For Quick Alerts
ALLOW NOTIFICATIONS  
For Daily Alerts

ತಮಿಳು ನಟಿ ರಿಯಾಮಿಕಾ ಆತ್ಮಹತ್ಯೆಗೆ ನಿಜವಾದ ಕಾರಣವೇನು?

By ಜೇಮ್ಸ್ ಮಾರ್ಟಿನ್
|

ಆಕೆ ತಮಿಳು ಚಿತ್ರರಂಗದ ಉದಯೋನ್ಮುಖ ನಟಿ. ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಳು. ಆದರೆ, ಇತ್ತೀಚೆಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಗ್ಗೆ ಸಾಕಷ್ಟು ಚಿಂತಿಸಿ, ಮನನೊಂದಿದ್ದಳು. ಚಿತ್ರರಂಗದಲ್ಲಿ ಆಪ್ತನಾಗಿದ್ದ ಗೆಳೆಯ ಬಳಿ ದುಃಖ ತೋಡಿಕೊಂಡಿದ್ದಳು. ಆದರೆ, ಎಲ್ಲಾ ಕಡೆಯಿಂದ ನೆಗಟಿವ್ ಉತ್ತರ ಬಂದಿದ್ದರಿಂದ ಇನ್ನಷ್ಟು ಕುಗ್ಗಿ ಹೋದಳು. ಕೊನೆಗೆ ತನ್ನ ಬದುಕನ್ನು ಕೊನೆಗಾಣಿಸಿಕೊಂಡಳು.

ರಿಯಾಮಿಕಾಗೆ ಚಿತ್ರಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಸಿಗುತ್ತಿತ್ತು. ಆದರೆ, ಒಂದು ಕೆಟ್ಟ ಚಿತ್ರವನ್ನು ಒಪ್ಪಿಕೊಂಡಿದ್ದರಿಂದ ಆಕೆಯನ್ನು ಚಿತ್ರರಂಗದಿಂದ ದೂರ ಮಾಡಲಾಯಿತು ಎಂಬ ಸುದ್ದಿಯೂ ಇದೆ.

ಕಸಿನ್ ಬ್ರದರ್ ಪ್ರಕಾಶ್ ಜತೆ ಚೆನ್ನೈನ ವಲಸರವಕ್ಕಮ್ ನ ರಾಧಾನಗರದಲ್ಲಿ ರಿಯಾಮಿಕಾ ವಾಸವಾಗಿದ್ದರು. ಪ್ರಕಾಶ್ ಕೂಡಾ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿಯುತ್ತಿದ್ದಾರೆ.

ರಿಯಾಮಿಕಾಗೆ ದಿನೇಶ್ ಎಂಬ ಗೆಳೆಯ ಇದ್ದಾನೆ. ಎಕ್ಸ್ ವಿಡಿಯೋಸ್, ಕುಮಾರನುಕು ಕೊಂಡಾಟ್ಟಮ್ ಮತ್ತು ಅಘೋರಿಯಿನ್ ಅಟ್ಟಮ್ ಮುಂತಾದ ಚಿತ್ರಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಕೊನೆಯ ಕರೆ ದಿನೇಶ್ ಗೆ ಮಾಡಿದ್ದಳು ರಿಯಾಮಿಕಾ

ಕೊನೆಯ ಕರೆ ದಿನೇಶ್ ಗೆ ಮಾಡಿದ್ದಳು ರಿಯಾಮಿಕಾ

ವ್ಮಂಗಳವಾರ ತಡರಾತ್ರಿ ರಿಯಾಮಿಕಾ ತನ್ನ ಆಪ್ತ ಸ್ನೇಹಿತ, ದಿನೇಶನಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಳು. ಆದರೆ, ಕರೆ ಸ್ವೀಕರಿಸಿರಲಿಲ್ಲ. ಇದರಿಮ್ದ ಬೇಜಾರಾಗಿ, ಮನೆಗೆ ಬಂದು ಹಾಗೆ ಮಲಗಿದ್ದಾಳೆ. ಈ ಬಗ್ಗೆ ಅಣ್ಣ ಪ್ರಕಾಶ್ ಪ್ರಶ್ನಿಸಿದಾಗ, ಏನಿಲ್ಲ ದಣಿವಾಗಿದೆ ಎಂದು ಹೇಳಿದ್ದಾಳೆ. ಮರುದಿನ ಬೆಳಗ್ಗೆ ರಿಯಾಮಿಕಾಳಿಗೆ​ ದಿನೇಶ್ ವಾಪಸ್​ಕರೆ ಮಾಡಿದಾಗ ನಾಟ್​ ರೀಚಬಲ್​ ಆಗಿದೆ. ತಕ್ಷಣ ಮನೆಗೆ ಬಂದಿದ್ದಾನೆ.

ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ದಾರೆ

ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ದಾರೆ

ಆಕೆಯ ರೂಮಿನ ಬಾಗಿಲು ಬಡಿದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಳಗಿನಿಂದ ಲಾಕ್ ಆಗಿತ್ತು.ಸಾಕಷ್ಟು ಬಾರಿ ಬಾಗಿಲು ಬಡಿದಿದ್ದಾರೆ. ಆದರೆ, ಬಾಗಿಲು ತೆಗೆಯದಿದ್ದಾಗ ಪ್ರಕಾಶ್​ ಕಿಟಕಿಯನ್ನು ಒಡೆದು ಇಣುಕಿದಾಗ, ರಿಯಾಮಿಕಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ತಕ್ಷಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ

ಅರ್ಥಿಕ ಸಮಸ್ಯೆ ಎದುರಾಗಿತ್ತು

ಅರ್ಥಿಕ ಸಮಸ್ಯೆ ಎದುರಾಗಿತ್ತು

ಮುರ್ನಾಲ್ಕು ಚಿತ್ರಗಳಲ್ಲಿ ನಟಿಸಿದ್ದ ರಿಯಾಮಿಕಾಗೆ ಎಕ್ಸ್ ರೇಟಿಂಗ್ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದಾದ ಬಳಿಕ ಬರೀ ಅಂಥಾ ಸಿನಿಮಾಗಳ ಆಫರ್ ಬರ ತೊಡಗಿತ್ತು. ಇದು ಆಕೆಗೆ ಕೂಡಾ ಇಷ್ಟವಿರಲಿಲ್ಲ. ಈ ಬಗ್ಗೆ ಮನೆಯಲ್ಲಿ ಅಣ್ಣನ ಜತೆ ಮಾತಿನ ಚಕಮಕಿ ನಡೆಯುತ್ತಿತ್ತು. ಗೆಳೆಯ ದಿನೇಶ್ ಕೂಡಾ, ಸಿನಿಮಾ ಮಾಡುತ್ತಿರು ಕೈಯಲ್ಲಿ ಕಾಸು ಇರಬೇಕು ಎಂದೆಲ್ಲ ಒತ್ತಡ ಹೇರುತ್ತಿದ್ದ ಎಂದು ತಿಳಿದು ಬಂದಿದೆ.

ಪೊಲೀಸರ ಹೇಳಿಕೆ

ಪೊಲೀಸರ ಹೇಳಿಕೆ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೊದಲಿಗೆ ಆಕೆ ಗೆಳೆಯ ದಿನೇಶ್ ನನ್ನು ವಿಚಾರಣೆಗೊಳಪಡಿಸಿದ್ದು ಆತನ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ರಿಯಾಮಿಕಾ ಫೋನ್, ವಾಟ್ಸಾಪ್ ಚಾಟ್ ಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆ ನಟಿಸಿದ ಚಿತ್ರ ತಂಡವನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ. ಸೂಸೈಡ್ ನೋಟ್ ಸಿಕ್ಕಿಲ್ಲ. ಆತ್ಮಹತ್ಯೆಗೆ ಕಾರಣ ಎಂಬುದು ಪತ್ತೆ ಹಚ್ಚಲಾಗುವುದು ಎಂದಿದ್ದಾರೆ.

English summary
Hailing from Erode, upcoming actress of Kollywood Riyamikka committed suicide by hanging at her residence in Chennai. Riyamikka has acted in a handful of films including Kumaranukku Kondattam, Aghoriyin Aattam.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more