Kichcha46: "ಮೂರು ಕಥೆ ರೆಡಿ ಇದೆ ಆದ್ರೆ".. ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸುದೀಪ್ ಬಹಿರಂಗ ಪತ್ರ
'ವಿಕ್ರಾಂತ್ ರೋಣ' ತೆರೆಕಂಡು 8 ತಿಂಗಳು ಕಳೆದ್ರೂ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಇದೇ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಾನೆ ಇದೆ. ಅನೂಪ್ ಭಂಡಾರಿ ಅಥವಾ ವೆಂಕಟ್ ಪ್ರಭು ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ನಟಿಸ್ತಾರೆ ಎನ್ನಲಾಗ್ತಿದೆ. ಆದರೆ ಅಧಿಕೃತವಾಗಿ ಯಾವುದೇ ಸಿನಿಮಾ ಘೋಷಣೆ ಆಗಿಲ್ಲ. ಈ ಬಗ್ಗೆ ಸುದೀಪ್ ಪತ್ರ ಬರೆದಿದ್ದಾರೆ.
"ನನ್ನ ಎಲ್ಲಾ ಸ್ನೇಹಿತರಿಗೆ ಹಾಯ್..
"ಕಿಚ್ಚ 46" (ನೀವೆಲ್ಲರೂ ಇದನ್ನು ಕರೆಯುತ್ತಿರುವ ರೀತಿಯಲ್ಲಿ) ಸಿನಿಮಾ ಕುರಿತು ನಿಮ್ಮ ಟ್ವೀಟ್‌ಗಳು, ಮೀಮ್‌ಗಳು ನನಗೆ ಅರ್ಥವಾಗುತ್ತಿದೆ. ಇದು ನನಗೆ ಬಹಳ ವಿಶೇಷ ಎನಿಸಿತು. ಜೊತೆಗೆ ಬಹಳ ಇಷ್ಟವಾಯಿತು. ಧನ್ಯವಾದಗಳು. ಹಾಗಾಗಿ ಸಣ್ಣ ಸ್ಪಷ್ಟನೆ ನೀಡುತ್ತಿದ್ದೇನೆ.

"ನಾನು ಕೊಂಚ ಬ್ರೇಕ್ ತೆಗೆದುಕೊಂಡೆ. ಇದು ನನ್ನ ಮೊದಲ ಬ್ರೇಕ್. ವಿರಾಮವಾಗಿದೆ. 'ವಿಕ್ರಾಂತ್ ರೋಣ' ನಂತರ ನನಗೆ ಈ ಬ್ರೇಕ್ ಬೇಕಾಗಿತ್ತು. ಕೋವಿಡ್ ಮತ್ತು ದೀರ್ಘಾವಧಿಯ (OTT ಹಾಗೂ ಟಿವಿ)ಬಿಗ್‌ಬಾಸ್ ಶೆಡ್ಯೂಲ್ ಕೊಂಚ ವಿರಾಮ ಬೇಕಾಗಿತ್ತು. ನನ್ನ ಬ್ರೇಕ್ ಅನ್ನು ನನಗೆ ಸಂತೋಷ ತರುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಕ್ರಿಕೆಟ್, ನಿಜವಾಗಿಯೂ ರಿಲ್ಯಾಕ್ಸ್ ನೀಡುವಂತದ್ದು ಮತ್ತು ಆ ಝೋನ್‌ನಲ್ಲಿ ನಾನು ಖುಷಿಯಿಂದ ಇರುತ್ತೇನೆ. KCC ಮತ್ತು ಕರ್ನಾಟಕ ಬುಲ್ಡೋಜರ್ಸ್ ತಂಡದ ಜೊತೆಗೆ ಕಳೆದ ಸಮಯ ಖುಷಿ ತಂದಿದೆ. ನಿಜಕ್ಕೂ ಇದು ಒಳ್ಳೆ ಬ್ರೇಕ್ ಮತ್ತು ಈ ಸಮಯವನ್ನು ಉತ್ತಮವಾಗಿ ಕಳೆದಿದ್ದೇನೆ.

ಆದಾಗ್ಯೂ ಸ್ಕ್ರಿಪ್ಟ್ ಡಿಸ್ಕಷನ್, ಸಿನಿಮಾಗಳ ಕುರಿತ ಚರ್ಚೆ ನನ್ನ ದೈನಂದಿನ ಜೀವನದ ಭಾಗವಾಗಿತ್ತು. ಮೂರು ಸ್ಕ್ರಿಪ್ಟ್‌ಗಳು ಫೈನಲ್ ಆಗಿದೆ. ಅಂದರೆ 3 ಸಿನಿಮಾಗಳನ್ನು ಕನ್ಫರ್ಮ್ ಆಗಿದೆ. ಮೂರು ಸಿನಿಮಾಗಳು ಹೆಚ್ಚಿನ ಹೋಮ್‌ವರ್ಕ್ ಹೇಳ್ತಿದೆ. ಹಾಗಾಗಿ ಭಾರೀ ತಯಾರಿ ನಡೀತಿದೆ. ಈ ಮೂರು ಸಿನಿಮಾ ತಂಡಗಳು ಅದಕ್ಕಾಗಿ ಹಗಳಿರುವ ಶ್ರಮಿಸುತ್ತಿವೆ. ಆದಷ್ಟು ಬೇಗ ಸಿನಿಮಾಗಳನ್ನು ಅನೌನ್ಸ್ ಮಾಡುತ್ತೇನೆ." ಎಂದು ಸುದೀಪ್ ಬರೆದುಕೊಂಡಿದ್ದಾರೆ.


Click it and Unblock the Notifications











