For Quick Alerts
  ALLOW NOTIFICATIONS  
  For Daily Alerts

  ಆರು ವಿಲನ್‌ಗಳೊಂದಿಗೆ ಸೆಣೆಸಲಿದ್ದಾರೆ ಕಿಚ್ಚ ಸುದೀಪ್!

  |

  ಅಬ್ಬಬ್ಬಾ ಅಂದ್ರೆ ಒಂದು ಚಿತ್ರದಲ್ಲಿ ಎಷ್ಟು ವಿಲನ್ ಗಳಿರಬಹುದು? ಒಂದು, ಎರಡು ಇಲ್ಲಾ ಮೂರು,, ಆದರೆ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದಲ್ಲಿ ಬರೋಬ್ಬರಿ ಆರು ವಿಲನ್ ಗಳಿದ್ದಾರೆ. ಅವರು ಘಟಾನುಘಟಿಗಳು.

  ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರದಲ್ಲಿ ಆರು ವಿಲನ್ ಗಳೊಂದಿಗೆ ಸೆಣೆಸಲಿದ್ದಾರೆ. ವಿವಿಧ ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದ್ದು ತಮಿಳಿನಲ್ಲಿ 'ಮುಡಿಂಜಾ ಇವನಾ ಪುಡಿ' ಎಂದು ನಾಮಕರಣ ಮಾಡಲಾಗಿದೆ. ಕನ್ನಡದಲ್ಲಿ 'ಕೋಟಿಗೊಬ್ಬ-2' ಹೆಸರು ಅಂತಿಮ ಎಂಬುದು ಗಾಂಧಿನಗರದ ವಾರ್ತೆ.

  ಬಹುಭಾಷಾ ನಟ ಪ್ರಕಾಶ್ ರೈ, ಕೆಂಪೇಗೌಡದ ರವಿಶಂಕರ್, ನಾಜರ್, ಶರತ್ ಲೋಹಿತಾಶ್ವ, ಮುಖೇಶ್ ತಿವಾರಿ, ಅವಿನಾಶ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳು ಡೈಲಾಗ್ ವೈಭವ ಅನುಭವಿಸುವುದ್ರಲ್ಲಿ ಅನುಮಾನವಿಲ್ಲ.[ಏನು..'ಬಿಗ್ ಬಾಸ್'ನಿಂದ ಸುದೀಪ್ ಹೊರ ನಡೆದ್ರಾ?]

  ನಿರ್ದೇಶಕರು ಪಾತ್ರದ ಆಯ್ಕೆಗೆ ಯಾವ ತಂತ್ರ ಅನುಸರಿಸಿದ್ದಾರೆ ಅನ್ನೋದು ಸಿಕ್ರೇಟ್, ಎಲ್ಲ ವರ್ಗದವರನ್ನು, ಭಾಷಿಕರನ್ನು ಚಿತ್ರಮಂದರಿಕ್ಕೆ ಸೆಳೆಯಬೇಕು ಎಂತಲೇ ಹೀಗೆ ಮಾಡಲಾಗಿದೆಯೇ? ಉತ್ತರವನ್ನು ನಿರ್ದೇಶಕರ ಬಳಿಯೇ ಕೇಳ್ಬೇಕು. ಹಾಗಾದ್ರೆ ಯಾರ್ಯಾರು ವಿಲನ್ ಆಗಿ ಕಾಣಿಸ್ಕೊಳ್ಳಲಿಕ್ಕಿದ್ದಾರೆ ನೋಡ್ಕಂಡು ಬರೋಣ...

  ಪ್ರಕಾಶ್ ರಾಜ್

  ಪ್ರಕಾಶ್ ರಾಜ್

  ಬಹುಭಾಷಾ ನಟ, ಬಹುಮುಖ ಪ್ರತಿಭೆ ಪ್ರಕಾಶ್ ರಾಜ್ ಖಳನಟರಾಗಿ ಅಭಿನಯಿಸಲಿದ್ದಾರೆ. ತಮ್ಮ ವಿಶಿಷ್ಟ ಪಾತ್ರಗಳ ಮೂಲಕವೇ ಜನಮಾನಸಕ್ಕೆ ಹತ್ತಿರವಾದ ಪ್ರಕಾಶ್ ರಾಜ್ ಖಳನಟನಾಗಿ ಕಾಣಿಸುತ್ತಿರುವುದು ಹೊಸದೇನಲ್ಲ.

  ರವಿಶಂಕರ್

  ರವಿಶಂಕರ್

  ತಮ್ಮ ಧ್ವನಿಯ ಮೂಲಕವೇ ಗುರುತಿಸಿಕೊಂಡಿರುವ ರವಿಶಂಕರ್ ಸಹ ಕೆಂಪೇಗೌಡದ ಆರ್ ಮುಗಮ್ ರೀತಿಯಲ್ಲೇ ಅಬ್ಬರಿಸಲಿದ್ದಾರೆ.

  ಅವಿನಾಶ್

  ಅವಿನಾಶ್

  ಕನ್ನಡಿಗ ಅವಿನಾಶ್ ನೆಗೆಟಿವ್ ಶೇಡ್ ಪಾತ್ರಕ್ಕೆ ಹೆಸರಾದವರು. 'ಮುಡಿಂಜಾ ಇವನಾ ಪುಡಿ' ಯಲ್ಲಿ ಖಳ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

  ಮುಖೇಶ್ ತಿವಾರಿ

  ಮುಖೇಶ್ ತಿವಾರಿ

  ಕೆಎಸ್ ರವಿಕುಮಾರ್ ನಿರ್ದೇಶನದಲ್ಲಿ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಆರು ಖಳನಟರನ್ನು ಹಾಕಿಕೊಳ್ಳಲಾಗುತ್ತಿದ್ದು ಹಿಂದಿಯ ಮುಖೇಶ್ ತಿವಾರಿ ಸಹ ಅಭಿನಯಿಸಲಿದ್ದಾರೆ.

  ನಾಜರ್

  ನಾಜರ್

  ಬಾಹುಬಲಿಯಲ್ಲಿ ಬಿಜ್ಜಳದೇವ ಪಾತ್ರ ನಿಭಾಯಿಸಿದ್ದ ನಾಜರ್ ಸುದೀಪ್ ರ ಮುಂದಿನ ಚಿತ್ರದಲ್ಲಿ ಮತ್ತೊಬ್ಬ ಖಳನಟ.

  ಲೋಹಿತಾಶ್ವ

  ಲೋಹಿತಾಶ್ವ

  ಕನ್ನಡದಮ ಅನೇಕ ಚಿತ್ರಗಳಲ್ಲಿ ಆರ್ಭಟಿಸುರುವ ಶರತ್ ಲೋಹಿತಾಶ್ವ ಸಹ ಚಿತ್ರದಲ್ಲಿ ವಿಲನ್ ಆಗಿ ಕಾಣಸಿಗಲಿದ್ದಾರೆ.

  ಚರ್ಚೆ ಆರಂಭವಾಗಿದೆ

  ಚರ್ಚೆ ಆರಂಭವಾಗಿದೆ

  ವಿವಿಧ ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಈಗಾಗಲೇ ಸುದೀಪ್ ಅಬಿಮಾನಿಗಳು ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಸೆಪ್ಟೆಂಬರ್ 21 ರಿಂದ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ.

  English summary
  After winning the heart of Kannada audience as Ranna, Sudeep is busy shooting for KS Ravikumar's next titled Mudinja Ivana Pudi. The latest reports about the movie is, Kichcha will fight with 6 baddies in the movie! The lead roles get more importance when you have an equal antagonist in the movie. Now, it's Kichcha's time to do wonders in Sandalwood as well as Kollywood. Earlier, the Kannada title of the movie was Kotigobba 2, but the official reports deny it. The Tamil title has been finalised as Mudinja Ivana Pudi, which means catch him if you can!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X