»   » ರೀರೆಕಾರ್ಡಿಂಗ್ ಮುಗಿಸಿಕೊಂಡ 'ಕಿಲಾಡಿ ಕಿಟ್ಟಿ'

ರೀರೆಕಾರ್ಡಿಂಗ್ ಮುಗಿಸಿಕೊಂಡ 'ಕಿಲಾಡಿ ಕಿಟ್ಟಿ'

Posted By:
Subscribe to Filmibeat Kannada

ಸಂಗಮ ಫಿಲಂಸ್ ಲಾಂಛನದಲ್ಲಿ ಎಸ್.ವಿ.ಶಿವಕುಮಾರ್ ಅವರು ನಿರ್ಮಿಸುತ್ತಿರುವ 'ಕಿಲಾಡಿ ಕಿಟ್ಟಿ' ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಪೂರ್ಣವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಹೊರಬರಲಿದೆ.

ಅನಂತರಾಜು ನಿರ್ದೇಶನದ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಖ್ಯಾತ ಕ್ರೀಡಾಪಟು ಕ್ರಿಸ್‌ಗೇಲ್ ಅವರಿಂದ ಬಿಡುಗಡೆಯಾಯಿತು. ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಕಿದೆ ಎನ್ನುತ್ತಾರೆ ನಿರ್ಮಾಪಕರು.

ರವಿಕುಮಾರ್ ಸಾನಾರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೆಸಿಗಿಫ್ಟ್ ಸಂಗೀತ ನೀಡಿದ್ದಾರೆ. ಜೋ.ನಿ.ಹರ್ಷ ಸಂಕಲನ, ಮಾಸ್ ಮಾದಾ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಹರಿಪ್ರಿಯಾ, ಸ್ಮಿತಾ(ನಿವೇದಿತಾ), ಮಾನ್ಸಿ, ಶರಣ್, ದಿಲೀಪ್, ಆನಂದ್, ಸತ್ಯಜಿತ್, ಸಂಗೀತ, ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು, ಬಿ.ಜಯಮ್ಮ, ವೀಣಾಸುಂದರ್, ರಮೇಶ್ ಪಂಡಿತ್, ಬ್ರಹ್ಮಾವರ್, ವಿ.ಮನೋಹರ್ ಮುಂತಾದವರಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Srinagara Kitty lead Kiladi Kitty has finished its rerecording completely recently. It stars Srinagar Kitty and Haripriya in the lead roles while Smitha makes a special appearance. The movies first copy getting ready.
Please Wait while comments are loading...