For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ವಿರುದ್ಧದ ಬಾಯ್ಕಾಟ್ ಟ್ರೆಂಡ್, ಮತಾಂಧ ಗೂಂಡಾಗಿರಿ, ದ್ವೇಷದ ರಾಜಕೀಯವನ್ನು ಖಂಡಿಸಬೇಕು: ಕಿಶೋರ್

  |

  ಹಿಂದಿ ಚಿತ್ರರಂಗವನ್ನು ಬಾಯ್ಕಾಟ್ ಟ್ರೆಂಡ್ ಬೆಂಬಿಡದೇ ಕಾಡುತ್ತಿದೆ. ದೊಡ್ಡದೊಡ್ಡ ಸಿನಿಮಾಗಳಿಗೆ ಇದು ಭಾರೀ ಪೆಟ್ಟು ಕೊಡುತ್ತಿದೆ. ಇದನ್ನು ಖಂಡಿಸಿ ಇಡೀ ದೇಶದ ಚಿತ್ರರಂಗ ಬಾಲಿವುಡ್ ಬೆಂಬಲಕ್ಕೆ ನಿಲ್ಲಬೇಕು ಎಂದು ನಟ ಕಿಶೋರ್ ಹೇಳಿದ್ದಾರೆ.

  ನೂರಾರು ಕೋಟಿ ಬಂಡವಾಳ ಹಾಕಿ ಬಿಟೌನ್‌ನಲ್ಲಿ ಸಿನಿಮಾಗಳು ನಿರ್ಮಾಣ ಆಗುತ್ತಿದೆ. ಆದರೆ ಎಲ್ಲಿಂದ ಎಲ್ಲಿಗೂ ಲಿಂಕ್ ಮಾಡಿ ಇಲ್ಲಸಲ್ಲದ ಕಾರಣಗಳನ್ನು ನೀಡಿ ಸಿನಿಮಾ ರಿಲೀಸ್‌ಗೂ ಮೊದಲೇ ಬಾಯ್ಕಾಟ್ ಟ್ರೆಂಡ್ ನಡೆಸಲಾಗುತ್ತಿದೆ. ಕೆಲವ ಕಲಾವಿದರನ್ನು ವೈಯಕ್ತಿಕವಾಗಿಯೂ ಟಾರ್ಗೆಟ್ ಮಾಡಲಾಗುತ್ತಿದೆ. ಇದರಿಂದ ಬಾಲಿವುಡ್‌ಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಲೇ ಇದೆ. ಇದರಿಂದ ಹೊರಬರಲು ಸಾಧ್ಯವಾಗುತ್ತಲೇ ಇಲ್ಲ. ಕೆಲವರು ಅದ್ಯಾವ ಮಟ್ಟಿಗೆ ಬಾಲಿವುಡ್‌ನ ಟಾರ್ಗೆಟ್ ಮಾಡುತ್ತಿದ್ದಾರೆ ಅಂದರೆ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಬಾಯ್ಕಾಟ್ ಎನ್ನುವ ಕೂಗು ಶುರುವಾಗುತ್ತಿದೆ.

  "ಜನರ ಸಮಯ ಹಾಳು ಮಾಡಿದ್ದಕ್ಕೆ ಕ್ಷಮೆ ಇರಲಿ.. 'ಮೈಂಡ್‌ಲೆಸ್' ನನ್ನ ಪದವಲ್ಲ": ಕಿಶೋರ್

  ಆಮೀರ್ ಖಾನ್, ಶಾರೂಕ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ರಣ್‌ಬೀರ್‌ ಕಪೂರ್, ಅಕ್ಷಯ್‌ಕುಮಾರ್ ಹೀಗೆ ಎಲ್ಲರೂ ಬಾಯ್ಕಾಟ್ ಬಿಸಿ ಎದುರಿಸಿದವರೇ. ಅವರ ಸಿನಿಮಾಗಳ ಸಿನಿಮಾಗಳ ಮೇಲೂ ಇದರ ಪರಿಣಾಮ ಬೀರಿತ್ತು. ಇದೀಗ ಬಾಲಿವುಡ್ ಪರ ಎಲ್ಲರೂ ನಿಲ್ಲಬೇಕು ಎಂದು ನಟ ಕಿಶೋರ್ ಮನವಿ ಮಾಡಿದ್ದಾರೆ.

