ಮನರಂಜನೆಯ ಕಿಚ್ಚು ಹಚ್ಚಲು 'ಕಿಚ್ಚ' ರೆಡಿ, ಈ ದಿನದಿಂದ ಭಾರತದೆಲ್ಲೆಡೆ ಹೊರಡಲಿದೆ 'ಮ್ಯಾಕ್ಸ್' ಮೆರವಣಿಗೆ...!

ಒಂದು ಕಡೆ ಭೀಮ .. ಮತ್ತೊಂದು ಕಡೆ ಕೃಷ್ಣಂ ಪ್ರಣಯ ಸಖಿ .. ಇವೆರಡು ಚಿತ್ರಗಳ ಗೆಲುವು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ. ಕಳಾಹೀನವಾಗಿ, ನಿಸ್ತೇಜಗೊಂಡು ನೆಲಕ್ಕೊರಗಿದ್ದ ಕನ್ನಡ ಚಿತ್ರರಂಗ ಸದ್ಯಕ್ಕೆ ದುಬ್ಬುಕ್ಕಂತಾ ಎದ್ದು ನಿಂತುಕೊಂಡಿದೆ.

ಈ ವರ್ಷ ಮುಗಿಯಲು ಇನ್ನೇನು ಕೆಲ ತಿಂಗಳಿರುವ ಈ ಸಂದರ್ಭದಲ್ಲಿ ಎದ್ದು ನಿಂತ ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡವರ ಸಿನಿಮಾಗಳ ಬಿಡುಗಡೆಯ ಪರ್ವ ಕೂಡ ಆರಂಭವಾಗಲಿದೆ. ಡಾ.ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್, ಧ್ರುವಾ ಸರ್ಜಾ ಅಭಿನಯದ ಮಾರ್ಟಿನ್, ಉಪೇಂದ್ರ ನಿರ್ದೇಶನದ ಯುಐ, ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಿದ್ಧವಾಗಿವೆ. ಇದರ ನಡುವೆ ಮ್ಯಾಕ್ಸ್ ಕೂಡ ಮೈಕೊಡವಿ ಎದ್ದು ನಿಲ್ಲುವ ಸೂಚನೆ ಸಿಕ್ಕಿದೆ. ಮ್ಯಾಕ್ಸ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

kichcha-sudeeps-much-anticipated-film-max-is-set-to-release-across-india-on-this-date

ಹೌದು, ಸುದೀಪ್ .. ಅದ್ಯಾವಾಗ 'ಮ್ಯಾಕ್ಸ್' ಎಂಬ ಚಿತ್ರ ಶುರು ಮಾಡಿದರೋ, ಆ ಕ್ಷಣದಿಂದನೇ ಈ ಚಿತ್ರದ ಸುತ್ತ ಮುತ್ತ ಕುತೂಹಲ ಗರಿಗೆದರಿತ್ತು. ಇನ್ನೂ.. ಒಂದು ತಿಂಗಳ ಹಿಂದೆ ಬಿಡುಗಡೆಯಾದ ಟೀಸರ್ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ಇನ್ನೂ.. ಎಲ್ಲರಿಗೆ ಗೊತ್ತಿರುವಂತೆ ಈ ಸೆಪ್ಟೆಂಬರ್ ಎರಡರಂದು ಸುದೀಪ್ ಐವತ್ತೊಂದನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ 'ಮ್ಯಾಕ್ಸ್' ಸಿನಿಮಾ ಅವತ್ತೇ ತೆರೆಗೆ ಬರುತ್ತೆ ಎಂದು ಸುದೀಪ್ ಸೈನ್ಯ ಅಂದಾಜಿಸಿತ್ತು. ಆದರೆ ಅದಾಗಲಿಲ್ಲ.

ಆದರೆ ಈಗ ಕಾಲ ಕೂಡಿ ಬಂದಿದೆ. 'ಮ್ಯಾಕ್ಸ್' ಚಿತ್ರ ಇದೇ ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ. ಹೀಗೊಂದು ಸುದ್ದಿ ಸದ್ಯ ಪುಟ್ಟೇನಹಳ್ಳಿಯಿಂದ ಗಾಂಧಿನಗರದವರೆಗೆ ಗುಲ್ಲಾಗಿದೆ. ಹೌದು, ನಿಮಗೆ ಗೊತ್ತಿರಲಿ, ಶಿವಣ್ಣ ಅಭಿನಯದ ಭೈರತಿ ರಣಗಲ್ ಈ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರುತ್ತೆ ಎಂದು ಹೇಳಲಾಗಿತ್ತು. ಚಿತ್ರತಂಡ ಕೂಡ ಈ ಮಾತು ಹೇಳಿತ್ತು. ಆದರೆ ಈಗ ಭೈರತಿ ರಣಗಲ್ ಚಿತ್ರದ ಬಿಡುಗಡೆಯ ದಿನಾಂಕ ಮತ್ತೊಮ್ಮೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇನ್ನೂ, ಎಲ್ಲರಿಗೆ ಗೊತ್ತಿರುವಂತೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಬಿಡುಗಡೆಗೆ ಅಕ್ಟೋಬರ್ ಹತ್ತರಂದು ಮುಹೂರ್ತ ನಿಗದಿ ಮಾಡಲಾಗಿದೆ.

kichcha-sudeeps-much-anticipated-film-max-is-set-to-release-across-india-on-this-date

ರಿಯಲ್ ಸ್ಟಾರ್ ಉಪೇಂದ್ರ ಅವರ 'ಯುಐ' ಚಿತ್ರ ಕೂಡ ಅಕ್ಟೋಬರ್‌ನಲ್ಲಿಯೇ ಬಿಡುಗಡೆಯಾಗುತ್ತೆ ಎಂದು ಚಿತ್ರತಂಡ ಹೇಳಿದೆ. ಆದರೆ, ಅಕ್ಟೋಬರ್‌ನಲ್ಲಿ ಯಾವತ್ತು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಇನ್ನೂ.. 'ಮ್ಯಾಕ್ಸ್' .. 'ಮಾರ್ಟಿನ್' .. ಮತ್ತು 'ಯುಐ' ಮೂರು ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು.

ಹೀಗಾಗಿಯೇ ಮೂರು ಚಿತ್ರಗಳನ್ನು ಜೊತೆಯಾಗಿ ಅಥವಾ ಒಂದು ವಾರದ ಅಂತರದಲ್ಲಿ ಬಿಡುಗಡೆ ಮಾಡುವುದರಿಂದ ಕನ್ನಡದ ಚಿತ್ರಗಳಿಗೆ ಕನ್ನಡದ ಚಿತ್ರಗಳೇ ಮುಳ್ಳಾಗುವ ಸಾಧ್ಯತೆ ಇದೆ. ಚಿತ್ರಮಂದಿರದ ಸಮಸ್ಯೆ ಕಾಡುವ ಆತಂಕ ಇದೆ. ಇನ್ನೂ ಕರುನಾಡಿನಲ್ಲಿ ಪರಭಾಷೆಯ ಹಾವಳಿ ಹೇಗಿದೆ ಎನ್ನುವುದು ಎಲ್ಲರಿಗೆ ಗೊತ್ತಿರುವಂತಹದ್ದೇ. ಈ ಕಾರಣಕ್ಕೆ ಸೆಪ್ಟೆಂಬರ್ 27ಕ್ಕೆ 'ಮ್ಯಾಕ್ಸ್' ಕಣಕ್ಕೆ ಇಳಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎಂಬ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ.

kichcha-sudeeps-much-anticipated-film-max-is-set-to-release-across-india-on-this-date

ಸೆಪ್ಟೆಂಬರ್ 27ರಂದು ಮ್ಯಾಕ್ಸ್.. ಅಕ್ಟೋಬರ್ ಹತ್ತರಂದು ಮಾರ್ಟಿನ್.. ಆ ನಂತರ ಸಾಲಿನಲ್ಲಿ ಭೈರತಿ ರಣಗಲ್ ಮತ್ತು ಯುಐ ಬಂದರೆ ಪ್ರೇಕ್ಷಕರ ದೃಷ್ಟಿಯಿಂದ ಮತ್ತು ಚಿತ್ರರಂಗದ ಹಿತಾಸಕ್ತಿಯಿಂದ ಒಳ್ಳೇಯದು ಎಂಬ ಅಭಿಪ್ರಾಯ ಕೂಡ ಸಿನಿಮಾ ಪಂಡಿತರಿಂದ ವ್ಯಕ್ತವಾಗುತ್ತಿದೆ. ನಿಜವಾಗಿಯೂ ಮ್ಯಾಕ್ಸ್ ಸೆಪ್ಟೆಂಬರ್ 27ರಂದು ಬಿಡುಗಡೆಯಾಗುತ್ತಾ, ಉತ್ತರ ಸದ್ಯದಲ್ಲಿಯೇ ಸಿಗಲಿದೆ. ಸೆಪ್ಟೆಂಬರ್ 02ರಂದು ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಮ್ಯಾಕ್ಸ್ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

More from Filmibeat

Read more about: kichcha sudeep sudeep max
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X