»   » ಸುದೀಪ್ ಇಲ್ಲ, ಹೀರೋಯಿನ್ ಇಲ್ಲ ಆದ್ರೂ ಶುರು ಆಯ್ತು 'ಕೋಟಿಗೊಬ್ಬ 3' ಶೂಟಿಂಗ್

ಸುದೀಪ್ ಇಲ್ಲ, ಹೀರೋಯಿನ್ ಇಲ್ಲ ಆದ್ರೂ ಶುರು ಆಯ್ತು 'ಕೋಟಿಗೊಬ್ಬ 3' ಶೂಟಿಂಗ್

Posted By:
Subscribe to Filmibeat Kannada
ಸುದೀಪ್ ಇಲ್ಲದೆ ಸೆಟ್ಟರ್ತ ಕೋಟಿಗೊಬ್ಬ 3 ಸಿನಿಮಾ | Filmibeat Kannada

ನಟ ಸುದೀಪ್ ಖಾತೆಯಲ್ಲಿರುವ ಮುಂದಿನ ಸಿನಿಮಾಗಳಲ್ಲಿ 'ಕೋಟಿಗೊಬ್ಬ 3' ಕೂಡ ಒಂದಾಗಿದೆ. ಈ ಸಿನಿಮಾದ ಚಿತ್ರೀಕರಣ ಇದೀಗ ಶುರು ಆಗಿದೆ. ಕಳೆದ ಬುಧವಾರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ನಾಯಕ ಸುದೀಪ್ ಮತ್ತು ನಾಯಕಿ ಇಲ್ಲದೆಯೇ ಶೂಟಿಂಗ್ ಶುರು ಮಾಡಿರುವುದು ವಿಶೇಷವಾಗಿದೆ.

'ಕೋಟಿಗೊಬ್ಬ 2' ಸಿನಿಮಾದ ಯಶಸ್ಸಿನ ನಂತರ ಸುದೀಪ್ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದೆ. ಯುವ ನಿರ್ದೇಶಕ ಶಿವ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾದ ಮುಹೂರ್ತ ಮೇ 2 ರಂದು ನಡೆಯಲಿದೆ. ಸದ್ಯಕ್ಕೆ ಸಿನಿಮಾದ ಕೆಲವು ಚಿಕ್ಕ ಪುಟ್ಟ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

'ಕೋಟಿಗೊಬ್ಬ 3' : ಮತ್ತೆ ಕೋಟಿಗೊಬ್ಬನ ಅವತಾರದಲ್ಲಿ ಕಿಚ್ಚ ಸುದೀಪ್..!

ನಟ ಸುದೀಪ್ ಇನ್ನೂ 'ಕೋಟಿಗೊಬ್ಬ 3' ಅಡ್ಡಕ್ಕೆ ಎಂಟ್ರಿ ಕೊಟ್ಟಿಲ್ಲ. ಅವರ ಸೀನ್ ಹೊರತಾಗಿ ಇರುವ ದೃಶ್ಯಗಳನ್ನು ಈಗ ಚಿತ್ರತಂಡ ಸೆರೆ ಹಿಡಿಯುತ್ತಿದೆ. ಸಮಯಕ್ಕೆ ಸರಿಯಾಗಿ ಶೂಟಿಂಗ್ ಮುಗಿಸುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆಯಂತೆ. ಅಂದಹಾಗೆ, 'ಕೋಟಿಗೊಬ್ಬ 3' ಸಿನಿಮಾದ ನಾಯಕಿ ಕೂಡ ಸದ್ಯಕ್ಕೆ ಆಯ್ಕೆ ಆಗಿಲ್ಲ.

Kichha Sudeeps Kotigobba 3 movie shooting started

ವಿಶೇಷ ಅಂದರೆ, ಈ ಸಿನಿಮಾಗೆ ಸುದೀಪ್ ಅವರೇ ಕಥೆ ಬರೆದಿದ್ದಾರೆ. ಬಹಳ ವರ್ಷಗಳ ಬಳಿಕ ಕಿಚ್ಚ ಪೆನ್ ಹಿಡಿದಿದ್ದಾರೆ. 'ಹೆಬ್ಬುಲಿ' ನಂತರ ಮತ್ತೆ ಅರ್ಜುನ್ ಜನ್ಯ ಸುದೀಪ್ ಜೋಡಿ ಈ ಚಿತ್ರದಲ್ಲಿಯೂ ಮುಂದುವರೆದಿದೆ. ಶೇಖರ್ ಚಂದ್ರ ಕ್ಯಾಮರಾ ಹೊಣೆ ಹೊತ್ತಿದ್ದಾರೆ. ಈ ಸಿನಿಮಾದ ಜೊತೆಗೆ 'ದಿ ವಿಲನ್' ಚಿತ್ರದ ಒಂದು ಹಾಡಿನ ಶೂಟಿಂಗ್ ಬಾಕಿ ಇದೆ. 'ಪೈಲ್ಪಾನ್' ಮತ್ತು 'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣ ಏಕಕಾಲದಲ್ಲಿ ನಡೆಯಲಿದೆ.

English summary
Kannada actor Kiccha Sudeep 'Kotigobba 3' movie shooting started. the movie is producing by Surappa Baabu.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X