»   » ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್

ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್

Posted By:
Subscribe to Filmibeat Kannada

ಸ್ವಮೇಕ್ ಸಿನಿಮಾಗಳಿಗಿಂತ ರೀಮೇಕ್ ಚಿತ್ರಗಳಿಗೆ ಹೆಚ್ಚು ಒತ್ತು ನೀಡುವ ಸ್ಯಾಂಡಲ್ ವುಡ್ ನಲ್ಲಿ ಕನ್ನಡ ಸಿನಿಮಾವೊಂದು ಪರಭಾಷೆಯಲ್ಲಿ ರೀಮೇಕ್ ಆಗಲಿದೆ ಅಂದ್ರೆ ಖಂಡಿತ ಅದು ಕನ್ನಡಿಗರು ಹೆಮ್ಮೆ ಪಡುವ ಸುದ್ದಿ ತಾನೆ.? ಇಂತಿಪ್ಪ ಸಂತಸದ ಸುದ್ದಿಯನ್ನ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಇಂದು ನೀಡಿದ್ದಾರೆ.

ಹೌದು... ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯದ, ರಿಶಬ್ ಶೆಟ್ಟಿ ನಿರ್ದೇಶನದ, ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಗಳ ಮೇಲೆ ರೆಕಾರ್ಡ್ ಗಳನ್ನು ಕ್ರಿಯೇಟ್ ಮಾಡಿದ 'ಕಿರಿಕ್ ಪಾರ್ಟಿ' ಸಿನಿಮಾ ಪರಭಾಷೆಗೆ ರೀಮೇಕ್ ಆಗುತ್ತಿದೆ. ಮುಂದೆ ಓದಿರಿ...


ಬಾಲಿವುಡ್ ನಲ್ಲಿ ರೀಮೇಕ್ ಆಗಲಿದೆ ಕನ್ನಡದ 'ಕಿರಿಕ್ ಪಾರ್ಟಿ'

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಬಾಲಿವುಡ್ ನಲ್ಲಿ ರೀಮೇಕ್ ಆಗಲಿದೆ. Kyta Productions ಎಂಬ ಸಂಸ್ಥೆ, 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್ ಖರೀದಿಸಿದೆ. ಈ ವಿಚಾರವನ್ನ ಸ್ವತಃ ರಕ್ಷಿತ್ ಶೆಟ್ಟಿ ಖಚಿತ ಪಡಿಸಿದ್ದಾರೆ.


'ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!


ಇದೇ ವರ್ಷ ಸೆಟ್ಟೇರಲಿದ್ಯಂತೆ ಸಿನಿಮಾ

'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ವರ್ಷನ್ ಇದೇ ವರ್ಷಾಂತ್ಯದಲ್ಲಿ ಸೆಟ್ಟೇರಲಿದ್ಯಂತೆ. ಬರೀ ಬಾಲಿವುಡ್ ನಲ್ಲಿ ಮಾತ್ರ ಅಲ್ಲ, ಟಾಲಿವುಡ್ ನಲ್ಲಿಯೂ 'ಕಿರಿಕ್ ಪಾರ್ಟಿ' ಸಿನಿಮಾ ರೀಮೇಕ್ ಆಗಲಿದೆ. ಆ ಚಿತ್ರವೂ ಇದೇ ವರ್ಷ ಸೆಟ್ಟೇರಲಿದೆ.


ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ


ತಮಿಳು ಹಾಗೂ ಮಲೆಯಾಳಂನಲ್ಲಿಯೂ ಡಿಮ್ಯಾಂಡ್

'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆಯಲು ಕಾಲಿವುಡ್ ಹಾಗೂ ಮಾಲಿವುಡ್ ನಲ್ಲಿಯೂ ಡಿಮ್ಯಾಂಡ್ ಇದ್ಯಂತೆ.


ದಾಖಲೆ ಬೆಲೆಗೆ ಮಾರಾಟ

ಮೂಲಗಳ ಪ್ರಕಾರ, ದಾಖಲೆ ಬೆಲೆಗೆ 'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ಹಕ್ಕುಗಳು ಬಿಕರಿ ಆಗಿದೆ.


'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ರೈಟ್ಸ್ ಗೆ ಅಷ್ಟೊಂದು ಬೆಲೆಯೇ.? ಅಬ್ಬಬ್ಬಾ.!


English summary
Kyta Productions has bought the Hindi Remake rights of Kannada Movie Kirik Party. The project will go on floor by the end of this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada