»   » ಹಿಂದಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ 'ಕಿರಿಕ್ ಪಾರ್ಟಿ' ಹೀರೋಯಿನ್

ಹಿಂದಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ 'ಕಿರಿಕ್ ಪಾರ್ಟಿ' ಹೀರೋಯಿನ್

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ಯಶಸ್ಸಿನ ನಂತರ ನಟಿ ಸಂಯುಕ್ತ ಹೆಗಡೆ ಮತ್ತೊಂದು ಸಕ್ಸಸ್ ಹುಡುಕಿ ಹೊರಟಿದ್ದಾರೆ.

ಆದ್ರೆ, ಈ ಬಾರಿ ಸಂಯುಕ್ತ ಬೆಳ್ಳಿತೆರೆಯಿಂದ ಕಿರುತೆರೆಗೆ ಕಾಲಿಟ್ಟಿದ್ದಾರೆ. ಹೌದು, ಹಿಂದಿಯ ಪ್ರತಿಷ್ಠಿತ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಸಾಹಸ ಪ್ರಧಾನವಾದ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸಂಯುಕ್ತ ಸ್ವರ್ಧಿಯಾಗಿ ಕಣ್ಣಕ್ಕಿಳಿಯಲಿದ್ದಾರೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

ಇದು, ಕಿರಿಕ್ ಹುಡುಗಿಯ ಬಹುದಿನಗಳ ಕನಸಾಗಿದ್ದು, ಈ ಕನಸನ್ನ ಈಗ ನನಸು ಮಾಡಿಕೊಂಡಿದ್ದಾರೆ

'ರೋಡೀಸ್' ರಿಯಾಲಿಟಿ ಶೋನಲ್ಲಿ 'ಕಿರಿಕ್ ಪಾರ್ಟಿ' ನಟಿ

'MTV' ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ 'ರೋಡೀಸ್' ರಿಯಾಲಿಟಿ ಶೋಗೆ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗಡೆ ಸ್ವರ್ಧಿಯಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ಈ ಬಾರಿ ಒಬ್ಬರೇ ಸ್ವರ್ದಿ

ಇತ್ತೀಚಿಗೆ ಪುಣೆಯಲ್ಲಿ ನಡೆದ ಆಡಿಷನ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಒಬ್ಬರೇ ಸ್ಪರ್ಧಿ ಸಂಯುಕ್ತ.

12 ಬಗೆಯೆ ನೃತ್ಯ ಮಾಡಿದ ಸಂಯುಕ್ತ ಹೆಗಡೆ

ಆಡಿಷನ್ ನಲ್ಲಿ ಸಂಯುಕ್ತ 12 ಬಗೆಯ ನೃತ್ಯವನ್ನ ಪ್ರದರ್ಶಿಸಿದ್ದಾರೆ. 'ಗಿಲ್ಹಾರಿಯನ್', 'ಬೆಲ್ಲಿ', 'ಪಿಂಗಾ', 'ಡ್ಯುಯೇಟ್' ಸೇರಿದಂತೆ ವಿವಿಧ ಬಗೆಯ ಡ್ಯಾನ್ಸ್ ಮಾಡಿ ಆಯ್ಕೆಗಾರರ ಮನ ಸೆಳೆದಿದ್ದಾರೆ.

'ರೋಡೀಸ್' ನನ್ನ ಬಾಲ್ಯದ ಕನಸಾಗಿತ್ತು

ನಟಿ ಸಂಯುಕ್ತ ಹೆಗಡೆಗೆ ನಟಿಸುಬೇಕೆಂಬ ಆಸೆ ಅದಾಗಿಯೇ ಬಂತಂತೆ. ಆದ್ರೆ, 8 ವರ್ಷದವಳಾಗಿದ್ದಾಗಿಲಿಂದಲೂ 'ರೋಡೀಸ್' ಕಾರ್ಯಕ್ರಮ ಸಂಯುಕ್ತ ಅವರ ಕನಸಾಗಿತ್ತಂತೆ.

ಕನಸು ಈಡೇರಿಸಿಕೊಂಡ ಸಂಯುಕ್ತ

ಬಹುದಿನಗಳ ತಮ್ಮ ಕನಸನ್ನ ಈಗ ಈಡೇರಿಸಿಕೊಂಡ ಸಂಯುಕ್ತ ಅವರಿಗೆ ಅತೀವ ಸಂತಸವಾಗಿದೆಯಂತೆ.

'ರಣ್ ವಿಜಯ್ ಸಿಂಗ್' ಅಂದ್ರೆ 'ಸಂಯುಕ್ತ'ಗೆ ಇಷ್ಟ

ಕಾರ್ಯಕ್ರಮ ನಿರೂಪಕ ರಣ್ ವಿಜಯ್ ಸಿಂಗ್ ಅವರನ್ನು ಭೇಟಿ ಮಾಡುವುದಕ್ಕೆ ಸಂಯುಕ್ತ ಉತ್ಸುಕರಾಗಿದ್ದಾರಂತೆ. ಯಾಕಂದ್ರೆ, ಸಂಯುಕ್ತ, ರಣ್ ವಿಜಯ್ ಅವರ ಅತಿ ದೊಡ್ಡ ಅಭಿಮಾನಿಯಂತೆ. ಅವರ ವ್ಯಕ್ತಿತ್ವ ಬಹಳ ಇಷ್ಟವಂತೆ"

ಇಂದಿನಿಂದ ಪ್ರಸಾರ

ಇಂದಿನಿಂದ 'MTV'ನಲ್ಲಿ 'ರೋಡೀಸ್' ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಶನಿವಾರ ಮತ್ತು ಭಾನುವಾರ ಸಂಜೆ 7 ಗಂಟೆಗೆ ಟೆಲಿಕಾಸ್ಟ್ ಆಗಲಿದೆ.

English summary
Samyuktha Hegde of Kirik Party fame is exploring new avenues. She recently auditioned for Roadies Rising in Pune. All of 18, she was the youngest contestant on the show,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada