twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನ ಮನ್ ಕಿ ಬಾತ್ ಕೇಳೋರ್ಯಾರು...

    By ಜೀವನರಸಿಕ
    |

    ಸುದೀಪ್. ಸಿಂಹದಂತಹಾ ಗಾಂಭೀರ್ಯ, ನಡೆಯಲ್ಲಾಗ್ಲಿ ನುಡಿಯಲ್ಲಾಗ್ಲಿ ಎಂತಹವರೂ ಒಂದ್ಸಾರಿ ತಲೆ ಎತ್ತಿ ಗೌರವಕೊಟ್ಟು ಮಾತಾಡಿಸ್ಬೇಕು ಅನ್ನಿಸುವಂತಹಾ ವ್ಯಕ್ತಿತ್ವ.ಸಿನಿಮಾದಿಂದ ಇಂತಹಾ ವ್ಯಕ್ತಿತ್ವ ಬೆಳೆಸಿಕೊಂಡ ಕಿಚ್ಚನಿಗೆ ಸಿನಿಮಾದಿಂದಲೇ ಎಲ್ಲವೂ ಆಗ್ಬೇಕಿಲ್ಲ.ಎಂಜಿನಿಯರಿಂಗ್ ಓದಿದ ಸುದೀಪ್ ಸಿನಿಮಾದಲ್ಲಿ ಬೆಳೀಬೇಕು ಅಂತ ಕನಸು ಕಂಡು ಬಂದಿದ್ದ ಕನಸುಗಾರನೂ ಅಲ್ಲ. ಅಥವಾ ಸಿನಿಮಾದ ಯಾವ ಬ್ಯಾಗ್ರೌಂಡು ಅವ್ರ ಫ್ಯಾಮಿಲಿಗೆ ಇಲ್ಲ.[ಸುದೀಪ್ ಗಾಗಿ ಚೋರರ ಕಥೆ ಹೆಣೆಯುತ್ತಿರುವ ರಕ್ಷಿತ್]

    ಇನ್ನು ಸಿನಿಮಾದಿಂದಲೇ ಗಳಿಸ್ಬೇಕು ಜೀವನ ಮಾಡ್ಬೇಕು ಅನ್ನೋ ಸ್ಥಿತಿ ಈಗಲೂ ಇಲ್ಲ. ಕಿಚ್ಚ ಹುಟ್ಟೋ ಮೊದಲು ಖಂಡಿತಾ ಇರ್ಲಿಲ್ಲ. ಸುದೀಪ್ ತಂದೆ ಸಂಜೀವ್ ಸರೋವರ್ ಬ್ಯುಸಿನೆಸ್ಮನ್. ಬೆಂಗಳೂರಲ್ಲಿ ಹಲವು ಬ್ಯುಸಿನೆಸ್ ಇರೋ ಸುದೀಪ್ ಸಿನಿಮಾದ ಕಾಸಿಲ್ಲದೇನೂ ಕೋಟ್ಯದೀಶ್ವರ.[ಯಾರ್ರಿ ಹೇಳಿದ್ದು ಸುದೀಪ್ ಕನ್ನಡ ಚಿತ್ರರಂಗ ತೊರೀತಾರಂತ?]

    ಆದ್ರೂ ಸಿನಿಮಾ ನನಗೆ ದೊಡ್ಡ ಹೆಸ್ರು ತಂದುಕೊಟ್ಟಿದೆ. ಕೋಟ್ಯಂತರ ಜನ್ರ ಪ್ರೀತಿಯನ್ನ ಕೊಟ್ಟಿದೆ. ಅದಕ್ಕಾಗಿ ಸಿನಿಮಾದಲ್ಲೇ ಇದ್ದು ಏನನ್ನಾದ್ರೂ ಸಾಧಿಸ್ಬೇಕು ಅನ್ನೋ ಕಿಚ್ಚು ಸುದೀಪ್ರಲ್ಲಿದೆ. [ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!]

    ಇಷ್ಟೆಲ್ಲಾ ಹೇಳೋಕೆ ಕಾರಣ ಇತ್ತೀಚೆಗೆ ಕನ್ನಡ ಸಿನಿಮಾ ಸಾಕು ಅಂತ ಕಿಚ್ಚ ಬೇಸರಿಸಿಕೊಂಡಿದ್ಯಾಕೆ ಅಂತ ಹೇಳೋದಕ್ಕೆ. ಕಿಚ್ಚನ ಬೇಸರಕ್ಕೆ ಏನು ಕಾರಣ ? ಏನು ಕಿಚ್ಚನ ಮನ್ ಕಿ ಬಾತ್ ಅಂತೀರಾ...

