ಲವ್‌ ಅಂಡ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿ ರಚಿತಾ ರಾಮ್

ಕನ್ನಡ ಸಿನಿಮಾ ರಂಗದಲ್ಲಿ ನಟಿಮಣಿಯರ ಲವ್ ಗಾಸಿಪ್ ಬಗ್ಗೆ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಸಾಕಷ್ಟು ಬಾರಿ ನಟಿಯರು ಲವ್‌ ಗಾಸಿಪ್‌ನಿಂದಲೇ ಸುದ್ದಿ ಆಗುತ್ತಾರೆ. ಇದೀಗ ತಮ್ಮ ಲವ್‌ ಸಮಾಚಾರವನ್ನು ನಟಿ ರಚಿತಾ ರಾಮ್, ನಿಶ್ವಿಕಾ ನಾಯ್ಡು, ಅದಿತಿ ಪ್ರಭುದೇವ ಹಂಚಿಕೊಂಡಿದ್ದಾರೆ. ತಮ್ಮ ಲವ್‌ ಲೈಫ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಏಕ್‌ ಲವ್‌ ಯಾ ಚಿತ್ರದ ಕಾರ್ಯಕ್ರಮದಲ್ಲಿ ಲವ್‌- ಬ್ರೇಕಪ್‌ ಬಗ್ಗೆ ಮಾತು

ಏಕ್‌ ಲವ್‌ಯಾ ಸಿನಿಮಾದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ಕನ್ನಡದ ನಾಯಕಿಯರು ಭಾಗಿ ಆಗಿದ್ದರು. ಚಿತ್ರದ ನಾಯಕಿಯರಾದ ರಚಿತಾ ರಾಮ್, ರೇಷ್ಮ ನಾನಯ್ಯ ಸೇರಿದಂತೆ ನಿಶ್ವಿಕಾ ನಾಯ್ಡು, ಅದಿತಿ ಪ್ರಭುದೇವ ಭಾಗವಹಿಸಿದ್ದರು. ಈ ನಟಿಯರಿಗೆ ಲವ್‌ ಬ್ರೇಕಪ್‌ ಆಗಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ಚಿತ್ರದ ಎಣ್ಣೆ ಹಾಡು. ಚಿತ್ರದಲ್ಲಿ ಲವ್‌ ಬ್ರೇಕಪ್‌ ಬಳಿಕ ನಟಿ ರಚಿತಾ ರಾಮ್ ಬಾಟಲಿ ಹಿಡಿದು ಹಾಡುವ ಹಾಡಿದು. ಈ ಹಾಡನ್ನು ಕಾರ್ಯಕ್ರಮದಲ್ಲಿ ಲಾಂಚ್ ಮಾಡಲಾಗಿದೆ. ಹಾಗಾಗಿ ನಟಿಯರಿಗೆ ಲವ್‌ ಬ್ರೇಕಪ್ ಆಗಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ.

ಬ್ರೇಕಪ್ ಬಗ್ಗೆ ರಚಿತಾ ರಾಮ್ ಮಾತು: ಅಡ್ಡ ಗೋಡೆ ಮೇಲೆ ದೀಪ ಇಟ್ಟ ಡಿಂಪಲ್‌ ಕ್ವೀನ್

ಲವ್ ಬ್ರೇಕಪ್‌ ಆಗಿದೆಯಾ ಎನ್ನುವ ಪ್ರಶ್ನೆಗೆ ನಟಿ ರಚಿತಾ ರಾಮ್ ಉತ್ತರಿಸಿದ್ದಾರೆ. ಆದರೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿ ಕುತೂಹಲಕ್ಕೆ ಕಾರಣ ಆಗಿದ್ದಾರೆ. "ಬ್ರೇಕಪ್‌ ಆದ್ಮೇಲೆ ಏನ್‌ ಮಾಡ್ತೀವಿ, ಸಿನಿಮಾದ ಸಾಂಗಲ್ಲಿ ಏನ್‌ ಮಾಡಿದಿನೋ ಅದನ್ನ ಮಾಡಿಲ್ಲ. ಲೈಫ್ ಶುಡ್‌ ಮೂವ್ ಆನ್ ಅಲ್ವ. ದೇವಸ್ಥಾನಕ್ಕೆ ಹೋಗಲ್ಲ, ಪಾಸ್ಟ್ ಈಸ್ ಪಾಸ್ಟ್ ಎಲ್ಲವನ್ನೂ ಮರೆತು ಬಿಡುತ್ತೀನಿ, ಸದ್ಯ ತುಂಬಾ ಸಿನಿಮಾ ಇವೆ. ಕೆಲಸ ಮಾಡುತ್ತಿದ್ದೇನೆ" ಎಂದಿದ್ದಾರೆ.

