For Quick Alerts
  ALLOW NOTIFICATIONS  
  For Daily Alerts

  ಶ್ರೀನಗರ ಕಿಟ್ಟಿಯ 'ಕಿಲಾಡಿ ಕಿಟ್ಟಿ' ಜಾದೂ ಸನ್ನಿಹಿತ

  |

  ಶ್ರೀನಗರ ಕಿಟ್ಟಿ ಕಿಲಾಡಿಯಾಗಿರುವ 'ಕಿಲಾಡಿ ಕಿಟ್ಟಿ' ಈ ಶುಕ್ರವಾರ, ಅಂದರೆ ಮೇ 18, 2012ಕ್ಕೆ ತೆರೆಗೆ ಬರಲಿದೆ. ಕೋ ಕೋ ಚಿತ್ರ ಸೋತ ನಂತರ ಬರುತ್ತಿರುವ ಕಿಟ್ಟಿಯ ಚಿತ್ರವಿದಾದ್ದರಿಂದ ಕಿಟ್ಟಿ ಅಭಿಮಾನಿಗಳು ಸಹಜವಾಗಿ ನಿರೀಕ್ಷೆಯಲ್ಲಿದ್ದಾರೆ. ಕಿಟ್ಟಿಗೆ ಜೊತೆಯಾಗಿ ಹರಿಪ್ರಿಯಾ ಹಾಗೂ ನಿವೇದಿತಾ (ಸ್ಮಿತಾ) ನಟಿಸಿದ್ದಾರೆ. ಕಮರ್ಷಿಯಲ್ ಚಿತ್ರನಿರ್ದೇಶಕ ಅನಂತರಾಜು ಈ ಚಿತ್ರವನ್ನು ನಿರ್ದೆಶಿಸಿದ್ದಾರೆ.

  ಸವಾರಿ ಹಾಗೂ ಹುಡುಗರು ಚಿತ್ರದಲ್ಲಿ ಕಾಮಿಡಿ ಪಾತ್ರ ಪೋಷಿಸಿದ್ದ ಶ್ರೀನಗರ ಕಿಟ್ಟಿ, ಈ ಚಿತ್ರದಲ್ಲಿ ಮತ್ತೆ ಅಂತಹ ಪಾತ್ರ ಮಾಡಿದ್ದಾರಂತೆ. ಹಾಸ್ಯ ರಸಾಯನದಲ್ಲಿ ಅವರಿಗೆ ಜೊತೆಯಾಗಿ ಶರಣ್, ರಂಗಾಯಣ ರಘು ಹಾಗೂ ಆನಂದ್ ಇದ್ದಾರೆ. ಶಿವಕುಮಾರ್ ನಿರ್ಮಾಣದ ಕಿಲಾಡಿ ಕಿಟ್ಟಿಗೆ ಒಲವೇ ಮಂದಾರ ಖ್ಯಾತಿಯ ರವಿಕುಮಾರ್ ಸಾನಾ ಛಾಯಾಗ್ರಹಣ ಹಾಗೂ ಜೆಸ್ಸಿ ಗಿಫ್ಟ್ ಸಂಗೀತವಿದೆ.

  ಇದರಲ್ಲಿ ನಟ ಶ್ರೀನಗರ ಕಿಟ್ಟಿಯದು ಸ್ಲಮ್ ಉಳಿಸಲು ಹೋರಾಡುವ 'ರಾಬಿನ್ ಹುಡ್' ಹೋಲುವ ಪಾತ್ರ. ಹರಿಪ್ರಿಯಾಗೆ ಪೊಲೀಸ್ ಡ್ರೆಸ್ ಕೂಡ ಹಾಕಿರುವ ಅವರ ಕನಸಿನ ಬೋಲ್ಡ್ ಮತ್ತು ಬಾಂಡ್ ಹುಡುಗಿ ಪಾತ್ರ. ಒಟ್ಟಿನಲ್ಲಿ, ಕಿಲಾಡಿ ಕಟ್ಟಿ ಎರಡೂವರೆ ತಾಸು ಪ್ರೇಕ್ಷಕರಿಗೆ ಎಲ್ಲೂ ಬೋರಾಗದಂತೆ ಮಾಡಿರುವ ಸಿನಿಮಾ ಎಂಬುದು ಚಿತ್ರತಂಡ ಅಭಿಪ್ರಾಯ. ಅಂದಹಾಗೆ, ಈ ಚಿತ್ರ ತೆಲುಗಿನ, ಅಲ್ಲೂ ನರೇಶ್ ಅಭಿನಯದ 'ಬ್ಲೇಡ್ ಬಾಬ್ಜಿ' ಚಿತ್ರದ ರಿಮೇಕ್. (ಒನ್ ಇಂಡಿಯಾ ಕನ್ನಡ)

  English summary
  Kiladi Kitty Movie Releases on May 18 2012 all over Karnataka. Srinagara Kitty, Haripriya and Nivedita are in lead role. shivakumar produced this movie and Ananth Raju Directed. 
 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X