For Quick Alerts
  ALLOW NOTIFICATIONS  
  For Daily Alerts

  ಜಾತಿ ವ್ಯವಸ್ಥೆ ಬಗ್ಗೆ ಉಪೇಂದ್ರ ಮಾತು: ಭಿನ್ನ ಅಭಿಪ್ರಾಯ ಮುಂದಿಟ್ಟ ನಟ ಕಿರಣ್

  |

  ನಟ ಉಪೇಂದ್ರ ಇತ್ತೀಚೆಗೆ ವಿಡಿಯೋ ಒಂದರಲ್ಲಿ ಜಾತಿ ಕುರಿತಾಗಿ ಆಡಿದ್ದ ಮಾತು ಚರ್ಚೆ ಹುಟ್ಟಿಸಿದೆ. 'ಜಾತಿ ಬಗ್ಗೆ ಮಾತನಾಡದಿದ್ದರೆ ಅದು ತಾನಾಗಿಯೇ ಹೊರಟು ಹೋಗುತ್ತೆ. ಜಾತಿ ಬಗ್ಗೆ ಮಾತನಾಡಿದರೆ ಅದು ಮುಂದುವರೆಯುತ್ತಲೇ ಸಾಗುತ್ತದೆ' ಎಂಬರ್ಥದ ಮಾತುಗಳನ್ನು ನಟ ಉಪೇಂದ್ರ ಆಡಿದ್ದರು.

  ಜಾತಿ ಕುರಿತು ಉಪೇಂದ್ರ ಆಡಿದ್ದ ಮಾತಿಗೆ ನಟ ಚೇತನ್ ಅಹಿಂಸ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದರು. ಚೇತನ್ ವಾದವನ್ನು ಹಲವರು ಒಪ್ಪಿದ್ದರು ಜೊತೆಗೆ ಅಷ್ಟೇ ಜನ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಇದೀಗ 'ಹಾಗೆ ಸುಮ್ಮನೆ' ಖ್ಯಾತಿಯ ನಟ ಕಿರಣ್, ಉಪೇಂದ್ರ ಆಡಿದ್ದ ಮಾತಿಗೆ ಭಿನ್ನವಾದ ಅಭಿಪ್ರಾಯವನ್ನು ಆರೋಗ್ಯಕರ ರೀತಿಯಲ್ಲಿ ಜನರ ಮುಂದಿಟ್ಟಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ಕಿರಣ್ ಶ್ರೀನಿವಾಸ್, 'ಜಾತಿ ಕುರಿತು ಮಾತಾಡದೇ ಇದ್ದರೆ ಅದು ಹೊರಟು ಹೋಗುತ್ತದೆ ಎಂದು ಹೇಳುತ್ತಿರುವವರು ಬಹುತೇಕ ಮೇಲ್ಜಾತಿಯವರೇ' ಎಂದಿದ್ದಾರೆ ಕಿರಣ್.

  ದೌರ್ಜನ್ಯಕ್ಕೆ ಒಳಗಾಗುವವರು ಹಿಂದುಳಿದವರೇ ಆಗಿರುತ್ತಾರೆ: ಕಿರಣ್

  ದೌರ್ಜನ್ಯಕ್ಕೆ ಒಳಗಾಗುವವರು ಹಿಂದುಳಿದವರೇ ಆಗಿರುತ್ತಾರೆ: ಕಿರಣ್

  'ಜಾತಿ ದೌರ್ಜನ್ಯವನ್ನು ಎರಡು ವಿಭಾಗವಾಗಿ ನಾವು ನೋಡಬೇಕಿದೆ. ಒಂದು ದೌರ್ಜನ್ಯ ಮಾಡುವವರು, ಮತ್ತೊಂದು ದೌರ್ಜನ್ಯಕ್ಕೆ ಒಳಗಾಗುವರು. ದೌರ್ಜನ್ಯ ಮಾಡುವವರು ಸದಾ ಮೇಲ್ಜಾತಿಯವರೇ ಆಗಿರುತ್ತಾರೆ. ಇದು ಕಹಿ ಸತ್ಯ. ದೌರ್ಜನ್ಯಕ್ಕೆ ಒಳಗಾಗುವವರು ಹಿಂದುಳಿದ ಜಾತಿಯವರೇ ಆಗಿರುತ್ತಾರೆ. ಇದಕ್ಕೆ ಪೂರಕ ದಾಖಲೆಗಳು ಸಹ ಇವೆ' ಎಂದಿದ್ದಾರೆ ನಟ ಕಿರಣ್.

  ಜಾತಿ ತಾರತಮ್ಯಕ್ಕೆ ತಾಜಾ ಉದಾಹರಣೆಗಳನ್ನು ನೀಡಿದ ಕಿರಣ್

  ಜಾತಿ ತಾರತಮ್ಯಕ್ಕೆ ತಾಜಾ ಉದಾಹರಣೆಗಳನ್ನು ನೀಡಿದ ಕಿರಣ್

  'ಜಾತಿ ತಾರತಮ್ಯ ಮುಗಿದುದ ಹೋದ ಕತೆ ಅದನ್ನು ಈಗ ಯಾಕೆ ಕೆಣಕುತ್ತೀರ? ಎಂದು ಹಲವರು ಪ್ರಶ್ನೆ ಮಾಡುತ್ತಾರೆ. ಆದರೆ ದಲಿತನೊಬ್ಬ ಮೀಸೆ ಬಿಟ್ಟ ಎಂದು ಹೊಡೆದಿದ್ದು, ದಲಿತ ಯುವಕ ಕುದುರೆ ಏರಿದ ಎಂದ ಹೊಡೆದು ಕೊಂದಿದ್ದು, ನಂಜನಗೂಡು ಬಳಿ ಹಿಂದುಳಿದ ಜಾತಿಯವರಿಗೆ ಕ್ಷೌರ ಮಾಡಿದನೆಂದು ಬಹಿಷ್ಕಾರ ಹಾಕಿದ್ದು ಇವೆಲ್ಲವೂ ಈಗಿನದ್ದೇ ಉದಾಹರಣೆಗಳು' ಎಂದು ಈಗಿನ ಕಾಲದಲ್ಲೂ ಜಾತಿ ತಾರತೌಮ್ಯ ಇದೆ ಎಂದು ಉದಾಹರಣೆಗಳ ಸಹಾಯವೊಂದಿಗೆ ವಾದಿಸಿದ್ದಾರೆ ಕಿರಣ್.

  ಜಾತಿ ಮೀಸಲಾತಿ ಬಗ್ಗೆ ಕಿರಣ್ ಮಾತು

  ಜಾತಿ ಮೀಸಲಾತಿ ಬಗ್ಗೆ ಕಿರಣ್ ಮಾತು

  ಜಾತಿ ಮೀಸಲಾತಿ ಬಗ್ಗೆ ಮಾತನಾಡಿರುವ ಕಿರಣ್, 'ಮೀಸಲಾತಿ ತೆಗೆದು ಹಾಕಿಬಿಡಬೇಕು ಎಂಬುದು ಹಲವರ ವಾದ. ಆದರೆ ಜಾತಿ ಮೀಸಲಾತಿ ಇರುವುದು ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವವರಿಗೆ ಸಮಾಜದಲ್ಲಿ ಸಮಾನತೆ ಕಲ್ಪಿಸಲು. ಮೀಸಲಾತಿ ಇರುವುದು ಆರ್ಥಿಕ ಸಮಾನತೆಗಾಗಿ ಅಲ್ಲ. ಸಾಮಾಜಿಕ ಸಮಾನತೆ ಇಲ್ಲದೆ ಆರ್ಥಿಕ ಸಮಾನತೆ ಬರುವುದು ಸಾಧ್ಯವಿಲ್ಲ. ಈಗಲೂ ಖಾಸಗಿ ಹಾಗೂ ಸಾರ್ವಜನಿಕ ವಲಯದ ಉನ್ನತ ಹುದ್ದೆಗಳಲ್ಲಿ ಇರುವುದು ಮೇಲ್ಜಾತಿಯವರೇ ವಿನಃ ಕೆಳಜಾತಿಯವರಲ್ಲ' ಎಂದಿದ್ದಾರೆ ಕಿರಣ್.

  ನ್ಯಾಯ ಒದಗಿಸಲು ಸಾಧ್ಯವಿಲ್ಲ: ಕಿರಣ್

  ನ್ಯಾಯ ಒದಗಿಸಲು ಸಾಧ್ಯವಿಲ್ಲ: ಕಿರಣ್

  'ಹಿಂದುಳಿದ ಜಾತಿಯವರಿಗೆ ಆಗಿರುವ ಅನ್ಯಾಯವನ್ನು ನಾನು ಅಥವಾ ಮೇಲ್ಜಾತಿಯವರಿಂದ ಸರಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಜಾತಿ ದೌರ್ಜನ್ಯದ ಅನುಭವವೇ ನಮಗೆ ಇಲ್ಲ. ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ ಅನುಭವಿಸಿದವರಿಂದ ಮಾತ್ರ. ಹಾಗಾಗಿ ಅವರಿಗೂ ಸಮಾನ ಪ್ರಾತಿನಿಧ್ಯ ನೀಡೋಣ. ಎಲ್ಲ ಕ್ಷೇತ್ರದಲ್ಲೂ ಅವರಿಗೆ ಸಮಾನ ಪ್ರಾತಿನಿಧ್ಯ ನೀಡಿ ಅವರ ಮಾತನ್ನು ನಾವು ಕೇಳೋಣ' ಎಂದು 'ಅನ್ಯಾಯಕ್ಕೊಳಪಟ್ಟವರಿಗೆ ಅಧಿಕಾರ' ಪರಿಕಲ್ಪನೆ ಮುಂದಿಟ್ಟರು ಕಿರಣ್.

  ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada
  ಮಾತನಾಡಿದರಷ್ಟೆ ಸಮಸ್ಯೆ ಬಗೆಹರಿಸಲು ಸಾಧ್ಯ: ಕಿರಣ್

  ಮಾತನಾಡಿದರಷ್ಟೆ ಸಮಸ್ಯೆ ಬಗೆಹರಿಸಲು ಸಾಧ್ಯ: ಕಿರಣ್

  'ಜಾತಿ ವ್ಯವಸ್ಥೆ ಬಗ್ಗೆ ಮಾತನಾಡದಿದ್ದರೆ ಅದು ಹೊರಟುಹೋಗುತ್ತದೆ ಎಂಬುದು ಸರಿಯಲ್ಲ. ಸಮಸ್ಯೆ ಇದ್ದಾಗ ನಾವು ಅದನ್ನು ಗುರುತಿಸಬೇಕು. ಅದರ ಬಗ್ಗೆ ಚರ್ಚಿಸಬೇಕು. ಅದರ ಪರಿಹಾರವನ್ನು ಕಂಡುಕೊಳ್ಳಬೇಕು ಆಗಲಷ್ಟೆ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದ ಕಿರಣ್, ತಾವು ತಮ್ಮ ಮನೆಯಲ್ಲಿಯೇ ಎದುರಿಸಿದ ಸಂಗತಿಯೊಂದನ್ನು ಉದಾಹರಣೆಯಾಗಿ ಹೇಳಿ ಮಾತು ಮುಗಿಸಿದ್ದಾರೆ. ಕಿರಣ್ ಅವರು ತಮ್ಮ ಫೋಸ್ಟ್ ಅನ್ನು ಚೇತನ್ ಅಹಿಂಸಗೆ ಟ್ಯಾಗ್ ಮಾಡಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

  English summary
  Actor Kiran Shrinivas express his opinion about caste system in India. Recently Upendra talks about caste so Kiran shares his oppinion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X