Veerendra Babu Arrest: ಸ್ಯಾಂಡಲ್‌ವುಡ್ ಹೀರೊ ಅರೆಸ್ಟ್.. ಮಹಿಳೆಯಿಂದ ಅತ್ಯಾಚಾರ ಆರೋಪ!

By ಫಿಲ್ಮಿಬೀಟ್ ಡೆಸ್ಕ್

ಅತ್ಯಾಚಾರ ಹಾಗೂ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಸ್ಯಾಂಡಲ್‌ವುಡ್‌ನನ್ನು ಬಂಧಿಸಲಾಗಿದೆ. ಅತ್ಯಾಚಾರ ಆರೋಪ ಮಾಡಿರುವ ಮಹಿಳೆ ನೀಡಿದ ದೂರಿನ ಮೇಲೆ ಕೊಡಿಗೆಹಳ್ಳಿ ಪೊಲೀಸರು ನಟ ವೀರೇಂದ್ರ ಬಾಬು ಅನ್ನು ಬಂಧಿಸಿದ್ದಾರೆ.

ವೀರೇಂದ್ರ ಬಾಬು ಈ ಹಿಂದೆ ಸ್ವಯಂ ಕೃಷಿ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾ ರೆಬೆಲ್ ಸ್ಟಾರ್ ಅಂಬರೀಶ್ ಮುಖ್ಯ ಮಂತ್ರಿಯಾಗಿ ಕಾಣಿಸಿಕೊಂಡಿದ್ದರು. 'ಸ್ವಯಂ ಕೃಷಿ' ಸಿನಿಮಾವನ್ನು ಸ್ವತ: ವೀರೇಂದ್ರ ಬಾಬು ನಿರ್ಮಿಸಿ, ನಿರ್ಮಾಣ ಕೂಡ ಮಾಡಿದ್ದರು. ಅಲ್ಲದೇ ಈ ಸಿನಿಮಾ ಹೀರೊ ಕೂಡ ಇವರೇ ಆಗಿದ್ದರು.

Kodigehalli Police arrested Swayam Krushi Veerendra Babu against Woman complaint

ಇದೇ ವಿರೇಂದ್ರ ಬಾಬು ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ಬೆದರಿಕೆ ಆರೋಪ ಮಾಡಿದ್ದಾರೆ. 2021ರಲ್ಲಿ ವೀರೇಂದ್ರ ಬಾಬು ಈ ಮಹಿಳೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದು, ಅದನ್ನು ವೀಡಿಯೊ ಕೂಡ ಮಾಡಿಕೊಂಡಿದ್ದಾರೆ. ಅದನ್ನೇ ಇಟ್ಟುಕೊಂಡು 15 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಹಣ ನೀಡದೇ ಹೋದರೆ ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರನ್ನು ಆಧರಿಸಿದ ಸ್ವಯಂ ಕೃಷಿ ವೀರೇಂದ್ರ ಬಾಬು ಹಾಗೂ ಸ್ನೇಹಿತರ ವಿರುದ್ಧ ಕೊಡಿಗೆಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದೂರಿನ ಅನ್ವಯ, ವೀರೇಂದ್ರ ಬಾಬು ಈ ಹಿಂದೆ ಕೂಡ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಿದ್ದರು. ಅಂದು ಒಡವೆ ಮಾಡಿ ಕೊಟ್ಟು ಸುಮ್ಮನಾಗಿದ್ದು, ದೂರ ದಾಖಲಿಸಿರಲಿಲ್ಲ ಎಂದು ತಿಳಿಸಲಾಗಿದೆ.

ಜುಲೈ 30, 2023ರಂದು ಮತ್ತೆ ಮಹಿಳೆಯನ್ನು ಕರೆಸಿ, ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಕಾರಿನಲ್ಲಿ ಸುತ್ತರಿಸಿ, ಮೈಮೇಲೆ ಇದ್ದ ಚಿನ್ನಾಭರಣವನ್ನು ಕಿತ್ತುಕೊಂಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಕೊಡಿಗೆಹಳ್ಳಿ ಪೊಲೀಸರು ವೀರೇಂದ್ರ ಬಾಬು ಹಾಗೂ ಸ್ನೇಹಿತರನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ವೀರೇಂದ್ರ ಬಾಬು ಮೇಲೆ ದೂರು ದಾಖಲಾಗಿದ್ದು ಇದೇ ಮೊದಲೇನು ಅಲ್ಲ. ಕಳೆದ ವರ್ಷ ಕೂಡ ಧಾರವಾಡ ಮೂಲದ ವ್ಯಕ್ತಿಯೊಬ್ಬರು ವಂಚನೆ ಆರೋಪ ಮಾಡಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಬಸವರಾಜ್ ಬಿ ಗೋಶಾಲ್ ಎಂಬುವವರು 1.8 ಕೋಟಿ ರೂ. ವಂಚಿಸಿದ ಆರೋಪ ಮಾಡಿದ್ದರು.

ವೀರೇಂದ್ರ ಬಾಬು ರಾಷ್ಟ್ರೀಯ ಜನಹಿತ ಪಕ್ಷ ಸ್ಥಾಪಿಸಿದ್ರು. ತನ್ನ ರಾಜಕೀಯ ಪಕ್ಷದಿಂದ ಎಂಎಲ್ಎ/ಎಂಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ವೀರೇಂದ್ರ ಬಾಬು ಕಂಪನಿ ವಿ ಕೇರ್‌ನಲ್ಲಿ ಹೂಡಿಕೆ ಮಾಡುವಂತೆ ಹೇಳಿದ್ದರು. ವಿ ಕೇರ್ ಕಂಪನಿ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿ ಆನ್‌ಲೈನ್‌ನಲ್ಲಿ ಉಚಿತ ಶಿಕ್ಷಣ ನೀಡುತ್ತೇವೆ ಎಂದೂ ಹೇಳಿದ್ದರೆಂದು ಆರೋಪ ಮಾಡಿ ದೂರನ್ನು ದಾಖಲಿಸಿದ್ದರು.

'ಸ್ವಯಂ ಕೃಷಿ' ಅನ್ನೋ ಚಿಟ್ ಫಂಡ್ ಕಂಪನಿ ನಡೆಸುತ್ತಿರೋ ವೀರೇಂದ್ರ ಬಾಬು ಸದ್ಯ ಅತ್ಯಾಚಾರ ಹಾಗೂ ಬೆದರಿಕೆ ಆರೋಪ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸರು ವೀರೇಂದ್ರ ಬಾಬು ಹಾಗೂ ಸ್ನೇಹಿತರ ವಿರುದ್ಧದ ಆರೋಪದ ವಿಚಾರಕ್ಕೆ ತನಿಖೆ ನಡೆಸುತ್ತಿದ್ದಾರೆ.

More from Filmibeat

English summary
Kodigehalli Police arrested Swayam Krushi Veerendra Babu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X