ಸೈಮಾ ಅಂಗಳದಲ್ಲಿ 'ಕಿರಿಕ್' ಹುಡುಗರದ್ದೇ ಹವಾ..!

By Suneel

ಸ್ಯಾಂಡಲ್ ವುಡ್ ನ ಇತ್ತೀಚಿನ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆಯುತ್ತಿವೆ. ಅಲ್ಲದೇ ವಿದೇಶಗಳಲ್ಲೂ ಬಿಡುಗಡೆ ಭಾಗ್ಯವನ್ನು ಪಡೆದು ಉತ್ತಮ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಿವೆ. ಅಂತಹ ಚಿತ್ರಗಳ ಪಟ್ಟಿಯಲ್ಲಿ 'ಕಿರಿಕ್ ಪಾರ್ಟಿ' ಚಿತ್ರದ್ದು ದಾಖಲೆ ಎನ್ನಬಹುದು. ಕಾರಣ ಚಿತ್ರ 150 ದಿನಗಳು ಭರ್ಜರಿ ಯಶಸ್ಸು ಕಂಡಿರುವುದಲ್ಲದೇ ಸಾಲು ಸಾಲಾಗಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ನಟ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಈಗಾಗಲೇ ಸೌತ್ ಫಿಲ್ಮ್ ಫೇರ್ ನಲ್ಲಿ ಬೆಸ್ಟ್ ಆಕ್ಟರ್, ಅತ್ಯುತ್ತಮ ಗೀತೆರಚನಾಕಾರ ಪ್ರಶಸ್ತಿ ಸೇರಿದಂತೆ 'ಐಫಾ ಉತ್ಸವಂ' ನಲ್ಲು ಇದೇ ಚಿತ್ರಕ್ಕಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ರವರು ಸಹ ಫಿಲ್ಮ್ ಫೇರ್ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದಿದ್ದಾರೆ. ಇದರ ಜೊತೆಗೆ ಈಗ ಅತ್ಯುತ್ತಮ ಸಿನಿಮಾ ಸೇರಿದಂತೆ 'ಕಿರಿಕ್ ಪಾರ್ಟಿ' ಟೀಮ್ 2017 ನೇ ಸಾಲಿನ ಸೈಮಾ ಅವಾರ್ಡ್ ನಲ್ಲಿ ಬರೋಬರಿ 6 ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.

'ಕಿರಿಕ್ ಪಾರ್ಟಿ' ಚಿತ್ರತಂಡ 6 ಸೈಮಾ ಪ್ರಶಸ್ತಿಗಳನ್ನು ಯಾವ ಯಾವ ವಿಭಾಗದಿಂದ ಪಡೆದಿದೆ ಎಂಬುದರ ಲಿಸ್ಟ್ ಇಲ್ಲಿದೆ ನೋಡಿ.

ಅತ್ಯುತ್ತಮ ಸಿನಿಮಾ

ಅತ್ಯುತ್ತಮ ಸಿನಿಮಾ

ಮೊದಲಿಗೆ ಹೇಳುವುದಾದರೆ 'ಕಿರಿಕ್ ಪಾರ್ಟಿ' ಚಿತ್ರ ಅತ್ಯುತ್ತಮ ಸಿನಿಮಾಗಳ ವಿಭಾಗದಲ್ಲೇ ವಿಜೇತಗೊಂಡಿದೆ. ಈ ಚಿತ್ರಕ್ಕೆ ಸ್ಪರ್ಧಿಯಾಗಿ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' 'ಯೂ ಟರ್ನ್', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಆದರೆ ಹೆಸರಿಗೆ ತಕ್ಕಂತೆ ಸಿನಿಮಾ ಸೈಮಾ ಅವಾರ್ಡ್ ಅಂಗಳದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಅತ್ಯುತ್ತಮ ಗೀತೆ ರಚನಾಕಾರ ಪ್ರಶಸ್ತಿ

ಅತ್ಯುತ್ತಮ ಗೀತೆ ರಚನಾಕಾರ ಪ್ರಶಸ್ತಿ

ಯೂಟ್ಯೂಬ್ ನಲ್ಲಿ ಮೊಟ್ಟ ಮೊದಲು ಅತಿ ಹೆಚ್ಚು ಬಾರಿ ನೋಡಲಾದ ಕನ್ನಡ ವಿಡಿಯೋ ಹಾಡು 'ಕಿರಿಕ್ ಪಾರ್ಟಿ'ಯ 'ಬೆಳಗೆದ್ದು ಯಾರ ಮುಖವ ನಾನು ನೋಡಲಿ' ಸಾಂಗ್. ಈ ಹಾಡು ಇದುವರೆಗೆ ಯೂಟ್ಯೂಬ್ ನಲ್ಲಿಯೇ 3 ಕೋಟಿ ಬಾರಿ ವೀಕ್ಷಣೆ ಪಡೆದಿದೆ. ಈ ಹಾಡಿನ ಕ್ರೇಜ್ ಎಷ್ಟಿದೆ ಎಂದರೆ ಚಿತ್ರದಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಆಕ್ಟ್ ಮಾಡಿರುವ ರೀತಿ ಮಕ್ಕಳಿಂದ ಆಕ್ಟ್ ಮಾಡಿಸಿ ವಿಡಿಯೋ ರಚಿಸಲಾಗಿದೆ. ಇಷ್ಟೆಲ್ಲಾ ದಾಖಲೆ ಬರೆದಿರುವ ಈ ಸಾಂಗ್ ಬರೆದಿರುವ ಧನಂಜಯ್ ರಂಜನ್ ರವರಿಗೆ ಸೈಮಾ ಅತ್ಯುತ್ತಮ ಗೀತೆ ರಚಾನಾಕಾರ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಸಂಗೀತ ನಿರ್ದೇಶಕ

ಅತ್ಯುತ್ತಮ ಸಂಗೀತ ನಿರ್ದೇಶಕ

'ಕಿರಿಕ್ ಪಾರ್ಟಿ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಬಿ ಅಜನೀಶ್ ಲೋಕನಾಥ್ ರವರಿಗೂ ಸೈಮಾ ಅಂಗಳದಲ್ಲಿ ಈ ಚಿತ್ರದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.

ಪೋಷಕ ನಟ ಪ್ರಶಸ್ತಿ

ಪೋಷಕ ನಟ ಪ್ರಶಸ್ತಿ

ಚಿತ್ರದಲ್ಲಿ ಕರ್ಣನ(ರಕ್ಷತ್ ಶೆಟ್ಟಿ) ಗೆಳೆಯನಾಗಿ ಅಭಿನಯಿಸಿ ಹೊಡೆದಿದ್ದು ಕಡಿಮೆ ಡೈಲಾಗ್ ಆದರೂ ಹೆಚ್ಚು ಗಮನ ಸೆಳೆದವರು ಮೈಸೂರು ಮೂಲದ ಚಂದನ್ ಆಚಾರ್. ಇವರು ಈ ಹಿಂದೆ 'ರ್ಯಾಂಬೊ' ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದರು. ಈಗ 'ಕಿರಿಕ್ ಪಾರ್ಟಿ' ಚಿತ್ರದಲ್ಲಿನ ಅವರ ಅಭಿನಯಕ್ಕೆ ಸೈಮಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಉದಯೋನ್ಮುಖ ನಟಿ

ಅತ್ಯುತ್ತಮ ಉದಯೋನ್ಮುಖ ನಟಿ

ನಟಿ ರಶ್ಮಿಕಾ ಮಂದಣ್ಣ ಅವರ ನಿಜವಾದ ಹೆಸರಿಗಿಂತ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಸಾನ್ವಿಯಾಗಿಯೇ ಉಳಿದಿದ್ದಾರೆ. ಸಂಪೂರ್ಣ ಚಿತ್ರದಲ್ಲಿ ಕಾಣಿಸಿಕೊಳ್ಳದಿದ್ದರು ಅವರ ಅಭಿನಯ, ಚಿತ್ರದಲ್ಲಿ ಕಾಣಿಸಿಕೊಂಡ ಅವರ ಮುಗ್ಧತೆ, ಗ್ಲಾಮರ್, ತುಂಟತನದಿಂದಾಗಿ 'ಕಿರಿಕ್ ಪಾರ್ಟಿ' ಚಿತ್ರವನ್ನು ಹಲವು ಭಾರಿ ನೋಡಿದವರು ಇದ್ದಾರೆ. ಮೊದಲ ಚಿತ್ರದಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದ ಇವರಿಗೆ ಸೈಮಾ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಲಭಸಿದೆ.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

'ಕಿರಿಕ್ ಪಾರ್ಟಿ' ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದವರು ರಕ್ಷಿತ್ ಶೆಟ್ಟಿಯೇ ಆದರು ತೆರೆ ಮೇಲೆ ಉತ್ತಮವಾಗಿ ತರಲು ಶ್ರಮಿಸಿದವರು ರಿಷಬ್ ಶೆಟ್ಟಿ. ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನರ್ ಸಿನಿಮಾ ನೀಡಿದ ಇವರ 'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶನಕ್ಕೆ ಸೈಮಾ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಲಭಿಸಿದೆ.

ಬೆಸ್ಟ್ ಎಂಟರ್‌ಟೈನರ್ ಪ್ರಶಸ್ತಿ

ಬೆಸ್ಟ್ ಎಂಟರ್‌ಟೈನರ್ ಪ್ರಶಸ್ತಿ

ಇನ್ನು ಚಿತ್ರದಲ್ಲಿ ಕಿರಿಕ್ ಕರ್ಣನಾಗಿ ಬಣ್ಣ ಹಚ್ಚುವುದರ ಮೂಲಕ ತಮ್ಮದೇ ಕಥೆಗೆ ನಾಯಕನಾಗಿ ಅಭಿನಯಿಸಿದ ರಕ್ಷಿತ್ ಶೆಟ್ಟಿ ಅವರಿಗೆ ಈ ವರ್ಷದ ಬೆಸ್ಟ್ ಎಂಟರ್‌ ಟೈನರ್ ಎಂದು ಸೈಮಾ ಪ್ರಶಸ್ತಿ ನೀಡಲಾಗಿದೆ.

More from Filmibeat

English summary
Kirik Party film team has bagged six awards at the recently-concluded SIIMA (South Indian International Movie Awards).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X