ಚಿತ್ರಮಂದಿರಗಳಲ್ಲಿಯೂ ಪ್ರೇಕ್ಷಕರ ರೆಸ್ಫಾನ್ಸ್ ಚೆನ್ನಾಗಿದೆ.

ಇನ್ನೂ ಮ್ಯಾಕ್ಸ್ ತೆಲುಗು ಮತ್ತು ತಮಿಳಿನಲ್ಲಿ ಕೇವಲ ಪ್ರೇಕ್ಷಕರ ಹೃದಯವನ್ನಷ್ಟೇ ಗೆದ್ದಿಲ್ಲ. ರಮೇಶ್ ಬಾಲಾ, ವಂಶಿ ಕಾಕಾ, ಪಿಆರ್‌ಓ ಸುರೇಶ್ ಹೀಗೆ ಅಲ್ಲಿನ ವಿಮರ್ಷಕರ ಹೃದಯವನ್ನು ಗೆದ್ದಿದೆ.

ಹೀಗೆ ಹೊರರಾಜ್ಯಗಳಲ್ಲಿ ಕೂಡ ಮಿಂಚುತ್ತಿರುವ ಕನ್ನಡದ ಮ್ಯಾಕ್ಸ್ ಚಿತ್ರದ ಅಬ್ಬರ ಕರುನಾಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿತ್ರಮಂದಿರದ ಸಂಖ್ಯೆಯಲ್ಲಿ ಸ್ಕ್ರೀನ್ ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಇನ್ನು ಸುದೀಪ್ ಅವರ ಈ ಮಾಸ್ ಅವತಾರವನ್ನು ಕಂಡು ಇವರ ಅಭಿಮಾನಿಗಳು ರಣಕೇಕೆಯನ್ನು ಹಾಕುತ್ತಿದ್ದಾರೆ. ಚಿತ್ರಮಂದಿರದಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂಭ್ರಮ ಹಂಚಿಕೊಳ್ಳುತ್ತಿದ್ಧಾರೆ. ಇನ್ನು ಕೇವಲ ಮ್ಯಾಕ್ಸ್ ಚಿತ್ರವನ್ನು ನೋಡಲು ಸಕುಟುಂಬ ಸಮೇತ ಅನೇಕರು ಚಿತ್ರಮಂದಿರಕ್ಕೆ ಬರುತ್ತಿರುವುದು ವಿಶೇಷ.

ಸದ್ಯ ಮ್ಯಾಕ್ಸ್ ಚಿತ್ರಕ್ಕೆ ಹೊರರಾಜ್ಯಗಳಲ್ಲಿ ಕೂಡ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಕರ್ನಾಟಕದಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯುತ್ತಿರುವ ಮ್ಯಾಕ್ಸ್ ಬೇರೆ ಭಾಷೆಯಲ್ಲಿ ಎಷ್ಟು ಹಣ ಗಳಿಸಲಿದೆ ಎನ್ನುವುದು ಸದ್ಯದ ಕುತೂಹಲ. ಈ ಕುತೂಹಲಕ್ಕೆ ಉತ್ತರ ಸದ್ಯದಲ್ಲಿಯೇ ಸಿಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X