  ಬಾಲಿವುಡ್ ಪರ ನಿಲ್ಲಬೇಕು

  ಕಳೆದೊಂದು ವಾರದಿಂದ ನಟ ಕಿಶೋರ್ ತಮ್ಮ ಹೇಳಿಕೆಗಳಿಂದ ಭಾರೀ ಚರ್ಚೆಯಲ್ಲಿ ಇದ್ದಾರೆ. ಇದೀಗ ಬಾಲಿವುಡ್ ಬಾಯ್ಕಾಟ್ ಟ್ರೆಂಟ್ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. "ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು, ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ನ ಪರವಾಗಿ ನಿಲ್ಲುವ ಕಾಲ ಬಂದಿದೆ." ಎಂದು ಬರೆದುಕೊಂಡಿದ್ದಾರೆ.

  ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ

  ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ

  ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಟ್ರೆಂಡ್‌ ಅನ್ನು ತಡೆಯಲು ಸಾಧ್ಯವಾಗುತ್ತಲೇ ಇಲ್ಲ. ಬಾಯ್ಕಾಟ್ ಪದ ಕೇಳಿದರೆ ಬಾಲಿವುಡ್ ನಡುಗುವಂತಾಗಿದೆ. ಇದೇ ವಿಚಾರವಾಗಿ ಮಾತು ಮುಂದುವರೆಸಿರುವ ನಟ ಕಿಶೋರ್, "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ" ಎಂದಿದ್ದಾರೆ.

  ಕಾನೂನಿನ ಉಲ್ಲಂಘನೆ ಆಗ್ತಿದೆ

  ಕಾನೂನಿನ ಉಲ್ಲಂಘನೆ ಆಗ್ತಿದೆ

  "ಇಷ್ಟಾದರೂ ಚಿತ್ರರಂಗದವರು ಮಾತನಾಡದೇ ಕೂತಿರುವ ಹೆದರಿಕೆಯ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ.

  ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ.
  ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನ" ಎಂದು ನಟ ಕಿಶೋರ್ ಬರೆದುಕೊಂಡಿದ್ದಾರೆ.

  ಪರ ವಿರೋಧ ಚರ್ಚೆ

  ಪರ ವಿರೋಧ ಚರ್ಚೆ

  ಸದ್ಯ ನಟ ಕಿಶೋರ್ ಮಾಡಿರುವ ಪೋಸ್ಟ್‌ಗೆ ಕಾಮೆಂಟ್ ಬಾಕ್ಸ್‌ನಲ್ಲಿ ಪರ ವಿರೋಧ ಚರ್ಚೆ ನಡೀತಿದೆ. ಕೆಲವರು ಕಿಶೋರ್ ಹೇಳಿಕೆಯನ್ನು ಒಪ್ಪಿಕೊಂಡಿದ್ದರೆ, ಮತ್ತೆ ಕೆಲವರು ಚಕಾರ ಎತ್ತಿದ್ದಾರೆ. ಇತ್ತೀಚೆಗೆ ನಟ ಕಿಶೋರ್ KGF ಸಿನಿಮಾ ಬಗ್ಗೆ ನೀಡಿದ ಹೇಳಿಕೆಯನ್ನು ಎಳೆದು ತಂದಿದ್ದಾರೆ. ಆದರೆ KGF ಸಿನಿಮಾ ಬಗ್ಗೆ ತಾವು ಹೇಳಿದ್ದೇನು? ಅದು ತಪ್ಪಾಗಿ ಬಿಂಬಿತವಾಗಿದ್ದು ಹೇಗೆ? ಎನ್ನುವುದನ್ನು ಮತ್ತೊಂದು ಪೋಸ್ಟ್‌ನಲ್ಲಿ ಕಿಶೋರ್ ವಿವರವಾಗಿ ತಿಳಿಸಿದ್ದಾರೆ.

  English summary
  Actor Kishore Shares His Opinion On Boycott Trend In Bollywood says Now its time to Support Bollywood. He Wrote The time has come for the film fraternity of the entire country to stand up and Support Bollywood by condemning the trend of boycotting Bollywood films. Know more.
  Monday, January 9, 2023, 12:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X