ಕೊನೆಗೂ ಬಿಡುಗಡೆ ಆಗ್ತಿದೆ ವಿಜಯ್ ರಾಘವೇಂದ್ರ ಕನಸಿನ ಸಿನಿಮಾ
ನಟ ವಿಜಯ್ ರಾಘವೇಂದ್ರ ಅವರ ಕನಸಿನ ಸಿನಿಮಾ 'ಕಿಸ್ಮತ್' ಅಂತೂ ಬಿಡುಗಡೆ ಆಗುತ್ತಿದೆ. ಐದಾರು ವರ್ಷಗಳ ಹಿಂದೆ ಶುರುವಾಗಿದ್ದ ಈ ಸಿನಿಮಾ ಕೊನೆಗೂ ಚಿತ್ರಮಂದಿರಕ್ಕೆ ಬರುತ್ತಿದೆ.
ವಿಜಯ್ ರಾಘವೇಂದ್ರ ಅವರ ಪಾಲಿಗೆ 'ಕಿಸ್ಮತ್' ಬಹಳ ವಿಶೇಷವಾಗಿದೆ. ಈ ಸಿನಿಮಾದಿಂದ ಅವರು ನಟ ಮಾತ್ರವಲ್ಲದೆ ನಿರ್ದೇಶಕ ಕೂಡ ಆಗಿದ್ದಾರೆ. ಇದೇ ನವೆಂಬರ್ 23 ರಂದು ಚಿತ್ರ ರಿಲೀಸ್ ಆಗುತ್ತಿದೆ.
ಸಂಗೀತ ಭಟ್ ಚಿತ್ರದ ನಾಯಕಿ ಆಗಿದ್ದಾರೆ. ಒಂದು ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಬಿಡುಗಡೆಯ ವಿಶೇಷವಾಗಿ ಇಂದು ಚಿತ್ರದ ಟ್ರೇಲರ್ ಹೊರಬಂದಿದೆ.

'ಕಿಸ್ಮತ್' ತಮಿಳಿನ 'ನೀರಮ್' ಸಿನಿಮಾದ ರಿಮೇಕ್ ಆಗಿದೆ. ರಿಮೇಕ್ ಆಗಿದ್ದರೂ ಸಿನಿಮಾ ಬರಲು ಇಷ್ಟು ವರ್ಷ ತಡ ಆಗಿದೆ. ಸಿನಿಮಾವನ್ನು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿರ್ಮಾಣ ಮಾಡಿದ್ದಾರೆ.

ಇನ್ನು ಒಂದಲ್ಲ ಒಂದು ಕಾರಣಕ್ಕೆ 'ಕಿಸ್ಮತ್' ಸಿನಿಮಾ ನಿಧಾನ ಆಗುತ್ತಲೇ ಇದ್ದು, ಈಗ ರಿಲೀಸ್ ಆಗುತ್ತಿದೆ. ಈ ಸಿನಿಮಾವಾದರೂ ವಿಜಯ್ ಅವರಿಗೆ ಬ್ರೇಕ್ ನೀಡುತ್ತದೆಯಾ ಎನ್ನುವ ಕುತೂಹಲವಿದೆ.
More from Filmibeat
English summary
Actor Vijay Raghavendra's 'Kismath' kannada movie will be releasing on november 23rd.


Click it and Unblock the Notifications