    ಸಿನಿಮಾ ಮಾಡೋದು ಚಟಕ್ಕಲ್ಲ ಛಲಕ್ಕೆ

    ಸಿನಿಮಾ ಮಾಡೋದು ಚಟಕ್ಕಲ್ಲ ಛಲಕ್ಕೆ

    ಕಿಚ್ಚ ಸುದೀಪ್ಗೆ ಸಿನಿಮಾ ಮಾಡೋ ಚಟ ಖಂಡಿತಾ ಇಲ್ಲ. ಚಟಕ್ಕಾಗಿ ಸಿನಿಮಾ ಮಾಡೋದಾಗಿದ್ರೆ ಸುದೀಪ್ ಒಂದೊಂದು ಸಿನಿಮಾಗೆ ಒಂದೊಂದು ವರ್ಷವನ್ನ ಕಳೆಯೋದಿಲ್ಲ. ಒಳ್ಳೆಯ ಸಿನಿಮಾ ಮಾಡ್ಬೇಕು ಅನ್ನೋ ಛಲದಿಂದ ಸಿನಿಮಾ ಮಾಡ್ತಾರೆ ಕಿಚ್ಚ.

    ಸಿನಿಮಾಗಾಗಿ ಸಿಂಪಲ್ ಆಗ್ತಾರೆ

    ಸಿನಿಮಾಗಾಗಿ ಸಿಂಪಲ್ ಆಗ್ತಾರೆ

    ಸುದೀಪ್ ಹೇಳಿ ಕೇಳಿ ಶೋಮ್ಯಾನ್. ಬಿಂದಾಸಾಗಿ ತಾನಂದುಕೊಂಡಂತೆ ಖಚರ್ು ಮಾಡ್ತಾ ದಿಲ್ದಾರ್ ಆಗಿ ಬದುಕೋ ವ್ಯಕ್ತಿ. ಇಷ್ಟು ದೊಡ್ಡ ಸ್ಟಾರ್ ಆದ ನಂತ್ರ ಕೂಡ ತಿಂಡಿ ಸಿಗದಿದ್ದಾಗ ತಳ್ಳು ಗಾಡಿಯಲ್ಲಿ ಇಡ್ಲಿ ತಿಂದಿದ್ದಾರೆ. ಆದ್ರೆ ಅದು ಸಿನಿಮಾಗಾಗಿ.

    ರೀಮೇಕ್ರಾಜಾ ಆಗಿದ್ದಾರೆ.

    ರೀಮೇಕ್ರಾಜಾ ಆಗಿದ್ದಾರೆ.

    ನಿಮರ್ಾಪಕರಿಗಾಗಿ ಸ್ನೇಹಿತರಿಗಾಗಿ ಸುದೀಪ್ ರೀಮೇಕ್ ರಾಜಾ ಅನ್ನೋ ಹಣೆಪಟ್ಟಿ ಹೊತ್ತಿದ್ದಾರೆ. ತನಗೆ ಇಷ್ಟವಿಲ್ಲದ್ದರೂ ರೀಮೇಕ್ ಸಿನಿಮಾ ಡೈರೆಕ್ಟ್ ಮಾಡಿ ಆಕ್ಟ್ ಮಾಡಿ ಮಾಧ್ಯಮದವ್ರಿಂದ ಮತ್ತು ಜನ್ರಿಂದ ಟೀಕೆಗಳನ್ನ ಎದುರಿಸಿದ್ದಾರೆ.

    ರನ್ನ ಪಡ್ಕೊಂಡವ್ರಿಂದ ಗುನ್ನ

    ರನ್ನ ಪಡ್ಕೊಂಡವ್ರಿಂದ ಗುನ್ನ

    ರನ್ನ ಚಿತ್ರವನ್ನ ನಿಮರ್ಾಣ ಮಾಡಿದ್ದ ಚಂದ್ರಶೇಖರ್ ಮತ್ತು ವಿತರಕರಾಗಿದ್ದ ಗೋಕುಲ್ ಫಿಲ್ಮ್ಸ್ ರನ್ನ ಸಿನಿಮಾ ರಿಲೀಸಾಗೋವರೆಗೂ ಸುದೀಪ್ ಹಿಂದೆ ಬಿದ್ದಿದ್ರು. ಸುದೀಪ್ ಮಧ್ಯಪ್ರವೇಶ ಆಗದಿದ್ರೆ ಸಿನಿಮಾ ರಿಲೀಸೇ ಆಗ್ತಿರಲಿಲ್ಲ. ಆದ್ರೆ ಚಿತ್ರ ಗೆದ್ದ ನಂತ್ರ ಒಂದು ಶುಭಾಷಯ ಹೇಳೋದನ್ನೂ ಮರೆತಿದ್ದಾರೆ.

    ಸಂಭಾವನೆಯನ್ನೂ ಬಿಟ್ಟಿದ್ರು

    ಸಂಭಾವನೆಯನ್ನೂ ಬಿಟ್ಟಿದ್ರು

    ರನ್ನ ಚಿತ್ರ ಚೆನ್ನಾಗಿ ಬರ್ಲಿ ಅನ್ನೋ ಕಾರಣಕ್ಕೆ ಸಂಭಾವನೆ ಬಂದಾಗ ಬರ್ಲಿ ಕೊಟ್ಟಾಗ ಕೊಡ್ಲಿ ಅಂತ ಸುದೀಪ್ ನಿಮರ್ಾಪಕರ ಪರ ನಿಂತಿದ್ರು. ರಿಲೀಸ್ವರೆಗೂ ರನ್ನನ್ನ ನೆರಳಿನಂತಿದ್ದ ಕಿಚ್ಚನ ಮೇಲಿನ ನಿಯತ್ತು ನಿಮರ್ಾಪಕ ಮತ್ತು ವಿತರಕರಿಗೆ ಇಲ್ಲವಾಗಿದ್ದು ಕಿಚ್ಚನನ್ನ ಬೇಸರಕ್ಕೆ ದೂಡಿತ್ತು.

    ಅರ್ಧಶತಕಕ್ಕೂ ಸಂಭ್ರಮವಿಲ್ಲ.

    ಅರ್ಧಶತಕಕ್ಕೂ ಸಂಭ್ರಮವಿಲ್ಲ.

    ರನ್ನ ಬಾಹುಬಲಿ ಭಜರಂಗಿಯ ಅಬ್ಬರದ ನಡುವೆಯೂ ಮಲ್ಟಿಪ್ಲೆಕ್ಸ್ಗಳಲ್ಲಿ ಮತ್ತು ಹಲವು ಚಿತ್ರಮಂದಿರಗಳಲ್ಲಿ ಅರ್ಧ ಸತಕ ಭಾರಿಸಿದೆ ನಿಮರ್ಾಪಕ, ವಿತರಕರು ಜೇಬು ತುಂಬಿಸಿಕೊಂಡಿದ್ದಾರೆ. ಲಾಭದ ಹಣವನ್ನ ಕಿಚ್ಚ ಕೇಳಿಲ್ಲ. ಅಂತಹಾ ಅವಶ್ಯಕಥೆಯೂ ಅವರಿಗಿಲ್ಲ. ಆದ್ರೆ ಒಂದು ಖುಷಿಯ ವಿಶ್ ಮಾಡೋದು ಬೇಡ್ವಾ ಅಂತ ಬೇಜಾರಾಗಿದೆ.

    ಪ್ರೊಫೆಷನಲಿಸಂ ಇಲ್ಲ

    ಪ್ರೊಫೆಷನಲಿಸಂ ಇಲ್ಲ

    ಕನ್ನಡ ಚಿತ್ರರಂಗದಲ್ಲಿ ಅಂತಹಾ ಒಂದು ಪ್ರೊಫೆಷನಲಿಸಂ ಇಲ್ವಾ ? ಇದೆ ಆದ್ರೆ ಎಲ್ಲರಲ್ಲೂ ಇಲ್ಲ. ರನ್ನ ಕೊಡೋ ನಟನಿಗೆ ಗುನ್ನಿಡಬಾರ್ದಲ್ಲ. ಇನ್ನು ಮುಂದೆ ಹೀಗಾಗದಿರ್ಲಿ ಅಂತಿದೆ ಕಿಚ್ಚ ಸುದೀಪ್ ಅತ್ಮೀಯ ಬಳಗ

    English summary
    Kichcha Sudeep wants Kannada Film Industry to be more professional and energetic. Film making is not a hobby for me says Kichcha Sudeep
    Monday, August 3, 2015, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X