ಬಿಗ್‌ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ಸಿಕ್ಕ ಸಂಭಾವನೆ ಎಷ್ಟು? ಕಳೆದ 3 ಸೀಸನ್‌ನಿಂದ ಪಡೆದಿದ್ದೆಷ್ಟು?

By ಫಿಲ್ಮಿಬೀಟ್ ಡೆಸ್ಕ್

ಬಿಗ್‌ ಬಾಸ್ ಕನ್ನಡ ಸೀಸನ್ 11 ಸೂಪರ್‌ ಸಕ್ಸಸ್ ಕಂಡಿದೆ. ಆರಂಭದಲ್ಲಿ ಕೊಂಚ ಗೊಂದಲ ಅಂತ ಅನಿಸಿದ್ದರೂ ತಕ್ಷಣಕ್ಕೆ ಟ್ರ್ಯಾಕ್‌ಗೆ ಮರಳಿತ್ತು. ಪ್ರತಿ ಬಾರಿನೂ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಎಷ್ಟು ಗಮನ ಸೆಳೆಯುತ್ತಾರೋ ಅಷ್ಟೇ ಗಮನ ಅಟ್ರ್ಯಾಕ್ ಮಾಡೋದು ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್. ಇವರ ನಿರೂಪಣೆಗಂತಾನೇ ಶೋ ನೋಡುವವರ ಸಂಖ್ಯೆ ಅಪಾರ.

ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ ಆರಂಭ ಆದ ದಿನದಿಂದಲೂ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ. ಒಂದೇ ಒಂದು ಸೀಸನ್ ಅನ್ನೂ ಮಿಸ್ ಮಾಡಿಲ್ಲ. ವೀಕ್ಷಕರು ಕೂಡ ಮಿಸ್ ಮಾಡಿಕೊಂಡಿಲ್ಲ. ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳೊಂದಿಗೆ ಕಿಚ್ಚನ ಸಂಭಾಷಣೆ, ಪ್ರತಿಕ್ರಿಯೆ, ತಮಾಷೆ ಎಲ್ಲವನ್ನೂ ಜನರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಆದರೆ, 12ನೇ ಸೀಸನ್‌ ಕಿಚ್ಚ ನಿರೂಪಣೆ ಮಾಡೋದಿಲ್ಲ ಅಂತ ತೀರ್ಮಾನ ಮಾಡಿದ್ದಾರೆ.

Kichcha Sudeep s remuneration for hosting Bigg Boss Kannada

ಈಗ ಇದ್ದಕ್ಕಿಂತ ಹಾಗೇ ಬಿಗ್‌ ಬಾಸ್‌ಗೆ ಕಿಚ್ಚ ಸುದೀಪ್ ಪಡೆಯುತ್ತಿದ್ದ ಸಂಭಾವನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಒಂದು ಸೀಸನ್ ನಿರೂಪಣೆ ಮಾಡುವುದಕ್ಕೆ ಸುದೀಪ್ ಎಷ್ಟು ಸಂಭಾವನೆ ಪಡೆಯುತ್ತಾರೆ? ಅನ್ನೋದು ನೆಟ್ಟಿಗರ ಪ್ರಶ್ನೆ. ಅಷ್ಟಕ್ಕೂ ಕಿಚ್ಚ ಸುದೀಸ್‌ಗೆ ಪ್ರತಿ ಸೀಸನ್‌ಗೆ ಸಿಗುತ್ತಿದ್ದ ಸಂಭಾವನೆ ಎಷ್ಟು? ಕಳೆದ ಮೂರು ಸೀಸನ್‌ಗಳಿಗೆ ಸುದೀಪ್ ಪಡೆದಿದ್ದೆಷ್ಟು?

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅನ್ನು ಕಿಚ್ಚ ಸುದೀಪ್ ಬಿಟ್ಟು ಊಹಿಸಿಕೊಳ್ಳುವುದಕ್ಕೆ ಅಸಾಧ್ಯ. ಅಂತಹದ್ರಲ್ಲಿ ಸ್ವತ: ಸುದೀಪ್ ಅವರೇ 12ನೇ ಸೀಸನ್ ಅನ್ನು ನಿರೂಪಣೆ ಮಾಡುವುದಿಲ್ಲ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಂದಿನಿಂದ ಅವರ ಅಭಿಮಾನಿಗಳು ಹಾಗೂ ವೀಕ್ಷಕರು ಕಿಚ್ಚನ ನಿರೂಪಣೆ ಇಲ್ಲದೆ ಬಿಗ್ ಬಾಸ್ ಶೋ ನೋಡುವುದಿಲ್ಲ ಅಂತ ಹಠ ಹಿಡಿದು ಕೂತಿದ್ದಾರೆ. ಇವರ ಒತ್ತಾಯಕ್ಕೆ ಮಣಿದು 12ನೇ ಸೀಸನ್‌ಗೆ ಮರಳುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

Take a Poll

ಇದೆಲ್ಲ ಏನೇ ಇದ್ದರೂ ಕಿಚ್ಚ ಸುದೀಪ್ ಒಂದು ಶೋ ಎಷ್ಟು ಸಂಭಾವಣೆ ಪಡೆಯುತ್ತಿದ್ದರು. ಸಹಜವಾಗಿ ಈ ಕುತೂಹಲವಂತೂ ಇದ್ದೇ ಇರುತ್ತೆ. ಕಿಚ್ಚ ಸುದೀಪ್ ಕಳೆದ ಮೂರು ಸೀಸನ್‌ಗೆ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಂದರೆ, ಕಿಚ್ಚ ಸುದೀಪ್ ಕಳೆದ ಮೂರು ಸೀಸನ್‌ಗಳಲ್ಲಿ ಪ್ರತಿ ಸೀಸನ್‌ಗೆ ಸರಾಸರಿ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಬಹುದು. ಅಸಲಿಗೆ ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ. ಕಿಚ್ಚ ಸುದೀಪ್ ಆಗಲಿ, ಕಲರ್ಸ್ ಕನ್ನಡ ಆಗಲಿ ಈ ಬಗ್ಗೆ ಅಧಿಕೃತವಾಗಿ ಇದೂವರೆಗೂ ಮಾಹಿತಿಯನ್ನು ಹಂಚಿಕೊಂಡಿಲ್ಲ.

Kichcha Sudeep s remuneration for hosting Bigg Boss Kannada

ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿಯುತ್ತಾರೆ ಅನ್ನೋದ ಸುದ್ದಿ ಹೊರ ಬಿದ್ದಾಗ ಸಂಭಾವನೆ ವಿಷಯವನ್ನೂ ಚರ್ಚೆ ಮಾಡಲಾಗಿತ್ತು. ಸುದೀಪ್ ಕೇಳಿದಷ್ಟು ಸಂಭಾವನೆ ಸಿಕ್ಕಿಲ್ಲ. ಈ ಕಾರಣಕ್ಕೆ ನಿರೂಪಣೆಯಿಂದ ಹಿಂದೆ ಸರಿಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. 12ನೇ ಸೀಸನ್‌ನ ನಿರೂಪಣೆ ಮಾಡದೇ ಇರೋದಕ್ಕೆ ಸಂಭಾವನೆ ಕಾರಣ ಅಲ್ಲ. ಸಿನಿಮಾ ಕಡೆ ಗಮನ ಹರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಲರ್ಸ್ ಕನ್ನಡದಿಂದ ಒಳ್ಳೆಯ ಸಂಭಾವನೆ ಸಿಗುತ್ತಿದೆ ಎಂದು ಹೇಳಿದ್ದರು.

ಸುದೀಪ್ 'ಮ್ಯಾಕ್ಸ್' ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಕ್ಸಸ್ ಬೆನ್ನಲ್ಲೇ ಸುದೀಪ್ 'ಬಿಲ್ಲ ರಂಗ ಬಾಷಾ' ಅವತಾರವೆತ್ತಿದ್ದಾರೆ. ಅನುಪ್ ಭಂಡಾರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕನಕಪುರ ಭಾಗದಲ್ಲಿ ಸಿನಿಮಾಗೆ ಸೆಟ್ ಹಾಕಲಾಗುತ್ತಿದ್ದೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಬಿಗ್‌ಬಾಸ್‌ ನಿರೂಪಣೆಯಿಂದ ಹಿಂದೆ ಸರಿದಿದ್ದರಿಂದ ವರ್ಷಕ್ಕೆ ಎರಡು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಕಲರ್ಸ್ ಕನ್ನಡದ 12ನೇ ಸೀಸನ್‌ಗೂ ಕಿಚ್ಚ ಸುದೀಪ್ ಅವರನ್ನೇ ಕರೆದುಕೊಂಡು ಬರುವ ಪ್ರಯತ್ನ ಮಾಡುವುದಾಗಿ ಹೇಳಿಕೊಂಡಿದೆ.

More from Filmibeat

English summary
Kichcha Sudeep's remuneration for hosting Bigg Boss Kannada;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X