For Quick Alerts
  ALLOW NOTIFICATIONS  
  For Daily Alerts

  ನಟ ಯಶ್ ಐಷಾರಾಮಿ ಬದುಕು ಮತ್ತು 2022ರ ಆಸ್ತಿ ಮೌಲ್ಯ ಎಷ್ಟು?

  |

  ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈಗ ಜಗತ್ತೇ ಮೆಚ್ಚಿದ ರಾಕಿ ಭಾಯ್. ಯಶ್ ಸಿನಿಮಾ ಅಥವಾ ಜೀವನವನ್ನು ನೋಡುವುದಾದರೆ 'ಕೆಜಿಎಫ್‌'ಗೂ ಮೊದಲು ಮತ್ತು ಕೆಜಿಎಫ್ ನಂತರ ಎಂದು ವಿಂಗಡಿಸಬಹುದು. ಯಾಕೆಂದರೆ ಯಶ್ ಅಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾರೆ.

  ರಾಕಿಂಗ್ ಸ್ಟಾರ್ ಆಗುವ ಮೊದಲು ಯಶ್, ಯಶ್ ಆಗುವ ಮೊದಲು ನವೀನ್ ಕುಮಾರ್ ಆಗಿದ್ದರು, ಇಂದು ನಾವು, ನೀವು ನೋಡುತ್ತಿರುವ ರಾಕಿ ಭಾಯ್. ಹೌದು ರಾಕಿಂಗ್ ಸ್ಟಾರ್ ಯಶ್ ತಮ್ಮ ನಾಯಕ, ನಟನಾಗುವ ಕನಸು ಕಟ್ಟಿಕೊಂಡೆ ಬಣ್ಣದ ಲೋಕಕ್ಕೆ ಬಂದವರು.

  'Y19'ಗೆ ಯಶ್ ಭರ್ಜರಿ ತಯಾರಿ: ಹೇಗಿದೆ ರಾಕಿ ಭಾಯ್ ಕಸರತ್ತು?'Y19'ಗೆ ಯಶ್ ಭರ್ಜರಿ ತಯಾರಿ: ಹೇಗಿದೆ ರಾಕಿ ಭಾಯ್ ಕಸರತ್ತು?

  ಕಿರುತೆರೆ ಮೂಲಕ ಅಭಿನಯವನ್ನು ಆರಂಭಿಸುವಾಗ, ಯಶ್ ತಾನೊಬ್ಬ ಸೂಪರ್ ಸ್ಟಾರ್ ಆಗಬೇಕು ಎಂದು ಕೊಂಡಿದ್ದನ್ನು ಈಗ ಸಾಧಿಸಿದ್ದಾರೆ. ಸಿನಿಮಾರಂಗದ ಬ್ಯಾಗ್ರೌಂಡ್ ಇಲ್ಲದೆ ಬಂದು, ಈಗ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಯಶ್ ಛಲ ತುಂಬಿದ ಬದುಕು ಮತ್ತೊಬ್ಬರಿಗೆ ಮಾದರಿ. ಈಗ ಯಶ್ ಆಟ್ಟಿ ಆಸ್ತಿ ಮೌಲ್ಯ ಏನು ನೋಡಿದರೆ ನಿಜಕ್ಕೂ ಅಚ್ಚರಿ ಆಗುತ್ತೆ.

  'ಕೆಜಿಎಫ್' ಬಳಿಕ ಯಶ್ ಯಶಸ್ಸು!

  'ಕೆಜಿಎಫ್' ಬಳಿಕ ಯಶ್ ಯಶಸ್ಸು!

  ನಟ ರಾಕಿಂಗ್ ಸ್ಟಾರ್ ಯಶ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅವರನ್ನು ಕನ್ನಡಿಗರು ಮಾತ್ರ ಸ್ಟಾರ್ ನಟನಾಗಿ ಕಾಣಿಸುತ್ತಿದ್ದರು. ಆದರೆ ಕೆಜಿಎಫ್ ಸಿನಿಮಾದಿಂದ ಈಗ ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್ ಪಟ್ಟಿ ಸೇರಿಕೊಂಡಿದ್ದಾರೆ. ಕೆಜಿಎಫ್ ತಂದು ಕೊಟ್ಟ ಅಪಾರ ಯಶಸ್ಸು, ಯಶ್ ಮೌಲ್ಯವನ್ನು ಹೆಚ್ಚು ಮಾಡಿದೆ. 2022ರ ಯಶ್ ನೆಟ್‌ ವರ್ತ್ ಎಷ್ಟಿದೆ ಎನ್ನುವುದನದ್ನು ಮುಂದೆ ಓದಿ...

  15 ವರ್ಷದಿಂದ ಚಿತ್ರರಂಗದಲ್ಲಿ ಯಶ್ ಸಕ್ರಿಯ!

  15 ವರ್ಷದಿಂದ ಚಿತ್ರರಂಗದಲ್ಲಿ ಯಶ್ ಸಕ್ರಿಯ!

  'ಕೆಜಿಎಫ್' ಚಿತ್ರದ ಸೂಪರ್ ಸ್ಟಾರ್ ಯಶ್ ಅಂತಲೇ ಈಗ ಯಶ್ ಅವ್ರನ್ನು ಕರೆಯಲಾಗುತ್ತಿದೆ. ದಕ್ಷಿಣ ಚಿತ್ರರಂಗದ ಅತ್ಯಂತ ದುಬಾರಿ ಮತ್ತು ಜನಪ್ರಿಯ ನಟರಲ್ಲಿ ಯಶ್ ಕೂಡ ಒಬ್ಬರು. ಯಶ್ ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸುಮಾರು 15 ವರ್ಷದಿಂದ ಚಿತ್ರರಂಗದಲ್ಲಿ ಯಶ್ ಕೆಲಸ ಮಾಡುತ್ತಿದ್ದಾರೆ. ಆದರೆ ನಿಜವಾದ ಮನ್ನಣೆ ಸಿಕ್ಕಿದ್ದು ಮಾತ್ರ 'ಕೆಜಿಎಫ್' ಚಿತ್ರದಿಂದ, ಎಂದು ಹೇಳ ಬಹುದು. ಹಾಗಾಗಿ ಈ ವರ್ಷ 2022ರಲ್ಲಿ ಯಶ್ ನೆಟ್ ವರ್ತ್ ದುಪ್ಪಟ್ಟಾಗಿದೆ.

  ಯಶ್ ಆಸ್ತಿ ಮೌಲ್ಯ 53 ಕೋಟಿ ರೂ!

  ಯಶ್ ಆಸ್ತಿ ಮೌಲ್ಯ 53 ಕೋಟಿ ರೂ!

  ವರದಿಗಳ ಪ್ರಕಾರ 2022ರಲ್ಲಿ ಯಶ್ ಒಟ್ಟು ಆಸ್ತಿ ಮೌಲ್ಯ 53 ಕೋಟಿ ರೂ. 2021ರಲ್ಲಿ ಕೆಜಿಎಫ್ 1 ಯಶಸ್ಸಿನ ನಂತರ, ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನ ಹೊಸ ಡ್ಯೂಪ್ಲೆಕ್ಸ್ ಫ್ಲಾಟ್ ಕೊಂಡುಕೊಂಡಿದ್ದಾರೆ. ಈ ಫ್ಲಾಟ್ ಸುಮಾರು 5 ಕೋಟಿ ರೂ. ಬೆಳೆಯುಳ್ಳದ್ದು ಎನ್ನಲಾಗಿದೆ. ಇನ್ನು 'ಕೆಜಿಎಫ್ 2' ಚಿತ್ರಕ್ಕೆ ಯಶ್ 25 ಕೋಟಿ ರೂ. ಸಂಭಾವನೆ ಜೊತೆಗೆ ಚಿತ್ರದ ಲಾಭದಲ್ಲಿ ಶೇರ್ ಕೂಡ ಪಡೆದುಕೊಂಡಿದ್ದಾರೆ. ಎನ್ನಲಾಗಿದೆ.

  ಐಷಾರಾಮಿ ಮನೆ, ದುಬಾರಿ ಕಾರುಗಳು!

  ಐಷಾರಾಮಿ ಮನೆ, ದುಬಾರಿ ಕಾರುಗಳು!

  ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಸಮೇತ, ಐಷಾರಾಮಿ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಯಶ್ ಬಳಿ ಹಲವಾರು ದುಬಾರಿ ಕಾರುಗಳಿವೆ. ರೇಂಜ್ ರೋವರ್, ಮರ್ಸಿಡಿಸ್ ಬೆನ್ಜ್, ಆಡಿ ಕಾರುಗಳಿವೆ. ಈ ಕಾರುಗಳು ಕೋಟಿಗಟ್ಟಲೆ ಬೆಲೆ ಬಾಳುತ್ತವೆ. ಸಿನಿಮಾ ಮಾತ್ರವಲ್ಲದೆ ಯಶ್ ಜಾಹೀರಾತು ಮತ್ತು ಬ್ರ್ಯಾಂಡಿಂಗ್ ಮೂಲಕವೇ ಕೋಟ್ಯಾಂತರ ರೂಪಾಯಿ ಗಳಿಸುತ್ತಾರೆ.

  2018 ರಿಂದ 2022 ಯಶ್ ಬೆಳವಣಿಗೆ!

  2018 ರಿಂದ 2022 ಯಶ್ ಬೆಳವಣಿಗೆ!

  ನಟ ಯಶ್ ನಿವ್ವಳ ಆಸ್ತಿ ಮೌಲ್ಯದ ಅಂದಾಜಿನ ಲೆಕ್ಕಾಚಾರ 2018 ರಿಂದ 2022.

  2022- 53 ಕೋಟಿ ರೂ.

  2021- 30 ಕೋಟಿ ರೂ.

  2020- 23 ಕೋಟಿ ರೂ.

  2019- 18 ಕೋಟಿ ರೂ.

  2018- 11 ಕೋಟಿ ರೂ.

  English summary
  Know About Actor Yash Net Worth And Yash Luxury Life Style, know More
  Sunday, June 19, 2022, 11:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X