twitter
    For Quick Alerts
    ALLOW NOTIFICATIONS  
    For Daily Alerts

    ಇನ್ನೇನಿದ್ದರೂ ತಮಿಳು - ತೆಲುಗರ ನಡುವೆ ಹೋರಾಟ

    By Super
    |

    ಕನ್ನಡ ಕಿರುತೆರೆಯ ಪುಟ್ಟ ಮಾರುಕಟ್ಟೆಗೆ ನಾಲ್ಕು ಖಾಸಗಿ ಚಾನೆಲ್‌ಗಳು ತುಂಬಾನೇ ದುಬಾರಿಯಾಯಿತು ಅನ್ನುವ ಅನಿಸಿಕೆ ನಿಧಾನವಾಗಿ ನಿಜವಾಗುತ್ತಿದೆ. ಸುಪ್ರಭಾತ ಮತ್ತು ಕಾವೇರಿ ಚಾನೆಲ್‌ಗಳು ಅರ್ಧ ಬಾಗಿಲು ಮುಚ್ಚಿಯೇ ವ್ಯವಹಾರ ನಡೆಸುವ ಸ್ಥಿತಿ ತಲುಪಿವೆ.

    ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿಲಯದ (ಲೋಕಲ್‌) ಚಾನೆಲ್‌ಗಳು (ಸಿಟಿ ಕೇಬಲ್‌, ಇನ್‌ ಕೇಬಲ್‌, ಐಸ್‌ ಟೀವಿ) ಮತ್ತು ದೂರದರ್ಶನದ ಎರಡು ಚಾನೆಲ್‌ಗಳನ್ನು ಲೆಕ್ಕ ಹಾಕಿದರೆ ಕನಿಷ್ಠವೆಂದರೂ ಕನ್ನಡದಲ್ಲೀಗ ಹನ್ನೊಂದು ಚಾನೆಲ್‌ಗಳಿವೆ. ಆ ಪೈಕಿ ಸುಸ್ಥಿತಿಯಲ್ಲಿರುವುದೆಂದರೆ ದೂರದರ್ಶನ (ಚಂದನ), ಉದಯಾ (ಉದಯ, ಉಷೆ, ಉದಯ ನ್ಯೂಸ್‌) ಮತ್ತು ಈ ಟೀವಿ. ಅದಕ್ಕೆ ಕಾರಣವೂ ಇದೆ. ಈ ಮೂರು ಚಾನೆಲ್‌ಗಳ ಬುಡ ಭದ್ರವಾಗಿದೆ. ಉದಯ ಕನ್ನಡದ ಮೊದಲ ಖಾಸಗಿ ಚಾನೆಲ್‌ ಆಗಿದ್ದರಿಂದ ಸಹಜವಾಗಿಯೇ ಜಾಹೀರಾತು ನೀಡುವವರಿಗೆ ಇದೇ ಸೇಫ್‌ ಬೆಟ್‌.

    ಈ ಟೀವಿ ಚಾನೆಲ್‌ಗೆ ಹೈದರಾಬಾದ್‌ನಲ್ಲಿ ಬೇರುಗಳಿವೆ. ಈ ನಾಡು ಸಂಸ್ಥೆಯ ರಾಮೋಜಿ ರಾವ್‌ ಅವರು ಎಂಥಾ ನಷ್ಟವನ್ನಾದರೂ ತಾಳಿಕೊಳ್ಳಬಲ್ಲರು. ಒಟ್ಟು ಆರು ಭಾಷೆಗಳಲ್ಲಿ ಈಟೀವಿ ಚಾನೆಲ್‌ಗಳು ಚಾಲ್ತಿಯಲ್ಲಿವೆ. ಮದ್ಯ ಮತ್ತು ಸಿಗರೇಟು ಕಂಪನಿಯ ಜಾಹೀರಾತುಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸೋದಿಲ್ಲ ಅನ್ನೋದು ರಾಮೋಜಿರಾವ್‌ಪಾಲಿಸಿ. ಇತ್ತೀಚೆಗಷ್ಟೇ ಈ ಟೀವಿ ಜಾಹೀರಾತುಗಳ ಮುಖ ನೋಡುವಂತಾಗಿದೆ.

    ಉದಯ ಹಾಗೂ ಈ ಟೀವಿ ವೀಕ್ಷಕರ ಸಂಖ್ಯೆಯಲ್ಲಿ ಅಂಥ ವ್ಯತ್ಯಾಸವೇನಿಲ್ಲ ಅನ್ನುವ ವಾದವೂ ಇದೆ. ಪ್ರೇಕ್ಷಕರನ್ನು ತಲುಪುವುದರಲ್ಲಿ ಉದಯದ ಪಾಲು ಶೇ. 73 ಆದರೆ ಈ ಟೀವಿ ಪಾಲು ಶೇ. 60.

    ಭರವಸೆ : ಇವೆರಡರ ನಡುವೆ ಬಡಪಾಯಿ ಗಳಾಗಿರುವವರು ಸುಪ್ರಭಾತ ಮತ್ತು ಕಾವೇರಿ ಟೀವಿಯ ಮಾಲಿಕರು ಮತ್ತು ಪ್ರೇಕ್ಷಕರು. ಮಾಲಿಕರ ಪಾಲಿಗೆ ನಾಳೆ ಟೀಆರ್‌ಪಿ ಬರುತ್ತೆ ಎಂಬ ಭರವಸೆ. ಪ್ರೇಕ್ಷಕರಿಗೆ ನಾಳೆ ಒಳ್ಳೆಯ ಕಾರ್ಯಕ್ರಮ ಬರಬಹುದು ಎಂಬ ಆಸೆ - ಇವೆರಡರ ನಡುವೆ ತುಯ್ಯುತ್ತಿದ್ದ ಸುಪ್ರಭಾತ ಮತ್ತು ಯಂತ್ರ ಮೀಡಿಯ ಎಂಬ ಮಂತ್ರವಾದಿಗಳ ಕೈಗೆ ಸಿಕ್ಕ ಕಾವೇರಿ ಎರಡೂ ಫ್ಲಾಪ್‌ ಶೋಗಳ ಟಾಪ್‌ ಕ್ಲಾಸ್‌ ಚಾನಲ್‌ಗಳೇ.

    ಇತ್ತೀಚೆಗೆ ಚಾಲ್ತಿಯಲ್ಲಿರುವ ಸುದ್ದಿಯ ಪ್ರಕಾರ ಸುಪ್ರಭಾತ ಮುಚ್ಚವುದಕ್ಕೆ ಜಾಸ್ತಿ ದಿನ ಬೇಕಾಗಿಲ್ಲ. ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಮಂಜುನಾಥ್‌, ಅನಿಲ್‌ ಹಾಗೂ ಜಗದೀಶ್‌ ಸುಪ್ರಭಾತದ ಕೈ ಬಿಟ್ಟಿದ್ದಾರೆ. ತಮ್ಮದೇ ಆದ ಸದರ್ನ್‌ ಚಾನಲ್‌ ಎಂಬ ಸಂಗೀತವಾಹಿನಿ ಆರಂಭಿಸಿದ್ದಾರೆ. ಅದಕ್ಕೆ ಬೇಕಾದ ಹಣವೆಲ್ಲವೂ ಸುಪ್ರಭಾತ ಖಜಾನೆಯಿಂದ ಹೋಗಿದೆ ಅನ್ನೋದು ಸುದ್ದಿ. ಈ ನಡುವೆ ನಂಜುಂಡೇಗೌಡರನ್ನು ಹೊರಹಾಕುವ ಯತ್ನ ನಡೆದಿದ್ದು, ಅವರು ಅರುವತ್ತು ಲಕ್ಷದ ಬಿಲ್‌ ಮುಂದಿಟ್ಟು ಅದನ್ನು ಪಾವತಿ ಮಾಡಿದರೆ ತೊಲಗೋದಾಗಿ ಹೇಳಿದ್ದಾರಂತೆ. ಅತ್ತ ಏಷಿಯಾನೆಟ್‌ - ಕಾವೇರಿ ಚಾನಲ್‌ನಲ್ಲಿ ರಿkುೕ ಟೀವಿ ಮೇಲುಗೈ ಸಾಧಿಸಿದೆ. ಅದರ ಪಾಲುದಾರಿಕೆ ಹೆಚ್ಚಾಗುತ್ತಿದ್ದಂತೆ ರಿkುೕ ಟೀವಿ ಯಂತ್ರ ಮೀಡಿಯಾದ ಗುರುದತ್‌ - ಶಾಮ್‌ ಅವರನ್ನು ಹೊರಹೋಗುವಂತೆ ಹೇಳಿದೆ. ಅವರು ಎರಡು ಕೋಟಿಯ ಬಿಲ್ಲನ್ನು ಮುಂದಿಟ್ಟು, ಆ ಬಿಲ್ಲು ಪಾವತಿಯಾದ ನಂತರ ಹೋಗೋದಾಗಿ ಹೇಳಿದ ಸುದ್ದಿ ಬಂದಿದೆ.

    ನೌಕರರ ವಜಾ: ಈ ನಡುವೆ ಕಾವೇರಿ ಟೀವಿ 40 ಮಂದಿ ನೌಕರರನ್ನು ಕೆಲಸದಿಂದ ಕಿತ್ತು ಹಾಕಿದೆ. ಸುಪ್ರಭಾತದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿಗೆ ಕಾರ್ಯಕ್ರಮ ನೀಡಿದವರು ಕಚೇರಿಗೆ ನುಗ್ಗಿ ಕೈಗ ಸಿಕ್ಕಿದ್ದನ್ನು ಎತ್ತಿಕೊಂಡು ಹೋದ ಪ್ರಸಂಗವೂ ಜರುಗಿದೆ. ಇವೆರಡೂ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳೂ ರಿಪೀಟ್‌ ಶೋ ಆಗಿಬಿಟ್ಟಿವೆ. ಏತನ್ಮಧ್ಯೆ ತರಂಗ ಟೀವಿಯನ್ನು ಆರಂಭಿಸಬೇಕಾಗಿದ್ದ ಪೈ ಪಂಗಡ, ಆಯೋಚನೆಯನ್ನು ಕೈ ಬಿಟ್ಟು ಇಡೀ ಯೋಜನೆಯನ್ನೇ ಈ ಟೀವಿಗೆ ಮಾರಿ, ನಾಮಪತ್ರ ವಾಪಸ್ಸು ತೆಗೆದುಕೊಂಡಿದೆ. ಜಯಾ ಟೀವಿ ಕನ್ನಡದಲ್ಲೊಂದು ಚಾನೆಲ್‌ ಶುರು ಮಾಡಲಿದೆ ಅನ್ನುವ ಸುದ್ದಿಯೂ ಕೇಳಿಬರುತ್ತಿದೆ. ಜಯಲಲಿತಾ ಮತ್ತು ಸುಪ್ರಭಾತ ನಡುವೆ ಡೀಲ್‌ ಆಗಿದೆ. ಅವರೇ ನಮ್ಮಲ್ಲಿ ಬಂಡವಾಳ ಹೂಡುತ್ತಿದ್ದಾರೆ ಅನ್ನುತ್ತಿದ್ದಾರೆ ಸುಪ್ರಭಾತ ವಕ್ತಾರರು.

    ಮುಂಬರುವ ದಿನಗಳಲ್ಲಿ ಹೋರಾಟವೇನಿದ್ದರೂ - ಉದಯ - ಈ ಟೀವಿ ನಡುವೆ. ಅರ್ಥಾತ್‌ ತಮಿಳರ ಮತ್ತು ತೆಲುಗರ ನಡುವೆ.

    ಕನ್ನಡಿಗರು ಮೂಕ ಪ್ರೇಕ್ಷಕರು!

    English summary
    Etv says no to cigarette and liquor adds
    Sunday, July 7, 2013, 15:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X