ಡೆವಿಲ್ ಟ್ರೇಲರ್ ಧಗಧಗ ; ಇನ್ಮುಂದೆ ಶುರು ಮಾರ್ಕ್‌ ಅಬ್ಬರ - ಡಿಸೆಂಬರ್ ಕದನ, ಅಭಿಮಾನಿಗಳಿಗೆ ರಸದೌತಣ

ಡಿಸೆಂಬರ್ ಕನ್ನಡ ಚಿತ್ರರಂಗಕ್ಕೆ ''ಲಕ್ಕಿ'' ಎನ್ನುವುದು ಹಲವರ ನಂಬಿಕೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಯಾಕೆಂದರೆ.. ಡಿಸೆಂಬರ್‌ನಲ್ಲಿ ತೆರೆಗೆ ಬಂದ ಹಲವಾರು ಕನ್ನಡದ ಚಿತ್ರಗಳು ಚಿನ್ನದ ಬೆಳೆ ಬೆಳೆದಿವೆ. ''ಮುಂಗಾರು ಮಳೆ''ಯಿಂದ ಹಿಡಿದು ''ಕಿರಿಕ್ ಪಾರ್ಟಿ''ಯವರೆಗೆ.. ''ಕಾಟೇರ''ದಿಂದ ಹಿಡಿದು ''ಮ್ಯಾಕ್ಸ್‌''ವರೆಗೆ.. ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಹಲವು ಸಿನಿಮಾಗಳು ಬ್ಲಾಕ್‌ ಬಸ್ಟರ್ ಆಗಿವೆ.

ಈ ಹಿನ್ನೆಲೆ.. ಡಿಸೆಂಬರ್ ಬಂದರೆ ಸಾಕು, ಕನ್ನಡ ಚಿತ್ರದಲ್ಲಿ ನೂಕು ನುಗ್ಗಲಿನ ವಾತಾವರಣ ಸೃಷ್ಟಿಯಾಗುತ್ತೆ. ಅದರಲ್ಲಿಯೂ ಕಳೆದ ಕೆಲ ವರ್ಷಗಳಿಂದಂತೂ ಡಿಸೆಂಬರ್‌ಗೆ ಭಾರೀ ಡಿಮ್ಯಾಂಡ್‌ ಇದೆ. ದೊಡ್ಡ ದೊಡ್ಡ ಸ್ಟಾರ್‌ಗಳೆಲ್ಲಾ ತಮ್ಮ ಚಿತ್ರ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಾರೆ.

KICHCHA SUDEEP S VENGEANCE IS HERE The MARK Trailer Drops on December 7

ಈ ವರ್ಷ ಕೂಡ ಪರಿಸ್ಥಿತಿ ಭಿನ್ನವೇನು ಇಲ್ಲ. ಕೇವಲ ಎರಡೇ ವಾರದಲ್ಲಿ ಮೂರು ದೊಡ್ಡ ಚಿತ್ರಗಳು ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿವೆ. ಈ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಎಷ್ಟರ ಮಟ್ಟಿಗೆ ಪೂರಕವಾಗಿರಲಿದೆ.. ಮಾರಕವಾಗಿರಲಿದೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆಯಾದರೂ
ನಿನ್ನೆಯಷ್ಟೇ (ಡಿಸೆಂಬರ್ 5) ''ಡೆವಿಲ್'' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಭಿಮಾನಿಗಳ ಹೃದಯ ಗೆದ್ದಿದೆ. ಯೂಟ್ಯೂಬ್‌ನಲ್ಲಿ ಅಕ್ಷರಶಃ ಧಗಧಗಿಸುತ್ತಿದೆ. ಈಗ ''ಮಾರ್ಕ್‌'' ಸರದಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇದ್ದರೂ ಕೂಡ ಅವರ ''ಡೆವಿಲ್'' ಚಿತ್ರವನ್ನು ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಡಿಸೆಂಬರ್ 11ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ದರ್ಶನ್ ಅವರ ಅನುಪಸ್ಥಿತಿಯಲ್ಲಿಯೇ ಚಿತ್ರತಂಡ ಪ್ರಚಾರ ಮಾಡುತ್ತಿದ್ದು ಚಿತ್ರದ ಟ್ರೇಲರ್‌ನ ಬಿಡುಗಡೆ ಮಾಡಿದೆ. ದರ್ಶನ್ ಅವರ ಭಕ್ತಗಣ ಹುಚ್ಚೆದ್ದು ಕುಣಿಯುವಂತೆ ಮಾಡುವಲ್ಲಿ ಯಶಸ್ವಿಯೂ ಆಗಿದೆ.

