For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಜೊತೆ ದೀಪಾವಳಿ ಸಂಭ್ರಮಿಸಿದ ಕೊಹ್ಲಿ

  By Bharathkumar
  |

  ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಸಕ್ಸಸ್ ಫುಲ್ ನಟಿ ಅನುಷ್ಕಾ ಶರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಇವರಿಬ್ಬರು ಮಧ್ಯೆ ಬ್ರೇಕ್ ಅಪ್ ಆಗಿದೆ ಎಂಬ ಗುಸು ಗುಸುಗಳು ಇತ್ತೀಚಿಗೆ ಕೇಳಿಬರುತ್ತಿತ್ತು.

  ಆದ್ರೆ, ಇದಕ್ಕೆಲ್ಲ ತೆರೆ ಎಳೆದಿರುವ ಜೋಡಿ ಮತ್ತೆ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಗೋವಾದಲ್ಲಿ ಇಬ್ಬರು ಒಟ್ಟಾಗಿ ದೀಪಾವಳಿ ಆಚರಿಸಿದ್ದು![ಎಕ್ಸ್ ಕ್ಲೂಸಿವ್ ಫೋಟೋ ; ಒಂದಾದ ಜೋಡಿ ಹಕ್ಕಿ ವಿರಾಟ್-ಅನುಷ್ಕಾ!]

  ನ್ಯೂಜಿಲೆಂಡ್ ವಿರುದ್ದ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಕೊಹ್ಲಿ, ಪ್ರೇಯಸಿಯ ಜೊತೆ ರಿಲ್ಯಾಕ್ಸ್ ಮೂಡ್ ಗೆ ಹೋಗಿದ್ದಾರೆ. ಇನ್ನೂ 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಪ್ರಮೋಷನ್ ನಲ್ಲಿರುವ ಅನುಷ್ಕಾ ಕೂಡ ವಿರಾಟ್ ಗಾಗಿ ಕಾಲ್ ಶೀಟ್ ಕೊಟ್ಟಿದ್ದಾರೆ.[ಕೊಹ್ಲಿ-ಅನುಷ್ಕಾ ಸಂಬಂಧದಲ್ಲಿ ಹುಳಿ ಹಿಂಡಿದ ರಾಖಿ]

  Kohli And Anushka Celebrate Diwali in Goa

  ಗೋವಾದಲ್ಲಿ ಇತ್ತೀಚಿಗೆ 'ಐಎಸ್ಎಲ್' ಪುಟ್ಬಾಲ್ ಲೀಗ್ ಮ್ಯಾಚ್ ನಡೆದಿದೆ. ವಿರಾಟ್ ಕೊಹ್ಲಿ ಐಎಸ್ಎಲ್ ಟೂರ್ನಿಯ 'ಎಫ್ ಸಿ ಗೋವಾ' ತಂಡದ ಮಾಲೀಕರಾಗಿದ್ದಾರೆ. ಆದ್ದರಿಂದ ಭಾನುವಾರ ಪಣಜಿಯಲ್ಲಿ ನಡೆದ 'ಎಫ್ ಸಿ ಗೋವಾ' ಹಾಗೂ 'ಡೆಲ್ಲಿ ಡೈನಾಮೋಸ್' ವಿರುದ್ದದ ಪಂದ್ಯವನ್ನ ಕೊಹ್ಲಿ ವೀಕ್ಷಿಸಲು ಬಂದಿದ್ದರು.

  ಈ ವೇಳೆ 'ಎಫ್ ಸಿ ಗೋವಾ' ತಂಡದ ಜೆರ್ಸಿ ತೊಟ್ಟು ಪಂದ್ಯ ನೋಡುತ್ತಿದ್ದ ವಿರಾಟ್ ಪಕ್ಕದಲ್ಲಿ ಅನುಷ್ಕಾ ಶರ್ಮಾ ಕೂಡ ಪ್ರತ್ಯಕ್ಷವಾಗಿದ್ದರು. ಬಿಳಿ ಬಣ್ಣದ ಸಲ್ವಾರ್ ತೊಟ್ಟಿದ್ದ ಅನುಷ್ಕಾ, ಕೊಹ್ಲಿ ಜೊತೆ ಕೂತು ಮ್ಯಾಚ್ ನೋಡಿದ್ದಾರೆ. ಮ್ಯಾಚ್ ಮುಗಿದ ನಂತರ ಇಬ್ಬರು ಒಟ್ಟಿಗೆ ದೀಪಾವಳಿ ಹಬ್ಬವನ್ನ ಕೂಡ ಸಂಭ್ರಮಿಸಿದ್ದಾರಂತೆ.[ಕೊಹ್ಲಿ ಮನದನ್ನೆ ಅನುಷ್ಕಾ ಹಿಂದಿದೆ ಇಡೀ ಬಾಲಿವುಡ್]

  ಒಟ್ನಲ್ಲಿ, ಇವರಿಬ್ಬರು ದೂರವಾಗಿದ್ದಾರೆ ಎಂಬ ಅಂತೆ ಕಂತೆಗಳು ಹರಿದಾಡುತ್ತಿದ್ದರೂ, ಇದ್ಯಾವುದಕ್ಕೂ ತಲೆಕೆಡಸಿಕೊಳ್ಳದ ಕೊಹ್ಲಿ ಹಾಗೂ ಅನುಷ್ಕಾ ಮಾತ್ರ ಆರಾಮಾಗಿದ್ದಾರೆ.

  English summary
  Virat Kohli and Anushka Sharma were spotted together during an Indian Super League match between the cricketer's team FC Goa and Delhi Dynamos. And they are Celebrate the Diwali in Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X