ಕಿರಿಕ್ ಪಾರ್ಟಿಗೆ 7 ವರ್ಷ: ಹೊಸ ಅಪ್‌ಡೇಟ್ ಹಂಚಿಕೊಂಡ ನಟ ರಕ್ಷಿತ್ ಶೆಟ್ಟಿ

ಏಳು ವರ್ಷಗಳ ಹಿಂದೆ ಕನ್ನಡದಲ್ಲಿ ಒಂದು ಸೂಪರ್ ಆಗಿರೋ ಕಾಲೇಜು ಲವ್ ಸ್ಟೋರಿ ಬಿಡುಗಡೆಯಾಗಿತ್ತು. ಸರಳ ಕಥೆ, ಸರಳ ನಟನೆ, ಕಾಮಿಡಿ, ಲವ್, ಫ್ರೆಂಡ್‌ಶಿಪ್, ಕಾಲೇಜು, ಕ್ಯಾಂಪಸ್‌ಗಳ ಸುತ್ತ ಇದ್ದ ಸಿನಿಮಾ 'ಕಿರಿಕ್ ಪಾರ್ಟಿ' ಬಿಡುಗಡೆಯಾಗಿತ್ತು. ಈ ಸಿನಿಮಾಕ್ಕೆ ಜನರು ಕೊಟ್ಟ ಪ್ರೀತಿ ಕೂಡ ಹೆಚ್ಚು. ಕನ್ನಡಕ್ಕೆ ಮತ್ತಷ್ಟು ಹೊಸಬರನ್ನು ಪರಿಚಯಿಸಿದ ಕೀರ್ತಿ ಕೂಡ ಕಿರಿಕ್ ಪಾರ್ಟಿಗೆ ಇದೆ.

'ಕಿರಿಕ್ ಪಾರ್ಟಿ' 2016 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ತೆರೆ ಕಂಡು 7 ವರ್ಷಗಳೇ ಆಗಿವೆ. ಪರಂವಃ ಸ್ಟುಡಿಯೋಸ್‌ ಹಾಗೂ ಪುಷ್ಕರ್‌ ಫಿಲ್ಮ್ಸ್‌ ಬ್ಯಾನರ್‌ ಅಡಿ ಈ ಚಿತ್ರವನ್ನು ಜಿ.ಎಸ್.ಗುಪ್ತಾ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದರು. ರಿಷಬ್‌ ಶೆಟ್ಟಿ ಆಕ್ಷನ್‌ ಕಟ್‌ ಹೇಳಿದ್ದರು. ಇಂತಹದ್ದೇ ಮತ್ತೊಂದು ಸಿನಿಮಾ ಬೇಕು ಎಂಬ ಬೇಡಿಕೆ ಕನ್ನಡಿಗರಿಂದ ಬರುತ್ತಿತ್ತು. ಏಳು ವರ್ಷಗಳ ಬಳಿಕ ನಟ ರಕ್ಷಿತ್ ಶೆಟ್ಟಿ ಅಪ್‌ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ.

 Kirik Party Completed 7 Years: Actor Rakshith Shetty, Paramvah Studios Shared New Update

ಹೊಸ ಅಪ್‌ಡೇಟ್ ಹಂಚಿಕೊಂಡ ನಟ ರಕ್ಷಿತ್ ಶೆಟ್ಟಿ

ರಿಷಬ್​ ಶೆಟ್ಟಿ 'ಕಿರಿಕ್ ಪಾರ್ಟಿ'ಗೆ ಆಕ್ಷನ್ ಕಟ್ ಹೇಳಿದ್ದರು. ಈಗ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ರಕ್ಷಿತ್​ ಶೆಟ್ಟಿ ಕೂಡ ತಮ್ಮ ಸಿನಿಮಾಗೆ ನ್ಯಾಷನ್ಲ ಅವಾರ್ಡ್ ಪಡೆದು ದೊಡ್ಡ ಸ್ಟಾರ್ ಎನಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್, ಕಾಲಿವುಡ್ ಡಂದು ದೇಶದ ಬಹುಬೇಡಿಕೆಯ ನಟಿಯಾಗಿದ್ದಾರೆ. ಸಂಯುಕ್ತಾ ಹೆಗ್ಡೆ ಕೂಡ ಬೇರೆ ಭಾಷೆಯ ಸಿನಿಮಾಗಳಲ್ಲಿ ಜಾಗ ಕಂಡಿದ್ದಾರೆ. 7 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆಯಾಗಿದೆ. ಆದೂ ಜನ ಮಾತ್ರಾ ಕಿರಿಕ್ ಪಾರ್ಟಿಯನ್ನು ಮರೆತಿಲ್ಲ.

