»   » ಕೋದಂಡರಾಮನಿಗೂ ಕ್ರೇಜಿ ಗೀತೆ

ಕೋದಂಡರಾಮನಿಗೂ ಕ್ರೇಜಿ ಗೀತೆ

Posted By: Staff
Subscribe to Filmibeat Kannada

'ಏಕಾಂಗಿ" ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಗೀತೆ ಬರೆದು ಸಂಗೀತ ಸಂಯೋಜಿಸಿದ ನಟ - ನಿರ್ದೇಶಕ -ನಿರ್ಮಾಪಕ ರವಿಚಂದ್ರನ್‌ ಈಗ ಫುಲ್‌ಟೈಮ್‌ ಸಾಹಿತಿ ಕಮ್‌ ಸಂಗೀತ ಸಂಯೋಜಕರಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ' ಶ್ರೀಲಕ್ಷ್ಮೀ ಪ್ರೊಡಕ್ಷನ್ಸ್‌" ಲಾಂಛನದಲ್ಲಿ ವಿ. ವೆಂಕಟರಾವ್‌ ನಿರ್ಮಿಸುತ್ತಿರುವ 'ಕೋದಂಡರಾಮ" ಚಿತ್ರಕ್ಕೆ ಅವರು ಹಾಡು ಬರೆದಿದ್ದಾರೆ. ಸಂಗೀತ ಸಂಯೋಜಿಸಿದ್ದಾರೆ. ಚಿತ್ರವನ್ನು ನಿರ್ದೇಶಿಸುತ್ತಲೂ ಇದ್ದಾರೆ.

ಬೆಂಗಳೂರು ಅರಮನೆ ಆವರಣದಲ್ಲಿರುವ ನೀರಿನ ಕೊಳದ ಬಳಿ ಮೊನ್ನೆ ಬಣ್ಣ ಬಣ್ಣದ ಗಾಳಿಪಟಗಳ ವಿಶ್ವವೇ ಸೃಷ್ಟಿಯಾಗಿತ್ತು. ನಟ ರವಿಚಂದ್ರನ್‌, ಸಾಕ್ಷಿ ಶಿವಾನಂದ್‌ ಅವರೊಂದಿಗೆ 50ಕ್ಕೂ ಹೆಚ್ಚು ಸಹ ಕಲಾವಿದರು ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್‌ಸ ಸೂಚನೆಗೆ ಕಾಯುತ್ತಿದ್ದರು. ನೃತ್ಯದ ಪರಿಕಲ್ಪನೆಯೇನು ಎಂಬುದನ್ನು ರವಿ ಮೊದಲೇ ಸಂಕಲ್ಪಿಸಿದ್ದರು.

ಕೇಜೀ ಸ್ಟಾರ್‌ ರವಿ ಬರೆದು - ಸಂಗೀತ ಸಂಯೋಜಿಸಿರುವ 'ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ ನನ್ನ ಹೃದಯ ನಿನ್ನ ನೆಡದೆ ಸದ್ದು ಮಾಡದು, ಗೋತ ಹೊಡೆಯೇ ಮುಂಚೆ ನೀನು ನನ್ನ ಹೃದಯ ಸೇರು ಬಾರೋ" ಎಂಬ ಗೀತೆಯ ದೃಶ್ಯಗಳನ್ನು ಚಿನ್ನಿ ಪ್ರಕಾಶ್‌ ನೃತ್ಯ ಸಂಯೋಜನೆಯಲ್ಲಿ ಜಿ.ವಿ. ಸೀತಾರಾಮ್‌ ಈಚೆಗೆ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರು.

ರವಿಚಂದ್ರನ್‌ ಚಿತ್ರಕತೆ, ಸಂಭಾಷಣೆ ಹಾಡುಗಳನ್ನು ಬರೆದು, ಸಂಗೀತ ಸಂಯೋಜಿಸಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ರವಿಚಂದ್ರನ್‌, ಶಿವರಾಜ್‌ಕುಮಾರ್‌, ಮೋಹನ್‌, ಸಾಕ್ಷಿ ಶಿವಾನಂದ್‌, ಆಶಾಸೈನಿ, ಶಿಲ್ಪ, ರಮೇಶ್‌ಭಟ್‌, ಸಾಧುಕೋಕಿಲ, ಮಂಡ್ಯ ರಮೇಶ್‌, ಮಿಮಿಕ್ರೀ ದಯಾನಂದ್‌ ಮೊದಲಾದವರು ಇದ್ದಾರೆ.

English summary
Kites world in palace grounds this is kodandaramas set
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada