'ಕಿರಿಕ್ ಪಾರ್ಟಿ'ಗೆ 7 ವರ್ಷ: ಪರಂವಃದಿಂದ ಈ ಶೈಲಿಯ ಇನ್ನೊಂದು ಸಿನಿಮಾ ಯಾವಾಗ?

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಮೋಸ್ಟ್ ಸಕ್ಸಸ್‌ಪುಲ್ ಸಿನಿಮಾ ಸಾಲಿನಲ್ಲಿ 'ಕಿರಿಕ್ ಪಾರ್ಟಿ' ಕೂಡ ಮುಂಚೂಣಿಯಲ್ಲಿ ನಿಲ್ಲುತ್ತೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಬಂದಿರೋ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.

'ಕಿರಿಕ್ ಪಾರ್ಟಿ' ಬರೋವರೆಗೂ ಕನ್ನಡಿಗರಿಗೆ ಮಸ್ತ್ ಮಜಾ ಕೊಡುವ ಕಾಲೇಜ್ ಲವ್ ಸ್ಟೋರಿ ನೋಡುವುದಕ್ಕೆ ಸಿಕ್ಕಿರಲಿಲ್ಲ. 2016ರಲ್ಲಿ ತೆರೆಕಂಡಿದ್ದ ಈ ಸಿನಿಮಾ ನೋಡಿ ಕನ್ನಡಿಗರು ಕಳೆದು ಹೋಗಿದ್ದರು. ಇದೇ ಡಿಸೆಂಬರ್ 30ಕ್ಕೆ 'ಕಿರಿಕ್ ಪಾರ್ಟಿ' ರಿಲೀಸ್ 7 ವರ್ಷ ಪೂರೈಸಲಿದೆ. ಹೀಗಾಗಿ ಈ ಸಂದರ್ಭದಲ್ಲಿ ನೆಟ್ಟಿಗರು ಇಂತಹ ಕಾಲೇಜ್ ಲೈಫ್, ಎಂಟರ್‌ಟೈನಿಂಗ್ ಸಿನಿಮಾವನ್ನು ಯಾಕೆ ನಿರ್ಮಾಣ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Kirik Party completed 7 years, and netizens are asking paramvah studios for a Bachelor Party

'ಕಿರಿಕ್ ಪಾರ್ಟಿ' ಸಿನಿಮಾವನ್ನು ರಕ್ಷಿತ್ ಶೆಟ್ಟಿಯ ಪರಂವಾ ಸ್ಟುಡಿಯೋ ನಿರ್ಮಾಣ ಮಾಡಿತ್ತು. ಈ ಏಳು ವರ್ಷಗಳಲ್ಲಿ ಪರಂವಃ ಸ್ಟುಡಿಯೋದಿಂದ ಹಲವು ಸಿನಿಮಾ ಬಂದಿವೆ. ಬೇರೆ ಶೈಲಿಯ ಸಿನಿಮಾಗಳು ತೆರೆಕಂಡು ಯಶಸ್ಸು ಕೂಡ ಗಳಿಸಿದೆ. ಆದರೆ, ಕಿರಿಕ್ ಪಾರ್ಟಿ ಜಾನರ್ ಸಿನಿಮಾ ತೆರೆಕಂಡಿಲ್ಲ. ಆದರೆ, ಸಿನಿಪ್ರಿಯರ ಆಸೆಯಂತೆ ಪರಂವಾದಿಂದ ಈ ಶೈಲಿಯ ಸಿನಿಮಾವೊಂದು ಕಂಪ್ಲೀಟ್ ಆಗಿ ರೆಡಿಯಾಗಿದೆ.

ಕಳೆದ ವರ್ಷ ಪರಂವಃ ಸ್ಟುಡಿಯೋದಿಂದ 'ಬ್ಯಾಚುಲರ್ ಪಾರ್ಟಿ' ಅನೌನ್ಸ್ ಆಗಿತ್ತು. ದಿಗಂತ್, ರಿಷಬ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ಇದೇ ವೇಳೆ 'ಕಾಂತಾರ' ಮೆಗಾ ಹಿಟ್ ಆಗಿದ್ದರಿಂದ ರಿಷಬ್ ಶೆಟ್ಟಿ ಬ್ಯುಸಿಯಾಗಿಬಿಟ್ಟರು. ಹೀಗಾಗಿ ಅವರ ಜಾಗಕ್ಕೆ ಲೂಸ್ ಮಾದ ಯೋಗಿ ಬಂದಿದ್ದರು. ದಿಗಂತ್, ಲೂಸ್ ಮಾದ ಯೋಗ, ಅಚ್ಯುತ್ ಕುಮಾರ್ ಕಾಂಬಿನೇಷನ್‌ನಲ್ಲಿ ಬರ್ತಿರೋ 'ಬ್ಯಾಚುಲರ್ ಪಾರ್ಟಿ' ಸಿಕ್ಕಾಪಟ್ಟೆ ಎಂಟರ್‌ಟೈನಿಂಗ್ ಆಗಿದೆ ಅನ್ನೋದು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿರೋ ಸುದ್ದಿ.

ರಕ್ಷಿತ್ ಶೆಟ್ಟಿಯ ಸೆವೆನ್ ಆಡ್ಸ್ ತಂಡದ ಸದಸ್ಯ ಅಭಿಜಿತ್ ಮಹೇಶ್ ಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಇದೊಂದು ಮಸ್ತ್ ಎಂಟರ್‌ಟೈನಿಂಗ್ ಮೂವಿ ಎಂದು ಹೇಳಲಾಗುತ್ತಿದೆ. ಲವ್ ಲೈಫ್ ಹಾಗೂ ಮ್ಯಾರೇಜ್ ಅನ್ನು ಸ್ಟೈಲಿಷ್ ಆಗಿ ವಿಡಂಬನಾತ್ಮಕವಾಗಿ ಬ್ಯಾಚುಲರ್ ಪಾರ್ಟಿಯಲ್ಲಿ ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Kirik Party completed 7 years, and netizens are asking paramvah studios for a Bachelor Party

ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಈ ಮೂವರು ಒಂದೇ ಸಿನಿಮಾದಲ್ಲಿ ಇದ್ಮೇಲೆ ಹಾಸ್ಯದ ಸನ್ನಿವೇಶಗಳು ಹೇಗಿರಬಹುದು ಅಂತ ಊಹಿಸಿಕೊಳ್ಳಬಹುದು. ಸದ್ಯ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಹುತೇಕ ಸಿನಿಮಾ ಮುಗಿದೆ. ಇನ್ನೇನು ಬಿಡುಗಡೆ ರೆಡಿಯಾಗಿದೆ. ಆದರೆ, ಪರಂವಾ: ಸ್ಟುಡಿಯೋ ಇನ್ನೂ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.

ಸ್ಯಾಂಡಲ್‌ವುಡ್ ಮಂದಿಯ ಪ್ರಕಾರ, 7 ವರ್ಷಗಳ ಹಿಂದೆ 'ಕಿರಿಕ್ ಪಾರ್ಟಿ' ಪ್ರೇಕ್ಷಕರಿಗೆ ಕಿಕ್ ಕೊಟ್ಟಂತೆ 'ಬ್ಯಾಚುಲರ್ ಪಾರ್ಟಿ' ಕೂಡ ಮಸ್ತ್ ಮಜಾ ಕೊಡುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

More from Filmibeat

English summary
After 7 years of Kirik Party release people asking for same kind of movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X