»   » ಗಯ್ಯಾಳಿಗಳ ಜೊತೆ ಸಿಂಪಲ್ ಲವರ್ಸ್ ಗಳ ಜಿದ್ದಾಜಿದ್ದಿ

ಗಯ್ಯಾಳಿಗಳ ಜೊತೆ ಸಿಂಪಲ್ ಲವರ್ಸ್ ಗಳ ಜಿದ್ದಾಜಿದ್ದಿ

Posted By:
Subscribe to Filmibeat Kannada

ಸುಮನಾ ಕಿತ್ತೂರು ಅವರ ಗಯ್ಯಾಳಿ ಹೆಂಗಸರ ಜೊತೆ ಫೈಟ್ ಮಾಡಲು ಸಿಂಪಲ್ ಸುನಿ ಅವರ ಕೈಯಲ್ಲಿ ಪಳಗಿದ ಇನ್ನೊಂದು ಲವ್ ಸ್ಟೋರಿಯ ಲವರ್ಸ್ ತಯಾರಾಗಿದ್ದಾರೆ.

ಹೌದು ಗಾಂಧಿನಗರದಲ್ಲಿ ಬಹಳ ಕುತೂಹಲ ಹುಟ್ಟಿಸಿರುವ ಈ ಎರಡೂ ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿದ್ದು, ಆ ಸಿನಿಮಾನಾ? ಈ ಸಿನಿಮಾನಾ? ಅಂತ ಸಿನಿ ಪ್ರೀಯರನ್ನು ಕನ್ ಫ್ಯೂಶನ್ ಮಾಡಿಕೊಳ್ಳುವಂತೆ ಮಾಡಿದೆ.[ಪಕ್ಕಾ ಮಾಸ್ ಸಿನಿಮಾವಾಗಿ ಬರ್ತಾಯಿದೆ 'ಕಿರಗೂರಿನ ಗಯ್ಯಾಳಿಗಳು']


'Kiragoorina Gayyaligalu' and 'Simplag Innond Love Story' Clash

'ಎದೆಗಾರಿಕೆ' ಖ್ಯಾತಿಯ ನಿರ್ದೇಶಕಿ ಸುಮನಾ ಕಿತ್ತೂರು ಅವರ ಕಾದಂಬರಿಯಾಧರಿತ ಸಿನಿಮಾ 'ಕಿರಗೂರಿನ ಗಯ್ಯಾಳಿಗಳು' ಮತ್ತು ಡೈಲಾಗ್ ಮೂಲಕಾನೇ ಫೇಮಸ್ ಆಗಿರುವ ನಿರ್ದೇಶಕ ಸಿಂಪಲ್ ಸುನಿ ಅವರ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಈ ಎರಡು ಸಿನಿಮಾಗಳು ಮಾರ್ಚ್ 11ರಂದು ತೆರೆ ಕಾಣುತ್ತಿದೆ.[ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!]


'Kiragoorina Gayyaligalu' and 'Simplag Innond Love Story' Clash

ಈಗಾಗಲೇ ಎರಡು ಚಿತ್ರತಂಡಗಳು ಅದ್ಧೂರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಜಟಾಪಟಿಯಲ್ಲಿ ಯಾವ ಸಿನಿಮಾ ಗೆಲ್ಲುತ್ತೆ ಅಂತ ಸಿನಿಮಾ ಪಂಡಿತರು ತಾಳೆ ಹಾಕುತ್ತಿದ್ದಾರೆ.


ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಕಾದಂಬರಿಯನ್ನು ಬಹಳ ವಿಭಿನ್ನವಾಗಿ ಸುಮನಾ ಕಿತ್ತೂರು ಅವರು ಸಿನಿಮಾ ಮಾಡಿದರೆ, ಸಿಂಪಲ್ ಸುನಿ ಅವರು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದ ಮುಂದುವರಿದ ಭಾಗವನ್ನು ಸಿನಿಮಾ ಮಾಡಿದ್ದಾರೆ.[ಮಾರ್ಚ್ 11ಕ್ಕೆ ಸಿಂಪಲ್ ಸುನಿಯ ಮತ್ತೊಂದು ಹಣೆಬರಹದ ಸಾಲು]


'Kiragoorina Gayyaligalu' and 'Simplag Innond Love Story' Clash

ಎರಡು ಸಿನಿಮಾಗಳು ಟ್ರೆಂಡ್ ಹುಟ್ಟು ಹಾಕಿದ್ದು ಯಾವ ಸಿನಿಮಾ ಗೆಲ್ಲುತ್ತೆ ಅಂತ ಗಾಂಧಿನಗರದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಅದೇನೇ ಇರಲಿ ಒಟ್ನಲ್ಲಿ ಸಿನಿಮಾವನ್ನು ಗೆಲ್ಲಿಸೋದು, ಸೋಲಿಸೋದು ಎರಡು ಪ್ರೇಕ್ಷಕರ ಕೈಯಲ್ಲಿದ್ದು, ಏನೇನಾಗುತ್ತೆ ಅಂತ ಮುಂದಿನ ವಾರವೇ ತಿಳಿಯಲಿದೆ.

English summary
Kannada Movie 'Kiragoorina Gayyaligalu' and Kannada Movie 'Simplag Innond Love Story' Clash. This latest Films are all set to release on the same day. This film's release has been finalised as March 11th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada