'ವೀರಪ್ಪನ್' ಒಂದು ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

By Suneetha

ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಚಂದನವನದಲ್ಲಿ ಭರ್ಜರಿ ಕಮಾಲ್ ಮಾಡಿದ್ದಾರೆ. ಈಗಾಗಲೇ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.

ಅಂದಹಾಗೆ ನಿನ್ನೆ ಸುಮಾರು 400 ರಿಂದ 500 ಚಿತ್ರಮಂದಿರಗಳಲ್ಲಿ ತೆರೆಕಂಡ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?. ಹತ್ತತ್ತಿರ ಬರೋಬ್ಬರಿ 5 ಕೋಟಿ ಕಲೆಕ್ಷನ್ ಮಾಡಿದೆ.['ಆರ್.ಜಿ.ವಿ' ಆಪರೇಷನ್ ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಉತ್ತಮ ಚಿತ್ರವನ್ನು ಬಂಪರ್ ಉಡುಗೊರೆಯನ್ನಾಗಿ ನೀಡಿದ್ದಕ್ಕಾಗಿ ನಿರ್ದೇಶಕ ಆರ್.ಜಿ.ವಿ ಅವರಿಗೆ ಎಲ್ಲೆಡೆಯಿಂದಲೂ ಭಾರಿ ಅಭಿನಂದನೆಗಳು ವ್ಯಕ್ತವಾಗುತ್ತಿದೆ.

ಕಾಡುಗಳ್ಳ ವೀರಪ್ಪನ್ ಕಥೆಯಾಧರಿತ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ತೆರೆಕಂಡಿದೆ ಅದೇ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿದ್ದರೆ ಕಲೆಕ್ಷನ್ ಎಷ್ಟು ಆಗುತ್ತಿತ್ತು ನೀವೇ ಊಹಿಸಿಕೊಳ್ಳಿ. ಅಬ್ಬಾ.! ಬಾಕ್ಸಾಪೀಸ್ ಚಿಂದಿ ಚಿತ್ರಾನ್ನ ಆಗುತ್ತಿತ್ತು ಅಲ್ವಾ?.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]

ಆದರೆ ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಲು ಅನುಮತಿ ದೊರೆತಿರುವುದರಿಂದ, ಕನ್ನಡ ಭಾಷೆಯಲ್ಲಿ ನಿನ್ನೆ (ಜನವರಿ 1) ಇಡೀ ಕರ್ನಾಟಕದಾದ್ಯಂತ ಸಿನಿಮಾ ತೆರೆ ಕಂಡು ಈಗಾಗಲೇ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಯಾವಾಗ ತೆರೆ ಕಾಣುತ್ತದೆ ಎಂದು ಸದ್ಯಕ್ಕೆ ಮಾಹಿತಿ ದೊರಕಿಲ್ಲ. ಒಟ್ನಲ್ಲಿ ಸ್ಯಾಂಡಲ್ ವುಡ್ ನಲ್ಲಿ ವರ್ಮಾ ಅವರು ಮಾಡಿದ ಚೊಚ್ಚಲ ಕೈಚಳಕ ಹೊಸ ವರ್ಷಕ್ಕೆ ಚಂದನವನಕ್ಕೆ ಹೊಸ ಹುಮ್ಮಸ್ಸು ನೀಡಿದಂತಾಗಿದೆ.

More from Filmibeat

English summary
Varma's "Killing Veerappan" has garnered decent to good reviews and this will ensure that the Shivaraj Kumar starrer to have a great first weekend at the box office. Kannada Movie 'Killing Veerappan' first day collections of the movie will be around 5 crore to 6 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X