ಇಂತಹ ಸಿನಿಮಾ ಬೇಕೆ ಬೇಕು ಎಂದು ಕೇಳುತ್ತಲೇ ಇದ್ದಾರೆ. ಇಂತಹದ್ದೇ ಒಂದು ಬೇಡಿಕೆ ಇರುವ ವಿಡಿಯೋವನ್ನು ರಕ್ಷಿತ್ ಶೆಟ್ಟಿ ಮತ್ತು ಪರಂವಃ ಸ್ಟೂಡಿಯೋಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಒಂದು ದಿನ ಕಾಯಿರಿ ಹೊಸ ಅಪ್‌ಡೇಟ್ ನೀಡುತ್ತೇವೆ ಎಂದಿದ್ದಾರೆ.

 Kirik Party Completed 7 Years: Actor Rakshith Shetty, Paramvah Studios Shared New Update

ಈ ಸಲ ಪಾರ್ಟಿ ಜೋರು ಎಂದಿರುವ ರಕ್ಷಿತ್ ಶೆಟ್ಟಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಒಂದು ಕಾಮಿಡಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಪಾರ್ಟಿ ಬೇಕೆ ಬೇಕು ಎಂದು ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳು ಪೊಲೀಸರ ಪ್ರಶ್ನೆಗೆ "ನಾನು ಹೈಸ್ಕೂಲ್‌ನಲ್ಲಿ ಇರುವಾಗ ಕಿರಿಕ್‌ ಪಾರ್ಟಿ ನೋಡಿದ್ದೆ, ಈಗ ಕಾಲೇಜು ಮುಗಿಯುತ್ತಾ ಬಂತು, ಎಲ್ಲಿದೆ ಸಾರ್‌ ಪಾರ್ಟಿ" ಎಂದು ಕೇಳುತ್ತಾರೆ. ಮತ್ತೊಂದು ದೃಶ್ಯದಲ್ಲಿ "ಇವನು ಕಿರಿಕ್‌ ಪಾರ್ಟಿಗೆ ಅಡಿಕ್ಟ್‌ ಆಗಿದ್ದಾನೆ, ಅಂತಹದ್ದೇ ಇನ್ನೊಂದು ಸಿನಿಮಾ ನೋಡಿದರೆ ಸರಿಯಾಗ್ತಾನೆ" ಎಂದು ಡಾಕ್ಟರ್‌ ಹೇಳುವ ಕಾಮಿಡಿ ಸೀನ್‌ಗಳು ವಿಡಿಯೋದಲ್ಲಿವೆ.

"ಈ ಸಲ ಪಾರ್ಟಿ ಜೋರು!.. ನಿಮ್ಮೆಲ್ಲರ ಬೇಡಿಕೆ ಕೇಳಿಸಿದೆ, ಈ ಬಾರಿ ಇನ್ನಷ್ಟು ಕ್ರೇಜಿ ಪಾರ್ಟಿ ಆಗಲಿದೆ ಎಂಬ ಬಗ್ಗೆ ನಾನು ಭರವಸೆ ನೀಡುತ್ತೇನೆ. ನಾಳೆ ಹತ್ತು ಗಂಟೆ ಆರು ನಿಮಿಷಕ್ಕೆ ಈ ಕುರಿತು ಅಪ್‌ಡೇಟ್‌ ಹೊರಬೀಳಲಿದೆ" ಎಂದು ರಕ್ಷಿತ್‌ ಶೆಟ್ಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಪರಂವಃ ಸ್ಟುಡಿಯೋ 'ಬ್ಯಾಚುಲರ್‌ ಪಾರ್ಟಿ' ಎಂಬ ಸಿನಿಮಾವನ್ನು ಘೋಷಿಸಿತ್ತು. ನಾಳೆ ಇದರ ಬಗ್ಗೆ ಅಪ್‌ಡೇಟ್ ನೀಡುತ್ತಾರಾ ಅಥವಾ ಕಿರಿಕ್ ಪಾರ್ಟಿ 2 ಬಗ್ಗೆ ಅನೌನ್ಸ್‌ ಮಾಡುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ. ಆಗಿತ್ತು.

More from Filmibeat

English summary
7 years for Kirik Party: Rakshith Shetty shared new update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X