»   » 'ಕಿರಿಕ್ ಪಾರ್ಟಿ' ಗಳಿಕೆಯಲ್ಲಿ ದಾಖಲೆ: ಕಲೆಕ್ಷನ್ ಗುಟ್ಟು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

'ಕಿರಿಕ್ ಪಾರ್ಟಿ' ಗಳಿಕೆಯಲ್ಲಿ ದಾಖಲೆ: ಕಲೆಕ್ಷನ್ ಗುಟ್ಟು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಬಿಡುಗಡೆಯಾಗಿ 50 ದಿನಗಳು ಸನಿಹದಲ್ಲಿದೆ. ಆದ್ರೆ, ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಕಿರಿಕ್ ಹುಡುಗರ ಹವಾ ಸ್ವಲ್ಪವೂ ಕಮ್ಮಿಯಾಗಿಲ್ಲ. ಇನ್ನೂ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆನ್ ಲೈನ್ ಬುಕ್ಕಿಂಗ್ ಜೋರಾಗಿಯೇ ನಡೆಯುತ್ತಿದೆ. ಥಿಯೇಟರ್ ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಕಳೆದ ಡಿಸೆಂಬರ್ 30 ರಂದು ಬಿಡುಗಡೆಯಾಗಿದ್ದ 'ಕಿರಿಕ್ ಪಾರ್ಟಿ' ಸದ್ಯ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಗಳಿಕೆಯಲ್ಲಿ ಇದುವರೆಗೂ ಯಾರು ಮಾಡದಂತಹ ಸಾಹಸ ಮಾಡಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಅಮೆರಿಕಾ, ಯೂರೋಪ್ ಸೇರಿದಂತೆ ಜಗತ್ತಿನಾದ್ಯಂತ ಗೆಲುವಿನ ನಾಗಲೋಟ ಮುಂದುವರೆಸಿದೆ.[ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ'ಯ ಹೊಸ ದಾಖಲೆ ಇದು..!]

ಹೌದು, ರಕ್ಷಿತ್ ಶೆಟ್ಟಿ ಪರಂವಾ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿದ್ದ ಚೊಚ್ಚಲ ಸಿನಿಮಾ 'ಕಿರಿಕ್ ಪಾರ್ಟಿ'ಯ ಇದುವರೆಗಿನ ಒಟ್ಟು ಕಲೆಕ್ಷನ್ ಎಷ್ಟು ಎಂದು ರಕ್ಷಿತ್ ಶೆಟ್ಟಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

'ಕಿರಿಕ್ ಪಾರ್ಟಿ' ಒಟ್ಟು ಕಲೆಕ್ಷನ್!

'ಕಿರಿಕ್ ಪಾರ್ಟಿ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಕಲೆಕ್ಷನ್ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾಹಿತಿ ನೀಡುತ್ತಿದ್ದರು. ಆದ್ರೆ, ಈ ಗೊಂದಲಗಳಿಗೆ ತೆರೆ ಎಳೆದ ಚಿತ್ರದ ನಿರ್ಮಾಪಕ ರಕ್ಷಿತ್ ಶೆಟ್ಟಿ, ಚಿತ್ರದ ಒಟ್ಟು ಗಳಿಕೆ ಎಷ್ಟು ಎಂದು ಬಹಿರಂಗಪಡಿಸಿದ್ದಾರೆ.[ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

40 ಕೋಟಿ ಗಳಿಸಿದೆ

ರಕ್ಷಿತ್ ಶೆಟ್ಟಿ ಹೇಳಿರುವ ಪ್ರಕಾರ 'ಕಿರಿಕ್ ಪಾರ್ಟಿ' ಇದುವರೆಗೂ ಒಟ್ಟು 40 ಕೋಟಿ ಗಳಿಸಿದೆಯಂತೆ.

20 ಕೋಟಿ ಲಾಭ

ಒಟ್ಟು 40 ಕೋಟಿ ಗಳಿಕೆಯಲ್ಲಿ ಬಾಡಿಗೆ, ಟ್ಯಾಕ್ಸ್ ಎಲ್ಲವೂ ಕಳೆದರೂ 20 ಕೋಟಿ ಲಾಭವಾಗಿದೆಯಂತೆ. ಇನ್ನೂ ಇದಕ್ಕೆ ಟಿವಿ ರೈಟ್ಸ್ ಸೇರಿದರೇ ಒಟ್ಟು ಮೊತ್ತ ಮತ್ತಷ್ಟು ಹೆಚ್ಚಾಗುತ್ತೆ.

ಟಿವಿ ರೈಟ್ಸ್ ಮಾರುವುದಿಲ್ಲ

'ಟಿವಿ ರೈಟ್ಸ್'ಗಾಗಿ ಚಾನಲ್‌ಗ‌ಳಿಂದ ಆಫರ್ ಗಳು ಬಂದಿದೆಯಂತೆ. ಆದರೆ, ಕಡಿಮೆ ಬೆಲೆಗೆ ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದು ರಕ್ಷಿತ್ ತೀರ್ಮಾನಿಸಿದ್ದಾರೆ. "ಇಷ್ಟು ದೊಡ್ಡ ಹಿಟ್‌ ಆದರೂ ಸರಿಯಾದ ಹಣ ಕೊಡಲಿಲ್ಲ ಅಂದರೆ, ನಾನು ಇಟ್ಟುಕೊಳ್ಳುತ್ತೇನೆಯೇ ಹೊರತು, ಕಡಿಮೆ ಬೆಲೆಗೆ ಮಾತ್ರ ಕೊಡುವುದಿಲ್ಲ. 10 ವರ್ಷದ ನಂತರ ನಮ್ಮದೇ ಚಾನಲ್‌ ಮಾಡಿದರೆ ನಾನೇ ಬಿಡುಗಡೆ ಮಾಡುತ್ತೀನಿ'' ಎಂದಿದ್ದಾರೆ.

ಅಮೆರಿಕಾದಲ್ಲಿ ದಾಖಲೆ

ಇನ್ನೂ "ಕಿರಿಕ್‌ ಪಾರ್ಟಿ' ಚಿತ್ರಕ್ಕೆ ಯೂರೋಪ್‌, ಅಮೇರಿಕಾ, ಸಿಂಗಾಪೂರ್, ದುಬೈ, ಜಪಾನ್‌, ಇಸ್ರೇಲ್‌ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಅಮೆರಿಕಾದಲ್ಲಿ ‘ರಂಗಿತರಂಗ' 50 ದಿನದಲ್ಲಿ ಮಾಡಿದ ದಾಖಲೆಯನ್ನ ಎರಡೇ ವಾರಗಳಲ್ಲಿ 'ಕಿರಿಕ್ ಪಾರ್ಟಿ' ಬ್ರೇಕ್ ಮಾಡುತ್ತಿದೆಯಂತೆ.[ಅಟ್ಲಾಂಟಾ ನಗರದಲ್ಲಿ ಮಿನುಗುತ್ತಿದೆ ಕನ್ನಡದ 'ಕಿರಿಕ್ ಪಾರ್ಟಿ']

ಹೈದ್ರಾಬಾದ್, ಚೆನ್ನೈನಲ್ಲಿ ಹೌಸ್ ಪುಲ್

ಹೈದ್ರಾಬಾದ್, ಚೆನ್ನೈಗಳಲ್ಲಿ ಎಲ್ಲಾ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆಯಂತೆ. ಇದು ಹೊರಗಿನ ರಾಜ್ಯಗಳಲ್ಲಿ ಕನ್ನಡ ಚಿತ್ರದ ಅತಿ ದೊಡ್ಡ ಪ್ರದರ್ಶನ ಕೂಡ ಆಗಿದೆಯಂತೆ.

ರಕ್ಷಿತ್ ಶೆಟ್ಟಿ ಮುಂದಿನ ಪ್ಲಾನ್

ತಮ್ಮ ಪರಂವಾ ಬ್ಯಾನರ್‌ನಿಂದ ಒಂದಿಷ್ಟು ಚಿಕ್ಕ ಚಿತ್ರಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ಮಿಕ್ಕಂತೆ ಮೊದಲು ಸಚಿನ್‌ ನಿರ್ದೇಶನದ ಚಿತ್ರದಲ್ಲಿ ನಟಿಸಿ, ಆ ನಂತರ ಸುದೀಪ್‌ ಅಭಿನಯದ "ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನು ಅವರು ಕೈಗೆತ್ತಿಕೊಳ್ಳುತ್ತಾರಂತೆ.

English summary
Kannada Actor Rakshit Shetty Starrer 'kirik Party' Movie has got a Tremendous Collection in Over all Box Office. According to Rakshit shetty Movie Has Grabbed 40 crore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada