ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್ ಪವಿತ್ರ ಪ್ರೇಮಕಥೆ!

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು, ಅವರ ಹೆಸರು ಹೆಚ್ಚಾಗಿ ಕೇಳಿ ಬಂದಿದ್ದು ತೆಲುಗು ನಟ ನರೇಶ್ ಜೊತೆಗೆ. ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ಪವಿತ್ರಾ ಅವ್ರಿಗೆ ಬೇಡಿಕೆ ಹೆಚ್ಚು. ಪ್ರಮುಖ ಪೋಷಕ ಪಾತ್ರಗಳು ಅಂತ ಬಂದಾಗ ಮೊದಲ ಆಯ್ಕೆ ಇವರೇ ಆಗಿರುತ್ತಾರೆ.

ಕಳೆದ ಕೆಲವು ದಿನಗಳಿಂದ ಬಿರುಗಾಳಿಯಂತೆ ಹಬ್ಬಿದ್ದ ಪವಿತ್ರಾ ಲೋಕೇಶ್, ನರೇಶ್ ವಿಚಾರ ಸದ್ಯಕ್ಕೆ ಕೊಂಚ ತಣ್ಣಗಾಗಿದೆ. ತೆಲುಗಿನ ಹಿರಿಯ ನಟ ನರೇಶ್ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ನರೇಶ್ ಜೊತೆ ಪವಿತ್ರಾ ಲೋಕೇಶ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

ಪವಿತ್ರ ಲೋಕೇಶ್, ಸುಚೇಂದ್ರ ಪ್ರಸಾದ್ ನಡುವೆ ಆಗಿದಿದ್ದೇನು? ಯಾರು ಈ ನರೇಶ್!

ಈ ವಿಚಾರದಲ್ಲಿ ರಮ್ಯಾ ರಘುಪತಿ, ನರೇಶ್, ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ಕೂಡ ಮಾತನಾಡಿದ್ದರು. ಈಗ ಈ ಪ್ರಕರಣದ ಬಿಸಿ ಕೊಂಚ ಕಡಿಮೆ ಆಗಿದೆ. ಆದರೆ ಈ ಹಿಂದೆ ನಟಿ ಪವಿತ್ರಾ ಲೋಕೇಶ್ ಕೊಟ್ಟ ಹೇಳಿಕೆ ವೈರಲ್ ಆಗುತ್ತಿದೆ.

ಪವಿತ್ರಾ ಲೋಕೇಶ್- ಸುಚೇಂದ್ರ ಪ್ರಸಾದ್ ಲವ್ ಸ್ಟೋರಿ!

ಪವಿತ್ರಾ ಲೋಕೇಶ್- ಸುಚೇಂದ್ರ ಪ್ರಸಾದ್ ಲವ್ ಸ್ಟೋರಿ!

ನಟಿ ಪವಿತ್ರಾ ಲೋಕೇಶ್ ಹಿಂದೆ ಸಂದರ್ಶನ ಒಂದರಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು, ಸುಚೇಂದ್ರ ಪ್ರಸಾದ್ ಅವರ ಜೊತೆಗಿನ ಪವಿತ್ರ ಪ್ರೇಮದ ಬಗ್ಗೆ ಹೇಳಿ ಎಂದು ನಿರೂಪಕ ಕೇಳಿದಾಗ. " ನಾವು ಒಟ್ಟಿಗೆ ಸೀರಿಯಲ್ ಮಾಡುತ್ತಿದ್ದೆವು. ಇದನ್ನು ಪ್ರೀತಿ ಎಂದುಕೊಂಡರೆ ಪ್ರೀತಿ, ಸ್ನೇಹ ಎಂದುಕೊಂಡರೆ ಸ್ನೇಹ. ಅಷ್ಟಕ್ಕೂ ಅವರೊಬ್ಬರು ತುಂಬಾ ಒಳ್ಳೆಯ ಉತ್ತಮ ವ್ಯಕ್ತಿ. ನನ್ನೊಂದಿಗೆ ನಾನು ಅವರನ್ನು ಹೋಲಿಸಿ ಕೊಳ್ಳುವುದಿಲ್ಲ. ಅವರನ್ನು ನಾನು ತುಂಬಾ ಎತ್ತರದ ಸ್ಥಾನದಲ್ಲಿ ಇಟ್ಟಿದ್ದೇನೆ. ಅಂದರೆ ಇಂತಹ ವ್ಯಕ್ತಿತ್ವ ಇರುವ ಮತ್ತೊಬ್ಬ ವ್ಯಕ್ತಿ ಇರಲು ಸಾಧ್ಯವೇ ಇಲ್ಲ" ಎಂದಿದ್ದಾರೆ ಪವಿತ್ರಾ ಲೋಕೇಶ್.

ಸುಚೇಂದ್ರ ಪ್ರಸಾದ್ ತಪ್ಪು ಮಾಡಲ್ಲ!

ಸುಚೇಂದ್ರ ಪ್ರಸಾದ್ ತಪ್ಪು ಮಾಡಲ್ಲ!

ಸುಚೇಂದ್ರ ಪ್ರಸಾದ್ ಅವರಲ್ಲಿ ನಾನು ಯಾವುದೇ ತಪ್ಪು ಕೂಡ ಕಂಡಿಲ್ಲ. ಒಂದೇ ಒಂದು ತಪ್ಪು ಕೂಡ ಅವರಲ್ಲಿ ಕಂಡಿಲ್ಲ. ನನಗೆ ಅವರು ತುಂಬಾ ಗೌರವ ನೀಡುತ್ತಾರೆ. ಅಷ್ಟರ ಮಟ್ಟಿಗೆ ಎಂದರೆ ನನ್ನನ್ನು ಅವರು ಕರೆಯುವುದೇ ಅತ್ಯಂತ ಗೌರವದಿಂದ. ಹಾಗಾಗಿ ಇಂತಹ ವ್ಯಕ್ತಿಯ ಮತ್ತೊಬ್ಬ ಇರು ಸಾಧ್ಯವಿಲ್ಲ ಅನಿಸುತ್ತದೆ. ನನಗೆ ಅವರು ಒಬ್ಬ ನಟನಾಗಿ ತುಂಬಾ ಇಷ್ಟ. ನಾವು ಇಬ್ಬರೂ ಒಟ್ಟಾಗಿ ಕೂಡ ನಟಿಸಿದ್ದೇವೆ." ಎಂದು ಹೇಳಿಕೊಂಡಿದ್ದಾರೆ.

ಸುಚೇಂದ್ರ ಪ್ರಸಾದ್ ಅದೃಷ್ಟವಂತೆ!

ಸುಚೇಂದ್ರ ಪ್ರಸಾದ್ ಅದೃಷ್ಟವಂತೆ!

"ಇಂತಹ ಪತಿಯನ್ನು ಪಡೆಯಲು ನಾನು ಅದೃಷ್ಟವಂತೆ. ಅವರು ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾನು ಯಾವುದೇ ಚಿಂತೆಯಿಲ್ಲದೆ ನಿಶ್ಚಿಂತೆಯಾಗಿ ಕೆಲಸದಲ್ಲಿ ಭಾಗಿಯಾಗಬಹುದು. ಅಲ್ಲದೆ ಅವರು ಸಮಯ ಸಿಕ್ಕಾಗ ಮನೆಯ ಕೆಲಸಗಳನ್ನು ಮಾಡುತ್ತಾರೆ ನಾವಿಬ್ಬರೂ ಸೇರಿ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಜೊತೆಗೆ ಅವರು ಉಡುಗೆಯನ್ನು ಕೂಡ ಮಾಡುತ್ತಾರೆ. ಪೊಸೆಸಿವ್ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅವರ ಬಗ್ಗೆ ನನಗೆ ಹೆಮ್ಮೆ ಇದೆ." ಎಂದು ಪವಿತ್ರ ಲೋಕೇಶ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ವಿವಾದದ ಬಳಿಕ ವಿಡಿಯೋ ವೈರಲ್!

ವಿವಾದದ ಬಳಿಕ ವಿಡಿಯೋ ವೈರಲ್!

ಐದು ವರ್ಷದ ಹಿಂದೆ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಸಂದರ್ಶನದಲ್ಲಿ ಪವಿತ್ರ ಲೋಕೇಶ್ ಅವರು ಈ ರೀತಿಯಾದಂತಹ ಹೇಳಿಕೆಗಳನ್ನು ನೀಡಿದ್ದರು. ಆದರೀಗ ನರೇಶ್ ಜೊತೆಗೆ ಪವಿತ್ರಲೋಕೇಶ್ ಹೆಸರು ಕೇಳಿ ಬಂದ ನಂತರ ಅವರ ಹೇಳಿಕೆಗಳಲ್ಲಿ ಕೂಡ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಈ ಪ್ರಕರಣದ ಬಳಿಕ ಹಳೆಯ ಸಂದರ್ಶನ ವೈರಲ್ ಆಗುತ್ತಿದೆ.

More from Filmibeat

English summary
Know About Pavithra Lokesh And Suchendra Prasad Love Story, Pavithra Lokesh Says Suchendra Prasad Is The Best,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X