»   » ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ

ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ

Posted By:
Subscribe to Filmibeat Kannada

ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಕಮ್ಮಿ ಅಂತ ಗೊಣಗುವವರೆಲ್ಲ ಒಮ್ಮೆ 'ಕಿರಿಕ್ ಪಾರ್ಟಿ' ಅತ್ತ ತಿರುಗಿ ನೋಡಬೇಕು. ಯಾಕಂದ್ರೆ, ಕನ್ನಡಿಗರೇ ಹೆಮ್ಮೆ ಪಡುವ ಸುದ್ದಿಯೊಂದನ್ನ 'ಕಿರಿಕ್ ಪಾರ್ಟಿ' ಚಿತ್ರತಂಡ ಇಂದು ನೀಡಿದೆ. ಅದೇನು ಅಂದ್ರೆ, ಇಸ್ರೇಲ್ ನಲ್ಲಿ ಇಂದು 'ಕಿರಿಕ್ ಪಾರ್ಟಿ' ಚಿತ್ರ ಪ್ರದರ್ಶನ ಕಾಣುತ್ತಿದೆ.

ಇಸ್ರೇಲ್ ನಲ್ಲಿ ಕನ್ನಡ ಚಲನಚಿತ್ರವೊಂದರ ಪ್ರದರ್ಶನ ಆಗುತ್ತಿರುವುದು ಇದೇ ಮೊಟ್ಟ ಮೊದಲ ಬಾರಿಗೆ.! ಅಂದ್ರೆ ನೀವೇ ಊಹಿಸಿ... 'ಕಿರಿಕ್ ಪಾರ್ಟಿ' ಹವಾ ಹೇಗಿರಬಹುದು ಅಂತ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]ಈಗಾಗಲೇ ಅಮೇರಿಕಾ, ಯುಕೆ, ಆಸ್ಟ್ರೇಲಿಯಾ, ನ್ಯೂ ಝೀಲ್ಯಾಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ಬಿಡುಗಡೆಗೊಂಡು ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ 'ಕಿರಿಕ್ ಪಾರ್ಟಿ' ಈಗ ಇಸ್ರೇಲ್ ನಲ್ಲೂ ಜನರಿಂದ ಮೆಚ್ಚುಗೆ ಪಡೆಯುವುದರಲ್ಲಿ ಸಂದೇಹವಿಲ್ಲ.


25 ದಿನಗಳಲ್ಲಿ 25 ಕೋಟಿ ಕಲೆಕ್ಷನ್ ಮಾಡಿರುವ 'ಕಿರಿಕ್ ಪಾರ್ಟಿ' ಚಿತ್ರದ ಸೂತ್ರಧಾರ ರಿಶಬ್ ಶೆಟ್ಟಿ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಮುಂತಾದವರು ನಟಿಸಿರುವ ಅಪ್ಪಟ ಕಮರ್ಶಿಯಲ್ ಎಂಟರ್ ಟೇನರ್ ಸಿನಿಮಾ 'ಕಿರಿಕ್ ಪಾರ್ಟಿ'.


English summary
Kannada Actor Rakshit Shetty starrer 'Kirik Party' is the first Kannada Movie to get a show in Israel. 'Kirik Party' will be premiered today (Feb 3rd) in Israel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada