»   » ದಿಗಂತ್, ಕೋಡಿಗೆ ರಮ್ಯಾ 'ಗ್ರೀನ್ ಸಿಗ್ನಲ್' ಸಿಕ್ಕಿಲ್ಲ

ದಿಗಂತ್, ಕೋಡಿಗೆ ರಮ್ಯಾ 'ಗ್ರೀನ್ ಸಿಗ್ನಲ್' ಸಿಕ್ಕಿಲ್ಲ

Posted By:
Subscribe to Filmibeat Kannada

ತೆಲುಗು ಚಿತ್ರಗಳ ನಿರ್ದೇಶಕ ಕೋಡಿ ರಾಮಕೃಷ್ಣ ಕನ್ನಡದಲ್ಲಿ ನಿರ್ದೇಶಿಸಲಿರುವ ಚಿತ್ರಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಬರುವ ತಿಂಗಳು ಜೂನ್ 2012 ರಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ಕೋಡಿ ರಾಮಕೃಷ್ಣ, ಸದ್ಯಕ್ಕೆ ತೆಲುಗು ಚಿತ್ರ ಬಾಬ ಸತ್ಯ ಸಾಯಿ ಎಂಬ ಚಿತ್ರ ನಿರ್ದೇಶದಲ್ಲಿ ಬಿಜಿಯಾಗಿದ್ದಾರೆ. ಅದನ್ನು ಮುಗಿಸಿ ತಕ್ಷಣ ಕನ್ನಡ ಚಿತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಕೋಡಿ ನಿರ್ದೇಶನದ ಕನ್ನಡ ಚಿತ್ರದಲ್ಲಿ ದಿಗಂತ್ ನಾಯಕ ಎನ್ನುವುದು ಈಗಾಗಲೇ ಪಕ್ಕಾ ಆಗಿದ್ದರೂ ನಾಯಕಿ ಪಕ್ಕಾ ಆಗಿಲ್ಲ. ರಮ್ಯಾ ನಾಯಕಿಯಾಗಬೇಕೆಂಬುದು ಚಿತ್ರತಂಡದ ಅಭಿಪ್ರಾಯ. ಆದರೆ ಅದಕ್ಕೆ ರಮ್ಯಾ ಇನ್ನೂ ಓಕೆ ಅಂದಿಲ್ಲ. ಕಠಾರಿವೀರದ ಪ್ರಚಾರಕಾರ್ಯದಲ್ಲಿ ಬಿಜಿಯಾಗಿರುವ ರಮ್ಯಾ ಇನ್ನು ಸ್ವಲ್ಪ ದಿನಗಳಲ್ಲೇ ಕೋಡಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾರೆ ಎನ್ನಲಾಗುತ್ತಿದೆ.

ಮೂರು ವರ್ಷಗಳ ಹಿಂದೆ ತೆಲುಗಿನಲ್ಲಿ ಕೋಡಿ ರಾಮಕೃಷ್ಣ ನಿರ್ದೇಶಿಸಿದ್ದ 'ಅರುಂಧತಿ' ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದೆ. ಅಷ್ಟೇ ಅಲ್ಲ, ಅವರು ಈಗಾಗಲೇ ನೂರಕ್ಕಿಂತ ಹೆಚ್ಚು ತೆಲುಗು ಚಿತ್ರಗಳನ್ನು ನಿರ್ದೇಶಿಸಿರುವವರು. ಅಂತಹ ನಿರ್ದೇಶಕರಿಗೆ ರಮ್ಯಾ 'ನೋ' ಅನ್ನಲಿಕ್ಕಿಲ್ಲ ಎಂದೇ ಹೇಳಲಾಗುತ್ತಿದೆ. ಸದ್ಯಕ್ಕೆ ರಮ್ಯಾ ಕಡೆಗೇ ಚಿತ್ರತಂಡ ನೋಡುವಂತಾಗಿದೆ. (ಒನ್ ಇಂಡಿಯಾ ಕನ್ನಡ)

English summary
Telugu Director Kodi Ramakrishna directs Kannada Movie in comg June 2012 itself. Diganth is the Hero for this movie. Movie team is waiting for Ramya, as heroine. But, Ramya did'nt gave Grenn Signal for this till now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada