twitter
    For Quick Alerts
    ALLOW NOTIFICATIONS  
    For Daily Alerts

    ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ರಕ್ಷಿತ್ ಶೆಟ್ಟಿ 'ಚಾರ್ಲಿ' ಸಿನಿಮಾ

    |

    ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ 'ಅವನೇ ಶ್ರೀಮನ್ನಾರಾಯಣ' ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಅವರ '777 ಚಾರ್ಲಿ' ಸಿನಿಮಾ ಕನ್ನಡ ಚಿತ್ರರಂಗದ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ.

    ಈ ಸಿನಿಮಾ ಕನ್ನಡವಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಕೂಡ ಡಬ್ಬಿಂಗ್ ಆಗಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಪ್ರಯಾಣ ಹಾಗೂ ನಾಯಿ ಪ್ರೇಮದ ಕಥೆಯನ್ನು ಹೇಳುವ ಈ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಚಿತ್ರತಂಡ, ಸಿದ್ಧವಾಗಿರುವ ಭಾಗದ ಪೋಸ್ಟ್ ಪ್ರೊಡಕ್ಷನ್ ಕಾರ್ಯವನ್ನು ನಡೆಸಲಾಗುತ್ತಿದೆ. ಸಂಗೀತಾ ಶೃಂಗೇರಿ ಈ ಚಿತ್ರದ ನಾಯಕಿ. ಆದರೆ ಚಾರ್ಲಿಯಲ್ಲಿ ನಟಿಸಿರುವ ಮೂರು ಲ್ಯಾಬ್ರಡರ್ ನಾಯಿಗಳೇ ಹೈಲೇಟ್.

    ಇನ್ನೂ 30 ದಿನಗಳ ಚಿತ್ರೀಕರಣ ಬಾಕಿ

    ರಾಜ್ಯದ ದಾಂಡೇಲಿಯಿಂದ ಚಿತ್ರೀಕರಣ ಆರಂಭವಾಗಿ ಕಾಶ್ಮೀರದವರೆಗೂ ವಿವಿಧ ರಾಜ್ಯಗಳಲ್ಲಿ ಸಾಗುತ್ತದೆ. ಈಗಾಗಲೇ ಗೋವಾ, ಗುಜರಾತ್, ಪಂಜಾಬ್, ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನೂ 30 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ.

    ನಾನೆಲ್ಲೂ ತಲೆ ಮರೆಸಿಕೊಂಡಿಲ್ಲ; ಪಂಜಾಬ್ ಶೂಟಿಂಗ್ ಮುಗಿಸಿ ಬರಲಿದ್ದೇನೆ: ರಕ್ಷಿತ್ ಶೆಟ್ಟಿನಾನೆಲ್ಲೂ ತಲೆ ಮರೆಸಿಕೊಂಡಿಲ್ಲ; ಪಂಜಾಬ್ ಶೂಟಿಂಗ್ ಮುಗಿಸಿ ಬರಲಿದ್ದೇನೆ: ರಕ್ಷಿತ್ ಶೆಟ್ಟಿ

    ಕ್ಲೈಮ್ಯಾಕ್ಸ್ ಚಿತ್ರೀಕರಣವೇ ಸವಾಲು

    ಕ್ಲೈಮ್ಯಾಕ್ಸ್ ಚಿತ್ರೀಕರಣವೇ ಸವಾಲು

    ಚಿತ್ರತಂಡಕ್ಕೆ ದೊಡ್ಡ ಸವಾಲಾಗಿರುವುದು ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವಂತೆ. ಏಕೆಂದರೆ ಇದಕ್ಕೆ ಹಿಮಪಾತದ ಹಿನ್ನೆಲೆ ಇರುವುದು ಅಗತ್ಯ. ಹಿಮಾಲಯ ಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಚೆನ್ನಾಗಿ ಹಿಮಪಾತವಾಗುವುದರಿಂದ ಶೂಟಿಂಗ್‌ಗೆ ಸೂಕ್ತ ಅವಧಿಯಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ನಡೆಸುವಂತಿಲ್ಲ. ಈ ವಾರ ಆರಂಭವಾಗಿದ್ದರೆ, ಏಪ್ರಿಲ್ ಅಂತ್ಯದವರೆಗೂ ಕೊನೆಯ ಉಳಿದ ದೃಶ್ಯಗಳ ಚಿತ್ರೀಕರಣ ಮುಗಿಯಬೇಕಿತ್ತು.

    ಒಂದೂವರೆ ತಿಂಗಳ ಸಮಯ

    ಒಂದೂವರೆ ತಿಂಗಳ ಸಮಯ

    ಕ್ಲೈಮ್ಯಾಕ್ಸ್ ದೃಶ್ಯವನ್ನು ಹಿಮಪಾತದ ಹಿನ್ನೆಲೆಯಲ್ಲಿಯೇ ಚಿತ್ರಿಸಬೇಕೆಂದು ನಿರ್ಧರಿಸಿರುವ ನಿರ್ದೇಶಕ ಕಿರಣ್ ರಾಜ್, ಅದರಲ್ಲಿ ರಾಜಿಯಾಗಲು ಒಪ್ಪಿಲ್ಲ. ಈ ರೀತಿಯ ವಾತಾವರಣ ಅವರಿಗೆ ಇನ್ನು ಒಂದೂವರೆ ತಿಂಗಳು ಮಾತ್ರ ಲಭ್ಯ. ಅಷ್ಟರೊಳಗೆ ಚಿತ್ರೀಕರಣ ಸಾಧ್ಯವಾಗದೆ ಇದ್ದರೆ ಮತ್ತೆ ಕಾಯಬೇಕು.

    ರಾಜಸ್ಥಾನದ ಸುಂದರ ಬೀದಿಯಿಂದ 'ಪ್ರೀತಿ' ರವಾನಿಸಿದ ರಕ್ಷಿತ್ ಶೆಟ್ಟಿರಾಜಸ್ಥಾನದ ಸುಂದರ ಬೀದಿಯಿಂದ 'ಪ್ರೀತಿ' ರವಾನಿಸಿದ ರಕ್ಷಿತ್ ಶೆಟ್ಟಿ

    ಅಕ್ಟೋಬರ್‌ನಲ್ಲಿ ಬಿಡುಗಡೆಗೆ ಚಿಂತನೆ

    ಅಕ್ಟೋಬರ್‌ನಲ್ಲಿ ಬಿಡುಗಡೆಗೆ ಚಿಂತನೆ

    ಈ ಅವಧಿಯಲ್ಲಿ ಉದ್ದೇಶಿತ ಸ್ಥಳದಲ್ಲಿ ಚಿತ್ರೀಕರಣ ನಡೆಸುವುದು ಸಾಧ್ಯವಾಗದೆ ಹೋದರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಅವರು ಚಿಂತಿಸಿದ್ದಾರೆ. ಮೊದಲು ಜುಲೈ ವೇಳೆಗೆ ಸಿನಿಮಾದ ಮೊದಲ ಕಾಪಿ ಸಿದ್ಧಪಡಿಸಿ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಇದೆಲ್ಲವೂ ಈಗ ವೈರಸ್ ಹಾವಳಿ ಯಾವಾಗ ಅಂತ್ಯಗೊಳ್ಳಲಿದೆಯೋ ಅದರ ಮೇಲೆ ಅವಲಂಬಿತವಾಗಿದೆ ಎಂದು ಕಿರಣ್ ರಾಜ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಮನೆಯೊಳಗೇ ನಡೆಯುತ್ತಿದೆ ಕೆಲಸ

    ಮನೆಯೊಳಗೇ ನಡೆಯುತ್ತಿದೆ ಕೆಲಸ

    ಈಗಿನ ಬಿಡುವಿನ ಅವಧಿಯಲ್ಲಿ ಅವರು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ತೊಡಗಿಸಿಕೊಂಡಿದ್ದಾರೆ. ರೀ ರೆಕಾರ್ಡಿಂಗ್ ಕಾರ್ಯ, ಎಲ್ಲ ನಾಲ್ಕೂ ಭಾಷೆಗಳ ಹಾಡುಗಳಿಗೆ ಸಾಹಿತ್ಯ ಬರೆಯುವುದು ಮುಂತಾದವು ನಡೆಯುತ್ತಿವೆ. ಅಲ್ಲದೆ, ಡಬ್ಬಿಂಗ್ ಆವೃತ್ತಿಗಳಿಗೆ ಸಂಭಾಷಣೆಗಳನ್ನು ಕೂಡ ಬರೆಯಲಾಗುತ್ತಿದೆ. ಮನೆಯಲ್ಲಿಯೇ ಕುಳಿತು ಫೋನ್‌ ಸಂವಹನದ ಮೂಲಕವೇ ಈ ಎಲ್ಲ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

    English summary
    Kiranraj's directorial debute, Rakshit Shetty starring 777 Charlie movie will be released in five languages including Kannada.
    Thursday, March 26, 2020, 12:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X