ಅಬ್ಬಾ... ಅಂತೂ ಇಂತೂ ಸುದೀಪ್ ಫ್ಯಾನ್ಸ್ ನಿರಾಳ, ಮ್ಯಾಕ್ಸ್ ಬಿಡುಗಡೆಯ ದಿನಾಂಕ ಗೊತ್ತಾಯ್ತಾ..?

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಬಿಡುಗಡೆ ಯಾವಾಗ..? ಮ್ಯಾಕ್ಸಿಮಮ್ ಮನರಂಜನೆಯನ್ನು ಎದುರು ನೋಡ್ತಿರುವ ಕನ್ನಡ ಕಲಾಭಿಮಾನಿಗಳಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ ಇದು.

ಆದರೆ, ಇದಕ್ಕೆ ಉತ್ತರ ಇಲ್ಲಿಯವರೆಗೆ ಸಿಕ್ಕಿಲ್ಲ. ಈ ಕಾರಣಕ್ಕೆ ಬೇಸತ್ತ ಸುದೀಪ್ ಅವರ ಅಭಿಮಾನಿಗಳು ಚಿತ್ರದ ಬಿಡುಗಡೆಯ ದಿನಾಂಕವನ್ನು ಕೇಳುವುದನ್ನೇ ನಿಲ್ಲಿಸಿದ್ದಾರೆ. ಖುದ್ದು ಸುದೀಪ್ ಕೂಡ ಮ್ಯಾಕ್ಸ್ ಎಂಬ ಚಿತ್ರವನ್ನು ತಾವು ಮಾಡಿದ್ದನ್ನು ಮರೆತಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಆ ಪುಣ್ಯಾತ್ಮರು ಯಾವಾಗ ದೊಡ್ಡ ಮನಸು ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಸಮಸ್ತ ಭಕ್ತಗಣಕ್ಕೆ ನಿರಾಸೆಯನ್ನು ಮಾಡಿ ಕೈ ತೊಳೆದುಕೊಂಡಿದ್ದಾರೆ.

Kichcha Sudeep s Much-Awaited and Delayed Film Max Release Date to Be Announced on Nov 27

ಹೀಗಿರುವಾಗ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಮ್ಯಾಕ್ಸ್ ಚಿತ್ರದ ಕುರಿತು ಚಿತ್ರದ ನಿರ್ಮಾಪಕರಾದ ಶ್ರೀಯುತ ಕಲೈಪುಲಿ ಎಸ್ ತನು ಮಾಹಿತಿಯನ್ನು ನೀಡಿದ್ದಾರೆ. ನವೆಂಬರ್ 27ಕ್ಕೆ ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ. ಸಹಜವಾಗಿ ಈ ಸುದ್ದಿಯನ್ನು ಕೇಳಿ ಸುದೀಪಿಯನ್ಸ್ ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮ್ಯಾಕ್ಸ್ ಚಿತ್ರದ ಕುರಿತು ಮ್ಯಾಕ್ಸಿಮಮ್ ಟ್ವಿಟ್ ಮಾಡುತ್ತಿದ್ದಾರೆ. ಮ್ಯಾಕ್ಸ್ ಚಿತ್ರವನ್ನು ಟ್ರೆಂಡ್ ಕೂಡ ಮಾಡಿದ್ದಾರೆ.

ಉಳಿದಂತೆ ಮ್ಯಾಕ್ಸ್ ನಲ್ಲಿ ಮ್ಯಾಕ್ಸಿಮಮ್ ಸಂಖ್ಯೆಯಲ್ಲಿ ಇರುವುದು ಕನ್ನಡಿಗರೇ. ಉದಾಹರಣೆಗೆ ಸುಕೃತಾ ವಾಗ್ಲೇ, ಸಂಯುಕ್ತ ಹೊರನಾಡು, ಉಗ್ರಂ ಮಂಜು. ಅನಿರುದ್ಧ್ ಭಟ್. ಇನ್ನೂ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.ಕಲಾ ನಿರ್ದೇಶಕ ಶಿವಕುಮಾರ್ ಅವರದ್ದಾದರೆ, ಶೇಖರ್ ಚಂದ್ರ ಚಿತ್ರವನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಇರುವ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್ ‌ಕೂಡ ಇದ್ದಾರೆ. ಇಳವರಸು, ಸುನಿಲ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಇನ್ನೂ 'ತುಪಾಕಿ'.. 'ಕಬಾಲಿ'.. 'ಅಸುರನ್'.. 'ಕರ್ಣನ್'.. 'ನಾರಪ್ಪ'.. ಹೀಗೆ ಒಂದಕ್ಕಿಂತ ಒಂದು ಚಿತ್ರಗಳನ್ನೂ ತಮಿಳಿನಲ್ಲಿ ನಿರ್ಮಾಣ ಮಾಡಿರುವ ಕಲಿಪುಲಿ ಎಸ್ ತನು ಈ ಚಿತ್ರವನ್ನು ನಿರ್ಮಾಣ ಮಾಡಿದ್ಧಾರೆ. ಆದರೆ ಹೀಗೆ ಒಂದಿಕ್ಕಿಂತ ಒಂದು ಚೆಂದದ ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಹೊಂದಿರುವ ಕಲಿಪುಲಿ ಎಸ್ ತನು ಮ್ಯಾಕ್ಸ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಬಹಿರಂಗ ಪಡಿಸಿಲ್ಲ, ಇಲ್ಲಿಯವರೆಗೆ ಮೀನಾ ಮೇಷ ಎಣಿಸಿದ್ದೇಕೆ ಎನ್ನುವುದಕ್ಕೆ ಉತ್ತರ ಅವರೇ ನೀಡಬೇಕು. ಇನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಗೆ ಬಹುತೇಕ ಶೂಟಿಂಗ್​ನಡೆದಿರುವುದು ವಿಶೇಷ.

ಒಟ್ನಲ್ಲಿ ಸದ್ಯಕ್ಕೆ ಸುದೀಪ್ ಅವರ ಮಹತ್ವಕಾಂಕ್ಷೆಯ ಚಿತ್ರ ಮ್ಯಾಕ್ಸ್ ಚಿತ್ರದ ಕುರಿತು ಮಹತ್ವದ ಅಪ್‌ಡೇಟ್‌ನ ಈ 27ಕ್ಕೆ ನೀಡುವುದಾಗಿ ಚಿತ್ರತಂಡ ಹೇಳಿದೆ. ಈ ಬಾರಿ ನಿಜಕ್ಕೂ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ರಿವೀಲ್ ಮಾಡುತ್ತಾ, ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷದ ಆರಂಭದಲ್ಲಾದರೂ ಚಿತ್ರ ಬಿಡುಗಡೆಯಾಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಮ್ಯಾಕ್ಸ್ ಚಿತ್ರದ ಪ್ರಚಾರವನ್ನು ಸುದೀಪ್ ಮಾಡ್ತಾರಾ ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಈಗ ಕಾಡುತ್ತಿದೆ.

More from Filmibeat

Read more about: kichcha sudeep max sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X