ರಶ್ಮಿಕಾ ಮಂದಣ್ಣ ಮದುವೆಯಲ್ಲಿ ಸಿಗ್ತಾರೆ, ಮಾತಾಡ್ಸೋದೇ ಇಲ್ಲ..!

ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಾಯಕಿಯಾಗಿ ಅವತರಿಸಿದವರು ರಶ್ಮಿಕಾ ಮಂದಣ್ಣ. ಇದೊಂದೇ ಒಂದು ಸಿನಿಮಾ ಮೂಲಕ ರಶ್ಮಿಕಾ ಅಂದು ಪಡೆದುಕೊಂಡಿದ್ದ ಪ್ರಚಾರ.. ಗಿಟ್ಟಿಸಿಕೊಂಡ ಅವಕಾಶಗಳನ್ನ ಕಂಡು ಎಲ್ಲರೂ ಅಚ್ಚರಿಗೊಂಡಿದ್ದರು. ಆದರೆ ತೆಲುಗು ಚಿತ್ರರಂಗದಲ್ಲಿ ಅವಕಾಶವನ್ನು ಪಡೆಯುತ್ತಲೇ ಕನ್ನಡವನ್ನು ರಶ್ಮಿಕಾ ತಾತ್ಸಾರ ಮಾಡಲಾರಂಭಿಸಿದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ರಶ್ಮಿಕಾ ಅನೇಕ ಬಾರಿ ಕನ್ನಡಿಗರನ್ನು ಕೆರಳಿಸಿದ್ದಾರೆ. ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾನೆ ಬಂದಿದ್ದಾರೆ.

ಇಂಥಾ ರಶ್ಮಿಕಾ ಇತ್ತೀಚೆಗಷ್ಟೇ ತಮ್ಮನ್ನು ತಾವು ಹೊಗಳಿಕೊಳ್ಳುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದರು. ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದ ಏಕೈಕ ಮಹಿಳೆ ನಾನು ಎಂದು ಮಾತನಾಡಿದ್ದರು. ರಶ್ಮಿಕಾ ಅವರಾಡಿದ ಈ ಮಾತಿಗೆ ಸಹಜವಾಗಿ ಆಕ್ರೋಶ ಕೂಡ ವ್ಯಕ್ತವಾಯ್ತು.

Kodava Connection Cold Silence Pavi Poovappa s Shocking Revelation About Rashmika Mandanna

ಯಾಕೆಂದರೆ .. ಕೂರ್ಗ್‌ದಿಂದ ಇಲ್ಲಿಯವರೆಗೆ ಹಲವಾರು ಜನ ಚಿತ್ರರಂಗಕ್ಕೆ ಬಂದಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದ್ದಾರೆ. ಕೆಲವರು ಖ್ಯಾತಿಯ ತುತ್ತ ತುದಿಯನ್ನು ಕೂಡ ತಲುಪಿದ್ದಾರೆ. ಆದರೆ.. ಇದ್ಯಾವುದು ರಶ್ಮಿಕಾಗೆ ಪರಿವೆ ಇದ್ದಂತೆ ಇರಲಿಲ್ಲ. ಬದಲಿಗೆ ಅವರ ಮಾತುಗಳಲ್ಲಿ ನಾನೆಂಬ ಅಹಂಕಾರ ಇತ್ತು.

ಇವತ್ತು ಕೂಡ ರಶ್ಮಿಕಾ ಅವರ ಈ ಮಾತುಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಆದರೂ ಕೂಡ ರಶ್ಮಿಕಾ ಈ ವಿಚಾರದ ಒಂದೇ ಒಂದು ಮಾತುಗಳನ್ನಾಡಲು ಹೋಗಿಲ್ಲ. ತನ್ನ ಮಾತಿನ ಹಿಂದೆ ಇದ್ದ ಉದ್ದೇಶವೇನಾಗಿತ್ತು ಎಂದು ಹೇಳುವ ಗೋಜಿಗೆ ಕೂಡ ಹೋಗಿಲ್ಲ. ಹೀಗಿರುವಾಗ ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗಿನವರೇ ಆದ ಪವಿ ಪೂವಪ್ಪ ಮಾತನಾಡಿದ್ದಾರೆ.

Kodava Connection Cold Silence Pavi Poovappa s Shocking Revelation About Rashmika Mandanna

ಹೌದು, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಾ, ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿ ಕನ್ನಡಿಗರ ಗಮನ ಸೆಳೆದ ಪವಿ ಪೂವಪ್ಪ ವಿಜಯವಾಣಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ಧಾರೆ.

ಈ ಸಂದರ್ಶನದಲ್ಲಿ ಮಾತನಾಡಿರುವ ಪವಿ ಪೂವಪ್ಪ, ಪ್ರೇಮಾ ಅವರಿಂದ ಹಿಡಿದು ಅನೇಕರು ಇಲ್ಲಿಯವರೆಗೆ ಚಿತ್ರರಂಗಕ್ಕೆ ಬಂದಿದ್ದಾರೆ. ಸಾಧನೆಯ ಶಿಖರಕ್ಕೇರಿದ್ದಾರೆ ಎಂದು ಹೇಳಿದ್ದಾರೆ. ಕೇವಲ ರಶ್ಮಿಕಾ ಮಾತ್ರವಲ್ಲ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಅವರ ಪಿಆರ್‌ ತಂಡದ ತಂತ್ರ ಇದಾಗಿರಬಹುದು ಅಥವಾ ಅವರು ಮಾತನಾಡುವ ರೀತಿಯೇ ಹಾಗಿರುತ್ತೆ ಅದಕ್ಕೆ ಅವರ ಹಲವು ಹಿಂದಿನ ಸಂದರ್ಶನಗಳೇ ಸಾಕ್ಷಿ ಎಂದಿರುವ ಪವಿ ಪೂವಪ್ಪ ಏನೋ ಮಾತನಾಡಲು ಹೋಗಿ ಏನೋ ಮಾತನಾಡಿರಬಹುದು ಎಂದು ಹೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ನಾವು ಒಂದೇ ಸಮುದಾಯದವರಾದ ಕಾರಣ ಆಗಾಗ ಮದುವೆ ಸಮಾರಂಭಗಳಲ್ಲಿ ಅವರು ನನಗೆ ಸಿಕ್ತಿರ್ತಾರೆ ಎಂದು ಹೇಳಿರುವ ಪವಿ ಪೂವಪ್ಪ ಅವರು ಮಾತನಾಡಿಸುವುದಿಲ್ಲ.. ನಾನು ಮಾತನಾಡಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನುಳಿದಂತೆ ರಶ್ಮಿಕಾ ಮಂದಣ್ಣ ಅವರ ನಾನೇ ಕೊಡಗಿನ ಕಿನ್ನರಿ ಎಂಬ ಹೇಳಿಕೆಗೆ ಕೆರಳಿ ಕೆಂಡವಾಗಿದ್ದ ಹಿರಿಯ ನಟಿ ಪ್ರೇಮಾ ನನ್ನ ಈ ಬೆಳವಣಿಗೆಗೆ ನನ್ನ ಕೊಡವ ಸಮುದಾಯದವರ ಬೆಂಬಲ, ನನ್ನ ತಂದೆ ತಾಯಿಯ ಆಶೀರ್ವಾದ, ನನ್ನ ಸಹೋದರರ ಪ್ರೀತಿ ಮತ್ತು ಅಭಿಮಾನಿಗಳ ಹಾರೈಕೆ ಕಾರಣ ಎಂದು ಹೇಳಿರುವ ಪ್ರೇಮಾ, ಯಾರು ಮೊದಲು ಬಂದರು ಎನ್ನುವುದು ಮುಖ್ಯ ಅಲ್ಲ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಮುಖ್ಯ ಎಂದು ಕೂಡ ಪ್ರೇಮಾ ಹೇಳಿದ್ದರು. ಅವರ ಮಟ್ಟಿಗೆ ನಾವು ಮಾತನಾಡೋದಕ್ಕೆ ಆಗೋದಿಲ್ಲ. ನಾವು ನಾವೇ, ಅವರು ಅವರೇ ಎಂದು ಕಿಡಿ ಕಾರಿದ್ದರು.

ಹೀಗೆ ಒಂದಾದ ಮೇಲೊಂದು ವಿವಾದ ಮಾಡಿಕೊಳ್ಳುತ್ತಲೇ ಬರುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಆಯುಷ್ಮಾನ್ ಖುರಾನ ಅವರ ಜೊತೆ ಥಾಮಾ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದ ಟೀಸರ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆ ಇದೆ.

More from Filmibeat

English summary
Pavi Poovappa details the "cold silence" from Rashmika Mandanna at Kodava weddings. Get the full shocking revelation here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X