ಕಿಚ್ಚ ಸುದೀಪ್ 'ಮ್ಯಾಕ್ಸ್' ಸೆನ್ಸಾರ್ ಮುಗೀತು; ರನ್ ಟೈಮ್ ಎಷ್ಟು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ 10 ದಿನ ಮಾತ್ರ ಬಾಕಿಯಿದೆ. ಸದ್ಯ ಸಿನಿಮಾ ಪ್ರಮೋಷನ್‌ಗೆ ಚಾಲನೆ ಕೊಡಲಾಗುತ್ತಿದೆ. ಇನ್ನು ಚಿತ್ರ ಸೆನ್ಸಾರ್ ಮುಗಿಸಿ ತೆರೆಗಪ್ಪಳಿಸಲು ಸಜ್ಜಾಗಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ.

ತಮಿಳು ಹಾಗೂ ಕನ್ನಡದಲ್ಲಿ 'ಮ್ಯಾಕ್ಸ್' ಸಿನಿಮಾ ನಿರ್ಮಾಣ ಆಗಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆ ಆಗಲಿದೆ. ಮತ್ತೊಮ್ಮೆ ಖಡಕ್ ಪಾತ್ರದಲ್ಲಿ ಅಬ್ಬರಿಸಲು ಸುದೀಪ್ ಅಣಿಯಾಗಿದ್ದಾರೆ.

Kichcha Sudeep s Max movie censor runtime audio launch event and more

ತಮಿಳಿನ ವಿಜಯ್ ಕಾರ್ತಿಕೇಯನ್ 'ಮ್ಯಾಕ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಲೈಪುಲಿ ಎಸ್ ತನು ಜೊತೆ ಕಿಚ್ಚ ಕ್ರಿಯೇಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದೆ. ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಇಲ್ಲಿ ಸುದೀಪ್‌ಗೆ ನಾಯಕಿ ಇರಲ್ಲ. ಒಂದು ರಾತ್ರಿಯಲ್ಲಿ ನಡೆಯುವ ಕತೆ ಇದು ಎನ್ನಲಾಗ್ತಿದೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಿಚ್ಚ ಅಬ್ಬರಿಸಿದ್ದಾರೆ.

'ಮ್ಯಾಕ್ಸ್' ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಪ್ರಮೋದ್ ಶೆಟ್ಟಿ, ಸುನಿಲ್, ಸಂಯುಕ್ತಾ ಹೊರನಾಡ್, ಉಗ್ರಂ ಮಂಜು ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈಗಾಗಲೇ ಎರಡು ಟೀಸರ್ ಹಾಗೂ ಒಂದು ಸಾಂಗ್ ರಿಲೀಸ್ ಆಗಿ ಸದ್ದು ಮಾಡಿದೆ. ಇದೀಗ ಚಿತ್ರದ ಆಡಿಯೋ ಲಾಂಚ್ ಈವೆಂಟ್‌ಗೆ ವೇದಿಕೆ ಸಿದ್ಧವಾಗಿದೆ.

ನಗರದ ಒರಾಯನ್ ಮಾಲ್ ಆವರಣದಲ್ಲಿ ಇಂದು(ಡಿಸೆಂಬರ್ 15) ಸಂಜೆ 'ಮ್ಯಾಕ್ಸ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳು ಚಿತ್ರದ ಇನ್ನುಳಿದ ಹಾಡುಗಳನ್ನು ಕೇಳಲು ಉತ್ಸುಕರಾಗಿದ್ದಾರೆ. ಇನ್ನು ಟ್ರೈಲರ್ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳನ್ನು ಕಾಡುತ್ತಿದೆ.

'ಮ್ಯಾಕ್ಸ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ರನ್‌ಟೈಮ್ 2 ಗಂಟೆ 23 ನಿಮಿಷ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ದೊಡ್ಡ ಸಿನಿಮಾಗಳ ರನ್‌ಟೈಮ್ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ ಕನ್ನಡದ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳ ಕಾಲಾವಧಿ ಎರಡೂವರೆ ಗಂಟೆ ದಾಟಿಲ್ಲ.

ಸದ್ಯ ವೀಕೆಂಡ್ ಬಿಗ್‌ಬಾಸ್ ಶೋ ಎಪಿಸೋಡ್ ಚಿತ್ರೀಕರಣ ಮುಗಿಸಿರುವ ಕಿಚ್ಚ 'ಮ್ಯಾಕ್ಸ್' ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಸಿದ್ಧರಾಗಿದ್ದಾರೆ. ಒರಾಯನ್ ಮಾನ್ (ಲೇಕ್ ಸೈಡ್) ಈವೆಂಟ್ ಪ್ಲ್ಯಾನ್ ನಡೀತಿದೆ. ಇತ್ತೀಚೆಗೆ ಆಡಿಯೋ ಲಾಂಚ್ ಕಾನ್ಸೆಪ್ಟ್ ಕಡಿಮೆ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್ ಟ್ರೆಂಡ್ ಶುರುವಾಗಿದೆ. 'ಮ್ಯಾಕ್ಸ್' ವಿಚಾರದಲ್ಲಿ ಅದು ಬದಲಾಗಿದೆ.

5 ದಿನಗಳ ಅಂತರದಲ್ಲಿ 'ಮ್ಯಾಕ್ಸ್' ಹಾಗೂ 'ಯುಐ' ಸಿನಿಮಾಗಳು ತೆರೆಗೆ ಬರ್ತಿವೆ. ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಉಪೇಂದ್ರ ದರ್ಬಾರ್ ಶುರುವಾಗಲಿದೆ. ಬಳಿಕ ಪಕ್ಕದ ನರ್ತಕಿ ಥಿಯೇಟರ್‌ನಲ್ಲಿ ಮ್ಯಾಕ್ಸಿಮಮ್ ಮನರಂಜನೆ ಕೊಡಲು 'ಮ್ಯಾಕ್ಸ್' ಬರ್ತಿದ್ದಾನೆ. ಡಿಸೆಂಬರ್ 25ಕ್ಕೆ ಕನ್ನಡದಲ್ಲಿ ಸಿನಿಮಾ ತೆರೆಗೆ ಬರಲಿದೆ. 2 ದಿನ ತಡವಾಗಿ ತೆಲುಗು, ತಮಿಳು ವರ್ಷನ್ ಪ್ರೇಕ್ಷಕರನ್ನು ರಂಜಿಸಲಿದೆ.

ಎರಡೂ ಸಿನಿಮಾಗಳ ಪ್ರಮೋಷನ್ ಕಮ್ಮಿ ಆಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ತಿಂಗಳಿಗೂ ಮುನ್ನವೇ ಪ್ರಮೋಷನ್ ಶುರುವಾಗುತ್ತದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿನ್, ಹೈದರಾಬಾದ್‌ನಲ್ಲಿ ಈವೆಂಟ್ ನಡೆಸಿ, ಸುದ್ದಿಗೋಷ್ಠಿ ನಡೆಸಿ ಚಿತ್ರವನ್ನು ತಲುಪಿಸುವ ಪ್ರಯತ್ನ ನಡೆಯುತ್ತದೆ. ಆದರೆ ಆ ಆರ್ಭಟ ಇಲ್ಲಿ ಕಾಣಿಸುತ್ತಿಲ್ಲ.

ಈ ವರ್ಷದ ಆರಂಭದಲ್ಲಿ ಕನ್ನಡ ಸಿನಿಮಾ ದರ್ಬಾರ್ ಕಮ್ಮಿ ಇತ್ತು. ಆದರೆ 'ಭೀಮ' ರಿಲೀಸ್ ಬಳಿಕ ಲೆಕ್ಕಾಚಾರ ಬದಲಾಯಿತು. 'ಕೃಷ್ಣಂ ಪ್ರಣಯ ಸಖಿ', 'ಬಘೀರ' ಹಾಗೂ 'ಭೈರತಿ ರಣಗಲ್' ಚಿತ್ರಗಳು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ವರ್ಷದ ಕೊನೆಗೆ 'ಯುಐ' ಹಾಗೂ 'ಮ್ಯಾಕ್ಸ್' ಅಬ್ಬರಕ್ಕೆ ವೇದಿಕೆ ಸಿದ್ಧವಾಗಿದೆ.

More from Filmibeat

English summary
Sudeep Starrer Max movie Runtime revealed;
Read more about: sudeep max sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X