»   » ಬಿಗ್ ಬಾಸ್ ಮನೆಗೆ ಕಿಮ್ ಕರ್ದಾಷಿಯನ್ ಎಂಟ್ರಿ

ಬಿಗ್ ಬಾಸ್ ಮನೆಗೆ ಕಿಮ್ ಕರ್ದಾಷಿಯನ್ ಎಂಟ್ರಿ

Subscribe to Filmibeat Kannada

ಬಿಗ್ ಬಾಸ್-8 ರ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗುತ್ತಿದೆ. ಒಂದು ಕಾಲದಲ್ಲಿ ಸೆಕ್ಸ್ ಟೇಪ್ ನಿಂದ "ಖ್ಯಾತಿ' ಪಡೆದಿದ್ದ ಅಮೆರಿಕ ಕಿರುತರೆ ತಾರೆ ಕಿಮ್ ಕರ್ದಾಷಿಯನ್ ಎಂಟ್ರಿ ಕೊಡಲಿದ್ದಾರೆ!

ಹೌದು... 34 ವರ್ಷದ ರೂಪದರ್ಶಿ ನವೆಂಬರ್ 22 ರಂದು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾಳೆ. 'ನಮಸ್ತೆ ಇಂಡಿಯಾ, ನಾನು ಬಿಗ್ ಬಾಸ್ ಮನೆಗೆ ಬರುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾಳೆ. ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯ ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲು ಕಿಮ್ ಭಾರತಕ್ಕೆ ಬರುತ್ತಿದ್ದಾರೆ.[ಲಕ್ಷ ಮಂದಿ ಮೆಚ್ಚಿದ ಈ ಚಿತ್ರದಾಗ ಅಂಥದ್ದೇನೈತಿ]

kim

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಅಂತಿಮ ಘಟ್ಟಕ್ಕೆ ಬರುತ್ತಿದೆ. ಈ ವೇಳೆ ಮಾದಕ ತಾರೆ ಕಿಮ್ ಎಂಟ್ರಿ ಕೊಡುತ್ತಿರುವುದು ಒಳಗಿನ ಸ್ಫರ್ಧಿಗಳಲ್ಲಿ ಎಂಥ ತಳಮಳ ಉಂಟುಮಾಡುತ್ತೋ ಕಾದು ನೋಡಬೇಕು. ಕರಿಷ್ಮಾ ತನ್ನಾ, ಉಪೆನ್ ಪಟೇಲ್ ಜತೆ ಮಾತನಾಡಬೇಕಿದೆ ಎಂದು ಕಿಮ್ ಹೇಳಿಕೊಂಡಿದ್ದಾಳೆ.[Father's dayಗೆ ಅಮ್ಮನಾದ ಕಿಮ್ ಕರ್ದಾಶಿಯನ್]

ಟಿವಿ ಧಾರಾವಾಹಿಗಳ ಮೂಲಕ ಅಮೆರಿಕದ ಮನೆಮಾತಾಗಿರುವ ಕಿಮ್ 'ಸೆಕ್ಸ್ ಟೇಪ್' 2003ರಲ್ಲಿ ಬಹಿರಂಗಗೊಂಡಿತ್ತು. ನಂತರ ಸುದ್ದಿ ವಾಹಿನಿಯೊಂದರ ಮೇಲೆ ಕಿಮ್ ಪ್ರಕರಣ ದಾಖಲಿಸಿದ್ದರು.

5 ಕೋಟಿ ಕೋಡ್ತಾರಂತೆ !
ಕಿಮ್ ಭಾರತಕ್ಕೆ ಬಂದು ಮತ್ತು ಬಿಗ್ ಬಾಸ್ ನಲ್ಲಿ ಭಾಗವಹಿಸಲು ಕಲರ್ಸ್ ವಾಹಿನಿ ಅವರಿಗೆ 5 ಕೋಟಿ ರೂಪಾಯಿ ನೀಡುತ್ತಿದೆ.

English summary
American reality TV star Kim Kardashian is going to enter "Bigg Boss 8" on her maiden trip to India. The 34-year-old will be seen in the Bigg Boss house on Nov 22 as a guest to interact with the contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada