For Quick Alerts
  ALLOW NOTIFICATIONS  
  For Daily Alerts

  'ಕಿಚ್ಚನ ರಾಜಕುಮಾರಿ' ಕಿಚ್ಚನ ಪುತ್ರಿಗೋಸ್ಕರ ಸ್ಪೆಷಲ್ ಸಾಂಗ್ ಮಾಡಿದ ಅಭಿಮಾನಿಗಳು

  |

  ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರವನ್ನು ಡಾಟರ್ಸ್ ಡೇ ( ಹೆಣ್ಣುಮಕ್ಕಳ ದಿನ ) ಎಂದು ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷ ಸೆಪ್ಟೆಂಬರ್ 25ರಂದು ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದ್ದು, ಈ ವಿಶೇಷ ದಿನದ ಪ್ರಯುಕ್ತ ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪುತ್ರಿ ಸಾನ್ವಿ ಸುದೀಪ್ ಕುರಿತು ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.

  ಹೌದು, ಇದೇ ಭಾನುವಾರದಂದು ಬೆಳಗ್ಗೆ 10.05ಕ್ಕೆ 'ಕಿಚ್ಚನ ರಾಜಕುಮಾರಿ' ಎಂಬ ವಿಶೇಷ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡನ್ನು ಯೋಗಿ ಎಂ ವಿಜಿ ಎಂಬುವವರು ಬರೆದಿದ್ದರೆ, ಸೌಮ್ಯ ಮಂಜುನಾಥ್ ಹಾಗೂ ಮಂಜುನಾಥ್ ಹೊಸವಳ್ ಎಂಬುವವರು ಈ ಹಾಡಿಗೆ ದನಿ ನೀಡಿದ್ದಾರೆ ಮತ್ತು ಮಂಜುನಾಥ್ ಹೊಸವಳ್ ಅವರೇ ಹಾಡಿಗೆ ಸಂಗೀತವನ್ನೂ ಸಹ ನೀಡಿದ್ದಾರೆ.

  ಮೈಸೂರು: ಯುವ ದಸರಾ ಸಂಭ್ರಮ ಹೆಚ್ಚಿಸಲಿದ್ದಾರೆ ಕಿಚ್ಚ ಸುದೀಪ್!ಮೈಸೂರು: ಯುವ ದಸರಾ ಸಂಭ್ರಮ ಹೆಚ್ಚಿಸಲಿದ್ದಾರೆ ಕಿಚ್ಚ ಸುದೀಪ್!

  ಇನ್ನು ಈ ಹಾಡನ್ನು ಕಿಚ್ಚ ಸುದೀಪ್ ಅವರ ಸಹೋದರಿ ಸುಜಾತಾ ಸಂಜೀವ್ ಅವರು ಬಿಡುಗಡೆಗೊಳಿಸಲಿದ್ದು, ಬ್ಲೀಡ್ ಫಾರ್ ಕಿಚ್ಚ ಎಂಬ ಸುದೀಪ್ ಅವರ ಅಭಿಮಾನಿ ಬಳಗ ಈ ಹಾಡನ್ನು ಸಮರ್ಪಿಸುತ್ತಿದೆ.

  ಕಿಚ್ಚ ಸುದೀಪ್ ಅವರ ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಪ್ಪತ್ತೂ ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಹಾಗೂ ಟ್ವಿಟರ್‌ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

  English summary
  Kichchana Rajakumari fanmade song dedicating to Kichcha Sudeep daughter Sanvi Sudeep to release on Daughter's day. Read on
  Saturday, September 24, 2022, 9:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X