Know About Rachita Ram, Aditi Prabhudeva, Nishvika Naidu Love Story

ರಚಿತಾ ರಾಮ್‌ ಅವರ ಈ ಮಾತು ಚರ್ಚೆಗೀಡಾಗಿದೆ. ಅಂದರೆ ರಚಿತಾ ಅವರು ಯಾರನ್ನೋ ಪ್ರೀತಿಸಿ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ನಟಿ ನಿಶ್ವಿಕಾಳದ್ದು ಒನ್‌ ಸೈಡ್‌ ಲವ್‌ ಅಂತೆ!

ನಟಿ ನಿಶ್ವಿಕಾ ನಾಯ್ಡು ಕೂಡ ತಮ್ಮ ಪ್ರೀತಿ ಮತ್ತು ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಿಶ್ವಿಕಾ ನಾಯ್ಡು ಅವರದ್ದು ಬ್ರೇಕಪ್ ಪ್ಯಾಚಪ್‌ ಏನು ಇಲ್ಲಾ. ಕೇವಲ ಒನ್ ಸೈಡ್ ಲವ್‌ ಅಂತ ಹೇಳಿಕೊಂಡಿದ್ದಾರೆ. "ನಮ್ಮದೆಲ್ಲಾ ಒನ್‌ಸೈಡ್‌ ಲವ್, ಲವ್‌ ಶುರು ಆಗುವುದಕ್ಕೂ ಮೊದಲೇ ಈ ಸಾಂಗ್‌ ಕೇಳುವ ಪರಿಸ್ಥಿತಿ ನಮ್ಮದು" ಎಂದಿದ್ದಾರೆ ನಟಿ ನಿಶ್ವಿಕಾ ನಾಯ್ಡು.

Know About Rachita Ram, Aditi Prabhudeva, Nishvika Naidu Love Story

ಲವ್‌ ಮ್ಯಾರೇಜ್‌ನಲ್ಲಿ ನಂಬಿಕೆ ಇಲ್ಲ: ಅದಿತಿ ಪ್ರಭುದೇವ

ಪ್ರೀತಿ, ಬ್ರೇಕಪ್ ಬಗ್ಗೆ ಮಾತನಾಡಿದ ನಟಿ ಅದಿತಿ ಪ್ರಭುದೇವ ಅವರ ಕಥೆಯೇ ಬೇರೆ. ಅದಿತಿ ತಮ್ಮದು ನೋ ಲವ್, ನೋ ಬ್ರೇಕಪ್, ನೋ ಲವ್ ಮ್ಯಾರೇಜ್ ಎಂದಿದ್ದಾರೆ. " ನಾನು ಲವ್‌ ಮಾಡೇ ಇಲ್ಲ ಬ್ರೇಕಪ್‌ ಎಲ್ಲಿಂದ ಆಗುತ್ತೆ, ನಾನು ಲವ್ ಮಾಡಲ್ಲ ನೇರವಾಗಿ ಮದುವೆ ಆಗುತ್ತೇನೆ. ಲವ್‌ ಮ್ಯಾರೇಜ್‌ನಲ್ಲಿ ನನಗೆ ನಂಬಿಕೆ ಇಲ್ಲ" ಎಂದು ಹೇಳಿದ್ದಾರೆ.

Know About Rachita Ram, Aditi Prabhudeva, Nishvika Naidu Love Story

ನಟಿಮಣಿಯರ ಪ್ರೇಮ್‌ ಕಹಾನಿ, ಲವ್‌ ಕಹಾನಿ, ಬ್ರೇಕಪ್‌ ಕಹಾನಿ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇರುತ್ತೆ. ಆದರೆ ಎಲ್ಲರೂ ಹೀಗೆ ಯಾವಾಗಲೂ ತಮ್ಮ ಬಗ್ಗೆ ಓಪನ್‌ ಆಗಿ ಹೇಳಿ ಕೊಳ್ಳುವುದಿಲ್ಲ. ಅದಕ್ಕೆ ಅವರದ್ದೇ ಆದ ಕಾರಣಗಳು ಇರುತ್ತವೆ. ಸದ್ಯ ಈ ಮೂವರು ನಟಿಯರು ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿ ಸುದ್ದಿ ಆಗಿದ್ದಾರೆ.

More from Filmibeat

English summary
Sandalwood Actress Rachitha Ram, Nishvika Naidu, Aditi Prabhudeva Reveal Thier Love Story,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X