twitter
    For Quick Alerts
    ALLOW NOTIFICATIONS  
    For Daily Alerts

    'ಕಿರಿಕ್ ಪಾರ್ಟಿ' ಹಾಡಿನ ವಿವಾದ ಸುಖಾಂತ್ಯ: ಮುನಿಸು ಮರೆತು ಒಂದಾದ ರಕ್ಷಿತ್-ಲಹರಿ ವೇಲು

    |

    ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಮತ್ತು ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಮುನಿಸು ಮರೆತು ಒಂದಾಗಿದ್ದಾರೆ. ಈ ಮೂಲಕ ಕಿರಿಕ್ ಪಾರ್ಟಿ ಸಿನಿಮಾದ ಹಾಡಿನ ವಿವಾದ ಸುಖಾಂತ್ಯವಾಗಿದೆ. ಇಂದು (ಜೂನ್ 29) ರಕ್ಷಿತ್ ಶೆಟ್ಟಿ, ಲಹರಿ ವೇಲು ಜೊತೆ ಫೋಟೋ ಶೇರ್ ಮಾಡುವ ಮೂಲಕ ಸುಮಾರು 5 ವರ್ಷಗಳ ಪ್ರಕರಣ ಇತ್ಯಾರ್ಥವಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

    Recommended Video

    ಅಂತ್ಯವಾಯ್ತು ವೇಲು ರಕ್ಷಿತ್ ಶೆಟ್ಟಿ ಮುನಿಸು | Rakshith Shetty | Lahari Velu | Filmibeat Kannada

    "ಏನನ್ನು ನೀಡಿಲ್ಲ ಮತ್ತೆ ಏನನ್ನು ತೆಗೆದುಕೊಂಡಿಲ್ಲ" ಎಂದು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಲಹರಿ ವೇಲು ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಜೊತೆ ಇರುವ ಫೋಟೋ ಶೇರ್ ಮಾಡಿರುವ ರಕ್ಷಿತ್, "ಒಂದು ಘಟನೆ, ಅನೇಕ ದೃಷ್ಟಿಕೋನಗಳು ಮತ್ತು ಆ ದೃಷ್ಟಿಕೋನಗಳನ್ನು ಹಂಚಿಕೊಂಡಾಗ ಮತ್ತು ಅರ್ಥಮಾಡಿಕೊಂಡಾಗ ನಾವು ಮಾನವರಂತೆ ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಲ್ಲವೂ ಪ್ರೀತಿ ಮತ್ತು ಪರಸ್ಪರ ಗೌರವದ ಸಂದರ್ಭದಲ್ಲಿ ಭೇಟಿಯಾದಾಗ. ಅದು ನಿಜವಾದ ಏಕೈಕ ಬೆಳವಣಿಗೆ" ಎಂದು ಬರೆದುಕೊಂಡಿದ್ದಾರೆ. ಮುಂದೆ ಓದಿ...

    ಏನಿದು ವಿವಾದ?

    ಏನಿದು ವಿವಾದ?

    2016ರಲ್ಲಿ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ನಟನೆಯ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಚಿತ್ರದ 'ಮಧ್ಯರಾತ್ರಿಲಿ ಹೈವೇ ರಸ್ತೇಲಿ' ಹಾಡನ್ನು ನಕಲು ಮಾಡಿ 'ಹೇ ಹೂ ಆರ್‌ಯೂ' ಹಾಡನ್ನು ತಯಾರಿಸಲಾಗಿದೆ ಎಂದು ಲಹರಿ ಆಡಿಯೋ ಸಂಸ್ಥೆಯ ಲಹರಿ ವೇಲು ದೂರು ನೀಡಿದ್ದರು. ಸಿನಿಮಾ ಬಿಡುಗಡೆ ಸಮಯದಲ್ಲಿ ಲಹರಿ ಸಂಸ್ಥೆ ಕೇಸ್ ದಾಖಲಿಸಿತ್ತು.

    ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್

    ಕೋರ್ಟ್ ನಲ್ಲಿ ಕೇಸ್ ಗೆದಿದ್ದ ರಕ್ಷಿತ್ ಮತ್ತು ತಂಡ

    ಕೋರ್ಟ್ ನಲ್ಲಿ ಕೇಸ್ ಗೆದಿದ್ದ ರಕ್ಷಿತ್ ಮತ್ತು ತಂಡ

    ಬಳಿಕ ಕಿರಿಕ್ ಪಾರ್ಟಿ ತಂಡ ಹಾಡಿಗೆ ಕತ್ತರಿ ಹಾಕಿ ಸಿನಿಮಾ ಬಿಡುಗಡೆ ಮಾಡಿದ್ದರು. ಬಳಿಕ ನ್ಯಾಯಾಲಯದ ಅದೇಶ ಬಂದ ಬಳಿಕ ಹಾಡನ್ನು ಬಿಡುಗಡೆ ಮಾಡಿದ್ದರು. ನಂತರ ಈ ಪ್ರಕರಣದಲ್ಲಿ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ತಂಡ ನ್ಯಾಯಾಲಯದಲ್ಲಿ ಗೆಲವು ಸಾಧಿಸಿತ್ತು.

    3 ವರ್ಷಗಳ ಬಳಿಕ ಮತ್ತೆ ಪ್ರಕರಣ ದಾಖಲಿಸಿದ್ದ ಲಹರಿ ಸಂಸ್ಥೆ

    3 ವರ್ಷಗಳ ಬಳಿಕ ಮತ್ತೆ ಪ್ರಕರಣ ದಾಖಲಿಸಿದ್ದ ಲಹರಿ ಸಂಸ್ಥೆ

    3 ವರ್ಷಗಳ ನಂತರ ಮತ್ತೆ ಲಹರಿ ಸಂಸ್ಥೆ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಹ ಸ್ಟುಡಿಯೋ ಮೇಲೆ ಪ್ರಕರಣ ದಾಖಸಿದ್ದರು. ಅನೇಕ ಸಮನ್ಸ್ ಗಳನ್ನು ನೀಡಲಾಗಿತ್ತು. ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗದೆ ಗೈರಾದ ಪರಮ್ವಾಹ್ ಸ್ಟುಡಿಯೋಸ್ ನ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ 2021 ಏಪ್ರಿಲ್ ನಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.

    ಓಡಿ ಹೋಗೋರಲ್ಲ, ತಕ್ಕ ಉತ್ತರವನ್ನೇ ಕೊಡ್ತೀವಿ: ರಿಷಬ್ ಶೆಟ್ಟಿಓಡಿ ಹೋಗೋರಲ್ಲ, ತಕ್ಕ ಉತ್ತರವನ್ನೇ ಕೊಡ್ತೀವಿ: ರಿಷಬ್ ಶೆಟ್ಟಿ

    ಏಪ್ರಿಲ್ ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದ ರಕ್ಷಿತ್

    ಏಪ್ರಿಲ್ ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದ ರಕ್ಷಿತ್

    2021, ಏಪ್ರಿಲ್ 12 ರಕ್ಷಿತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. "ನಾನು ಮನೆ ಬದಲಿಸಿದ್ದೆ ಹಾಗಾಗಿ ನನಗೆ ಮಾಹಿತಿ ಇರಲಿಲ್ಲ. ಆದರೆ ಅಜನೀಶ್ ನೋಟಿಸ್ ಅನ್ನೂ ಸಹ ನನ್ನ ಹಳೆಯ ಮನೆಗೆ ಕಳಿಸಿದ್ದರು, ನಮಗೆ ನೋಟಿಸ್ ತಲುಪಬಾರದೆಂದೇ ಅವರು ಹೀಗೆ ಮಾಡಿದ್ದರು ಎಂಬುದು ಇದರಿಂದಲೇ ಗೊತ್ತಾಗುತ್ತದೆ" ಲಹರಿ ಸಂಸ್ಥೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು.

    ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿಲ್ಲ- ರಕ್ಷಿತ್ ಶೆಟ್ಟಿ

    ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿಲ್ಲ- ರಕ್ಷಿತ್ ಶೆಟ್ಟಿ

    "ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಾವು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿಲ್ಲ. ನಾವು ಹಂಸಲೇಖ ಅವರ ಹಾಡಿನ ರಿಧಮ್ ಅನ್ನು ಮಾತ್ರ ಫಾಲೋ ಮಾಡಿದ್ದೀವಿ. ನೋಟ್ಸ್ ಕಾಪಿ ಮಾಡಿಲ್ಲ. ಮೆಲೋಡಿ ಅಥವಾ ಸಾಹಿತ್ಯ ನಕಲು ಮಾಡಿದ್ದರೆ ಮಾತ್ರ ಹಕ್ಕುಸ್ವಾಮ್ಯ ಉಲ್ಲಂಘನೆ ಆಗುತ್ತದೆ. ಆದರೆ ನಾವು ಹಾಡನ್ನು ನಕಲು ಮಾಡಿಲ್ಲ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು.

    ಪ್ರಕರಣ ಸುಖಾಂತ್ಯಕ್ಕೆ ಅಭಿಮಾನಿಗಳ ಮೆಚ್ಚುಗೆ

    ಪ್ರಕರಣ ಸುಖಾಂತ್ಯಕ್ಕೆ ಅಭಿಮಾನಿಗಳ ಮೆಚ್ಚುಗೆ

    ಇದೀಗ ಹಳೆಯದೆನ್ನೆಲ್ಲ ಮರೆತು ರಕ್ಷಿತ್ ಮತ್ತು ಲಹರಿ ವೇಲು ಒಂದಾಗಿದ್ದಾರೆ. ನ್ಯಾಯಾಲಯದಿಂದ ಹೊರಗೆ ಈ ವಿವಾದ ಇತ್ಯರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಮುನಿಸು ಮರೆತು ಒಂದಾಗಿರುವ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    English summary
    Kirik Party Song Copyright Row: Rakshit Shetty and Lahari Velu closed long running controversy.
    Tuesday, June 29, 2021, 15:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X