For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ' ನೋಡಿ ಎಂಜಾಯ್ ಮಾಡಿದ ತೆಲುಗು ನಟ ಯಾರು.?

  By Harshitha
  |

  ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ 'ಕಿರಿಕ್ ಪಾರ್ಟಿ' ಸಿನಿಮಾ ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ಪಕ್ಕದ ಹೈದರಾಬಾದ್ ನಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ ಅಂದ್ರೆ ನೀವು ನಂಬ್ತೀರಾ.?

  ನಂಬಲ್ಲ ಅಂತ ನೀವು ಮೂಗು ಮುರಿಯುವ ಹಾಗೆ ಇಲ್ಲ, ಯಾಕಂದ್ರೆ.... ಹೈದರಾಬಾದ್ ನಲ್ಲಿ 'ಕಿರಿಕ್ ಪಾರ್ಟಿ' ಹೌಸ್ ಫುಲ್ ಆಗಿರುವ ಸುದ್ದಿ ನೀಡಿರುವುದು ಅಲ್ಲಿನ ಟಾಲಿವುಡ್ ಸ್ಟಾರ್.! ಯಾರವರು ಅಂತ ತಿಳಿದುಕೊಳ್ಳುವ ಕುತೂಹಲ ಇದ್ಯಾ.? ಮುಂದೆ ಓದಿ....

  'ಕಿರಿಕ್ ಪಾರ್ಟಿ' ಚಿತ್ರ ನೋಡಿದ ಅಲ್ಲು ಸಿರೀಶ್

  'ಕಿರಿಕ್ ಪಾರ್ಟಿ' ಚಿತ್ರ ನೋಡಿದ ಅಲ್ಲು ಸಿರೀಶ್

  'ಕಿರಿಕ್ ಪಾರ್ಟಿ' ಚಿತ್ರವನ್ನ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೀಕ್ಷಿಸಿದ್ದಾರೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

  'ಕಿರಿಕ್ ಪಾರ್ಟಿ' ನೋಡಿದ ಅಲ್ಲು ಸಿರೀಶ್ ಏನಂದರು.?

  'ಕಿರಿಕ್ ಪಾರ್ಟಿ' ನೋಡಿದ ಅಲ್ಲು ಸಿರೀಶ್ ಏನಂದರು.?

  ''ಕಿರಿಕ್ ಪಾರ್ಟಿ' ಚಿತ್ರವನ್ನ ವೀಕ್ಷಿಸಿದೆ. ಥಿಯೇಟರ್ ನಲ್ಲಿ ಇದು ನನ್ನ ಮೊಟ್ಟ ಮೊದಲ ಕನ್ನಡ ಚಿತ್ರ. ಅದರಲ್ಲೂ ಹೈದರಾಬಾದ್ ನಲ್ಲಿ ಹೌಸ್ ಫುಲ್ ಶೋ.. ಸಖತ್ ಮಜಾ ಕೊಡುವ ಸಿನಿಮಾ ಇದು. ತುಂಬಾ ಎಂಜಾಯ್ ಮಾಡಿದೆ'' ಅಂತ ಅಲ್ಲು ಸಿರೀಶ್ ಟ್ವೀಟ್ ಮಾಡಿದ್ದಾರೆ.[ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

  ಇದಕ್ಕಿಂತ ಬೇರೆ ಉದಾಹರಣೆ ಬೇಕಾ.?

  ಇದಕ್ಕಿಂತ ಬೇರೆ ಉದಾಹರಣೆ ಬೇಕಾ.?

  ಹೈದರಾಬಾದ್ ನಲ್ಲೂ ನಮ್ಮ ಕನ್ನಡ ಚಿತ್ರ 'ಕಿರಿಕ್ ಪಾರ್ಟಿ' ಹೌಸ್ ಫುಲ್ ಓಡ್ತಿದೆ ಎನ್ನೋಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ.?

  ಇನ್ನೂ ಹೆಚ್ಚು ಕನ್ನಡ ಚಿತ್ರಗಳು ಬರಬೇಕು

  ಇನ್ನೂ ಹೆಚ್ಚು ಕನ್ನಡ ಚಿತ್ರಗಳು ಬರಬೇಕು

  ''ನಮಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ. ಹೀಗಾಗಿ ಸಬ್ ಟೈಟಲ್ ಅವಶ್ಯಕ. ಹೈದರಾಬಾದ್ ನಲ್ಲಿ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆ ಆಗಲಿ ಅಂತ ಆಶಿಸುತ್ತೇನೆ'' ಎಂದು ಅಲ್ಲು ಸಿರೀಶ್ ಟ್ವೀಟ್ ಮಾಡಿದ್ದಾರೆ.

  ಎಲ್ಲೆಲ್ಲೂ 'ಕಿರಿಕ್ ಪಾರ್ಟಿ' ಹವಾ

  ಎಲ್ಲೆಲ್ಲೂ 'ಕಿರಿಕ್ ಪಾರ್ಟಿ' ಹವಾ

  'ಕಿರಿಕ್ ಪಾರ್ಟಿ' ಹವಾ ಎಲ್ಲೆಲ್ಲೂ ಜೋರಾಗಿದೆ ಎನ್ನುವುದಕ್ಕೆ ಇದು ಸಣ್ಣ ಸ್ಯಾಂಪಲ್ ಅಷ್ಟೆ. ಅಂದ್ಹಾಗೆ, ನೀವು 'ಕಿರಿಕ್ ಪಾರ್ಟಿ' ಸಿನಿಮಾ ನೋಡಿದ್ರಾ.? ನೋಡಿದ್ರೆ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Kannada Actor Rakshit Shetty starrer 'Kirik Party' shows are Housefull in Hyderabad. Check out Allu Sirish's tweet...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X