ದಾಂಪತ್ಯದಲ್ಲಿ ಬಿರುಕು? ನನ್ನ ಬದುಕಲ್ಲಿ ಬೇರೆ ಯಾರಾದ್ರು ಇದ್ದಿದ್ರೆ ಏನೇನೋ ಆಗೋಗ್ತಿತ್ತು: ಕಿರಿಕ್ ಕೀರ್ತಿ

ಮಾಜಿ ಬಿಗ್‌ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಕೆಲ ದಿನಗಳ ಹಿಂದೆ ಕೀರ್ತಿ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದಾಗಿ ಹೇಳಿಕೊಂಡಿದ್ದರು. ಒಂದು ಹಂತದಲ್ಲಿ ಡೆತ್‌ನೋಟ್ ಬರೆದಿಟ್ಟು ಜಗತ್ತಿಗೆ ವಿದಾಯ ಹೇಳು ಹೊರಟ್ಟಿದ್ದೆ ಎಂದು ಬರೆದುಕೊಂಡಿದ್ದರು.

ಕಿರಿಕ್ ಕೀರ್ತಿ ಬರೆದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಊಹಾಪೋಹಗಳು ಹರಿದಾಡಲು ಶುರುವಾಯಿತು. ಕೀರ್ತಿ ಹಾಗೂ ಅರ್ಪಿತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಅರ್ಥದಲ್ಲಿ ಕೆಲವರು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಕೀರ್ತಿಯವರನ್ನು ಹೆಂಡತಿ ದೂರ ಮಾಡಿ ಹೋಗಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಇದೀಗ ಸ್ವತಃ ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂ ಲೈವ್ ಬಂದು ಸುಳ್ಳು ಸುದ್ದಿ ಹಬ್ಬಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Kirik keerthi Breaks Silence On Separation Rumours With wife Arpitha

"ನಮಸ್ಕಾರ.. ನಾನು ನಿಮ್ಮ ಕಿರಿಕ್ ಕೀರ್ತಿ. ಅಪ್ಪಾ ಸೋಷಿಯಲ್ ಮೀಡಿಯಾ ಹೀರೋಗಳ ದಯವಿಟ್ಟು ನಮಗೆ ಬದುಕಲು ಬಿಡಿ. ಕೈ ಮುಗಿದು ಕೇಳಿಕೊಳ್ಳುತ್ತೇನೆ. ಯಾಕೆ ನಮಗೆ ಟಾರ್ಚರ್‌ ಕೊಡ್ತಿರಾ? ನಮ್ಮ ಜೀವನದಲ್ಲಿ ಏನಾಗಿದೆ ಏನಾಗಿಲ್ಲ ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ನಮಗೆ ಕ್ಲಾರಿಟಿ ಇಲ್ಲ ಅಂದ್ಮೇಲೆ ನಿಮಗೆ ಹೇಗೆ ಕ್ಲಾರಿಟಿ ಸಿಗುತ್ತದೆ? ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬ ಅರಿವು ನಮ್ಮ ಕುಟುಂಬಕ್ಕೆ ಇಲ್ಲ. ಏನೋ ಇರುತ್ತೆ. ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ಇರುತ್ತೆ. ನಿಮಗೆ ಬೇಕಾದ ರೀತಿಯಲ್ಲಿ ಕಲ್ಪಿಸಿಕೊಂಡು ಹೀಗಂತೆ ಅವನು ಹಾಗಂತೆ ಇವಳು ಈ ರೀತಿ ಮಾಡಿದ್ದಾರೆ ಅಂತೀರಾ ಅಲ್ವಾ ಯಾರು ಬಂದು ನಿಮ್ಮ ಬಳಿ ಕಥೆ ಹೇಳಿದ್ದಾರೆ. ನಮ್ಮ ಮನೆಯ ಮತ್ತೊಂದು ರೂಮಿನಲ್ಲಿ ನೀವು ವಾಸವಿದ್ರಾ? ನಿಮಗೆ ಬೇಕಾದ ಮೆಸೇಜ್‌ಗಳು, ಕಾಮೆಂಟ್‌ಗಳು. ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ? ಯಾರೋ ಒಂದಿಷ್ಟು ಊಹಾ ಪೋಹಗಳನ್ನು ಹರಿಡಿದಾಗ ಕ್ಲಾರಿಟಿ ಕೊಡಬೇಕು ಅದಕ್ಕೆ ಕ್ಲಾರಿಟಿ ಕೊಟ್ಟಿರುವೆ. ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೇವೆ.

"ನಾನು ಚೆನ್ನಾಗಿರುವೆ ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೀವಿ. ನಾನು ಏನಾದರೂ ಬಂದು ಅವಳು ಹೀಗೆ ಮಾಡಿದ್ದಾಳೆ ಅಥವಾ ಅವಳು ಬಂದು ನಾನು ಹೀಗೆ ಮಾಡಿರುವೆ ಎಂದು ಏನಾದರೂ ಹೇಳಿದ್ದಾರಾ? 10 ವರ್ಷ ಸಂಸಾರ ಮಾಡಿದವರಿಗೆ ಬದುಕು ಹೇಗೆ ನಿಭಾಯಿಸಬೇಕು ಅನ್ನೋ ಅರಿವು ನಮಗಿದೆ. ನಮ್ಮ ಕಾಲು ಎಳೆದು, ನಮ್ಮ ಹೊಟ್ಟೆ ಉರಿಸುವುದು ಯಾಕೆ ನಿಮ್ಮ ಕಾಮೆಂಟ್ ಪೋಸ್ಟ್‌ನ ನನ್ನ ಕುಟುಂಬದವರು, ಕಣ್ಣೀರು ಹಾಕುವುದು, ಅವಳ ಮನೆಯವರು ನೋಡಿ ಅವರು ಕಣ್ಣೀರು ಹಾಕುವುದು. ಇದರಿಂದ ನಿಮಗೆ ಏನು ಸಿಗುತ್ತದೆ? ನಿಮಗೂ ತಂದೆ ತಾಯಿ ಮಕ್ಕಳು ತಂಗಿ ಅಣ್ಣ ಇರ್ತಾರೆ ಅಲ್ವಾ? ಹಾಗೆ ನಾವು ಕೂಡ ಒಬ್ಬರು ಅಂದುಕೊಳ್ಳಿ. ನಮ್ಮನ್ನು ಬದುಕಲು ಬಿಡಿ."

"ನಮ್ಮ ಪೋಸ್ಟ್‌ ನಮ್ಮ ಸ್ಟೋರಿಗಳ ಆಧಾರದ ಮೇಲೆ ನೀವೇ ಕಥೆ ಸೃಷ್ಠಿ ಮಾಡಿಕೊಂಡು ನೀವೇ ಏನೋ ನಿರ್ಧಾರ ಮಾಡಿಕೊಂಡಿದ್ದೀರಿ. ಏನಾದರೂ ಆದಾಗ ನಾವೇ ಬಂದು ಕ್ಲಾರಿಟಿ ಕೊಡುತ್ತೀವಿ. ಅಲ್ಲಿವರೆಗೂ ಸುಮ್ಮನಿರಿ. ಸೈದ್ಧಾಂತಿಕ ವಿಚಾರಗಳಲ್ಲಿ ನನ್ನನ್ನು ವಿರೋಧಿಸಲು ಸಾಧ್ಯವಾಗದೇ ಇದ್ದಾಗ ಬಿಟ್ಟು ಬಿಡಿ ಅದನ್ನು ಬಿಟ್ಟು ವೈಯಕ್ತಿಕ ವಿಚಾರದಲ್ಲಿ ಯಾಕೆ ಎಳೆದು ತರುತ್ತೀರಿ? ನಿಮ್ಮ ಪ್ರೋಫೈಲ್‌ನಲ್ಲಿ ನಿಮ್ಮ ಫೋಟೋ ಹಾಕಿಕೊಳ್ಳುವ ಯೋಗ್ಯತೆ ಇರಲ್ಲ. ಆದರೆ ನನ್ನ ಫೋಟೋ ಹಾಕಿ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ' ಎಂದು ಕೀರ್ತಿ ಅಸಮಾಧಾನ ಹೊರ ಹಾಕಿದ್ದಾರೆ.

Kirik keerthi Breaks Silence On Separation Rumours With wife Arpitha

"ನನಗೂ 7 ವರ್ಷ ಮಗ ಇದ್ದಾನೆ. 60-70 ವರ್ಷದ ಅಮ್ಮ ಅಪ್ಪ ಇದ್ದಾರೆ. ಹೊಟ್ಟೆ ಉರಿಯುತ್ತದೆ. ನಿಮ್ಮ ತಾಯಿ ಅಥವಾ ಹೆಂಡತಿ ಹೋಗೋ ಇನ್ನು ಮನೆಗೆ ರೇಷನ್ ತಂದಿಲ್ಲ ನಾಚಿಕೆ ಮಾನ ಮರ್ಯಾದೆ ಇಲ್ಲ ಅಂತ ಮನೆಯಿಂದ ಹೊರ ದಬ್ಬಿರುತ್ತಾರೆ. ಆ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ಅಂತ ನನ್ನ ವಿಚಾರಗಳನ್ನು ಹಾಕುತ್ತೀರಾ ಅಂದ್ರೆ ಮನುಷ್ಯರಾ ನೀವು? ನಿಮ್ಮ ತಟ್ಟೆಯಲ್ಲಿ ಹೆಗಣ ಬಿದ್ದಿದ್ದೆ ನನ್ನ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದೀರಾ?"

"ನಮ್ಮ ಸಂಕಟ ನಮಗೆ ಗೊತ್ತು. ಏನು ಮಾಡಬೇಕು ಅನ್ನೋದು ನಮಗೆ ಗೊತ್ತಿದೆ ಹೇಗೆ ಸರಿ ಮಾಡಬೇಕು ಹೇಗೆ ಅನುಸರಿಸಿಕೊಳ್ಳಬೇಕು ಅನ್ನೋ ಅರಿವು ನಮಗಿದೆ. ಮತ್ತೊಬ್ಬರ ಬದುಕು ನಾಶ ಮಾಡಲು ಯಾಕೆ ಸೋಷಿಯಲ್ ಮೀಡಿಯಾವನ್ನು ಬಳಸುತ್ತೀರಾ?' ಒಳ್ಳೆದಕ್ಕೆ ಬಳಸಿಕೊಳ್ಳಿ. ಹೌದು ಸೈದ್ಧಾಂತಿಕವಾಗಿ ನನ್ನ ನಿಲುವುಗಳಿವೆ. ನನ್ನದು. ಅದನ್ನು ನಾನು ಮಾತನಾಡುತ್ತೇನೆ. ನೀವು ಏನು ಬೇಕೋ ಮಾತನಾಡಿ. ಅದು ಬಿಟ್ಟು ಅದಕ್ಕೂ ನನ್ನ ವೈಯಕ್ತಿಕ ಬದುಕನ್ನು ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಎಳೆದು ತರುತ್ತೀರಾ. ನಮಗೂ ವೈಯಕ್ತಿಯ ಬದುಕು ಇದೆ. ಅದಕ್ಕೆ ಗೌರವ ಕೊಡಿ.

"ಮನೆಯಲ್ಲಿ ಪೇಷಂಟ್‌ಗಳು, ಡಿಪ್ರೆಷನ್‌ಗೆ ಹೋದವರು ಇರ್ತಾರೆ ಅರ್ಥ ಮಾಡ್ಕೊಳ್ಳಿ. ನಿಮಗೆ ಬೇಕಾದಂತೆ ನಿಮ್ಮ ಆಲೋಚನೆಗೆ ಬಂದಂತೆ ಬರೆದುಕೊಂಡು ಕೂರಬೇಡಿ. ಅದು ಇನ್ನೊಬ್ಬರ ಬದುಕನ್ನು ತಿಂದು ಬಿಡುತ್ತೆ. ನನ್ನ ಬದುಕಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇನ್ನು ಏನೇನೋ ಆಗಿಬಿಡುತ್ತಿತ್ತು. ಆದರೆ ಏನು ಆಗದೇ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದೇನೆ. ನನಗೆ ಎಲ್ಲದರ ಅರಿವು ಇದೆ. ಇನ್ನೊಬ್ಬರ ವೈಯಕ್ತಿಯ ಜೀವನದಲ್ಲಿ ಚೆಲ್ಲಾಟ ಆಡಬೇಡಿ. ಕೆಟ್ಟದಾಗಿ ಮಾತನಾಡಬೇಡಿ. ಇನ್ನು ಜೀವನದ ಬಗ್ಗೆ ನಿಮ್ಮ ಪೇಜ್‌ನಲ್ಲಿ ಬರೆಯಬೇಡಿ."

"ಆ ಭಗವಂತ ಒಂದು ದಿನ ನಿಮ್ಮ ಜೀವನದಲ್ಲೂ ಆಟ ಆಡುತ್ತಾನೆ. ಆಗ ನೀವು ಅನುಭವಿಸುತ್ತೀರಿ. ಅವತ್ತು ನನ್ನ ಶಾಪ ನಿಮಗೆ ತಟ್ಟುತ್ತದೆ. ನೆನಪಿಟ್ಟುಕೊಳ್ಳಿ."

More from Filmibeat

English summary
Kirik keerthi Breaks Silence On Separation Rumours With wife Arpitha. he slammed reports of his separation from his wife. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X