For Quick Alerts
  ALLOW NOTIFICATIONS  
  For Daily Alerts

  ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರಕ್ಕೆ ಪ್ರಶಾಂತ್ ನೀಲ್ ಸಾಥ್

  |

  ಕಣ್ಸನ್ನೆ ಮೂಲಕ ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಕನ್ನಡಕ್ಕೆ ಬರ್ತಿದ್ದಾರೆ. ಸ್ಯಾಂಡಲ್ ವುಡ್ ಗೆ ಮೊದಲ ಸಲ ಹೆಜ್ಜೆ ಇಡ್ತಿರುವ ನಾಯಕಿಯನ್ನ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸ್ವಾಗತಿಸುತ್ತಿದ್ದಾರೆ.

  ಕನ್ನಡಕ್ಕೆ ಅಂದ್ರೆ ಕನ್ನಡ ಸಿನಿಮಾ ಮಾಡ್ತಿದ್ದಾರೆ ಅಂದುಕೊಳ್ಳಬೇಡಿ. ಪ್ರಿಯಾ ವಾರಿಯರ್ ಅಭಿನಯದ ಮಲಯಾಳಂ ಸಿನಿಮಾ 'ಒರು ಅದಾರ್ ಲವ್' ಕನ್ನಡಕ್ಕೆ ಡಬ್ ಆಗಿದ್ದು, ಕನ್ನಡದಲ್ಲಿ 'ಕಿರಿಕ್ ಲವ್ ಸ್ಟೋರಿ' ಹೆಸರಿನಲ್ಲಿ ತೆರೆಕಾಣುತ್ತಿದೆ.

  ಪ್ರಿಯಾ ವಾರಿಯರ್ ಮುಂದೆ ಡಮ್ಮಿ ಆಗೋದಳು ಸನ್ನಿ!

  ಫೆಬ್ರವರಿ 14 ರಂದು ಬಹುಭಾಷೆಯಲ್ಲಿ ಈ ಸಿನಿಮಾ ತೆರೆಕಾಣುತ್ತಿದ್ದು, ನಾಳೆ ಕನ್ನಡದಲ್ಲಿ ಆಡಿಯೋ ಲಾಂಚ್ ಆಗ್ತಿದೆ. ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದು, ಪ್ರಿಯಾ ವಾರಿಯರ್ ಸಿನಿಮಾದ ಕನ್ನಡ ಹಾಡುಗಳನ್ನ ರಿಲೀಸ್ ಮಾಡಲಿದ್ದಾರೆ.

  ಇದಕ್ಕೂ ಮುಂಚೆ ಪ್ರಿಯಾ ವಾರಿಯರ್ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಅಧಿಕೃತವಾಗಿ ಯಾವುದು ಪಕ್ಕಾ ಆಗಿರಲಿಲ್ಲ. ಇದೀಗ, ಮಲಯಾಳಂ ಸಿನಿಮಾ ಕನ್ನಡಕ್ಕೆ ಬರ್ತಿದ್ದು, ಬಹುಶಃ ಮುಂದಿನ ದಿನದಲ್ಲಿ ಪ್ರಿಯಾ ಕೂಡ ಕನ್ನಡ ಸಿನಿಮಾ ಮಾಡಬಹುದು.

  English summary
  Malayalam film Oru Addar Love dubbed in to Kannada as Kirik Love Story. Audio launch tomorrow (january 25th) by Prashanth Neel prashanth neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X