ಈಗ ''ಡೆವಿಲ್'' ಚಿತ್ರದ ಟ್ರೇಲರ್ ಬಿಡುಗಡೆಯಾದ ಎರಡು ದಿನದ ನಂತರ ಸುದೀಪ್ ಕೂಡ ತಮ್ಮ ಮಹತ್ವಕಾಂಕ್ಷೆಯ ಸಿನಿಮಾ ''ಮಾರ್ಕ್'' ಚಿತ್ರದ ಟ್ರೇಲರ್‌ನ್ನ ಇದೇ ಡಿಸೆಂಬರ್ 7ರಂದು ಅಂದರೆ ನಾಳೆ ಬೆಳಿಗ್ಗೆ 11-58ಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಸಹಜವಾಗಿ ಈ ಸುದ್ದಿಯನ್ನು ಕೇಳಿ ಸುದೀಪ್ ಅವರ ಅಭಿಮಾನಿ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಹಲವರು ''ಮಾರ್ಕ್‌'' ಟ್ರೇಲರ್ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು ತಮ್ಮ ಎಕ್ಸಾಯಟ್ಮೆಂಟ್‌ನ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಟ್ರೇಲರ್‌ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನುಳಿದಂತೆ ''ಮಾರ್ಕ್‌'', ಪಕ್ಕದ ಮನೆಯ ನಿರ್ದೇಶಕ ವಿಜಯ್ ಕಾರ್ತಿಕೆಯನ್ ಜೊತೆ ಸೇರಿ ಸುದೀಪ್ ಮಾಡಿರುವ ಎರಡನೇ ಮಹಾಯಜ್ಞ. ''ಪ್ಯಾನ್ ಇಂಡಿಯಾ'' ಲೆವಲ್‌ನಲ್ಲಿ ಇದೇ ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಸುದೀಪ್ ಅವರ ಜೊತೆ ನವೀನ್ ಚಂದ್ರ.. ದೀಪ್ಶಿಕಾ.. ಅರ್ಚನಾ ಕೊಟ್ಟಿಗೆ.. ರೋಶಿನಿ ಪ್ರಕಾಶ್ ಹಾಗೂ ನಿಶ್ವಿಕಾ ನಾಯ್ಡು ''ಮಾರ್ಕ್'' ಚಿತ್ರದ ತಾರಾಗಣದಲ್ಲಿದ್ದಾರೆ. ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿದ್ದಾರೆ.

kichcha-sudeeps-vengeance-is-here-the-mark-trailer-drops-on-december-7

ಶೇಖರ್ ಚಂದ್ರ ಕ್ಯಾಮರಾ ಕಣ್ಣಿನಲ್ಲಿ ಚಿತ್ರ ಸೆರೆಯಾಗಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿಶೇಷ ಅಂದರೆ ಸುದೀಪ್ ಅವರ ಒಂದ್ಕಾಲದ ಅತ್ಯಾಪ್ತ ಸ್ನೇಹಿತ ದರ್ಶನ್ ಅವರ ''ಡೆವಿಲ್'' ಚಿತ್ರಕ್ಕೂ ಕೂಡ ಇವರದ್ದೇ ಸಂಗೀತ ಇದೆ. ಕಾಲಿವುಡ್‌ನ ಪ್ರಖ್ಯಾತ ನಿರ್ಮಾಣ ಸಂಸ್ಥೆಯಲ್ಲೊಂದಾದ ಸತ್ಯಜ್ಯೋತಿ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಕಿಚ್ಚ ಸುದೀಪ್ ಕೂಡ ಚಿತ್ರಕ್ಕೆ ಕಾಸು ಹೂಡಿದ್ದಾರೆ.

ಒಟ್ನಲ್ಲಿ ಸದ್ಯ ನಾಳೆ ( ಡಿಸೆಂಬರ್ 7 ) ''ಮಾರ್ಕ್‌' ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ''ಡೆವಿಲ್‌'' ಚಿತ್ರ ಟ್ರೇಲರ್ ಮೂಲಕ ಸೃಷ್ಟಿಸಿರುವ ದಾಖಲೆಗಳನ್ನು ''ಮಾರ್ಕ್‌'' ಮುರಿಯುತ್ತಾ..? ಇವೆರಡು ಚಿತ್ರಗಳ ಫಲಿತಾಂಶ ಬಾಕ್ಸಾಫೀಸ್‌ನಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The official trailer for Kichcha Sudeep’s upcoming film, 'MARK,' is set for release on December 7. Get all the details on this much-awaited Christmas release now!
Read more about: sudeep trailer filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X