twitter
    For Quick Alerts
    ALLOW NOTIFICATIONS  
    For Daily Alerts

    ಹಲವು ಚಿಂತನೆಗೆ ನಾಂದಿ ಹಾಡುವ ಐಟಿ ಹುಡುಗರ 'ಕೋಮಾ'

    By Prasad
    |

    ಅದಮ್ಯ ಉತ್ಸಾಹ, ಉತ್ತಮ ಚಿತ್ರ ನೀಡಬೇಕೆಂಬ ತುಡಿತ, ವಿನೂತನವಾದ ಕಥಾಹಂದರ ವಿಭಿನ್ನ ರೀತಿಯ ಆಲೋಚನೆಗಳಿದ್ದರೆ ಜನಮೆಚ್ಚುವ ಚಿತ್ರ ನೀಡಲು ಸಾಧ್ಯ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕರು ತೋರಿಸಿಕೊಟ್ಟಿದ್ದಾರೆ. ಅಂಥದೇ ವಿಭಿನ್ನ ಚಿಂತನೆಯೊಂದಿಗೆ ಐ.ಟಿ. ಹುಡುಗರ ದಂಡೊಂದು ಚಂದನವನದಲ್ಲಿ ಸದ್ದಿಲ್ಲದೆ ಸಿನಿಮಾವೊಂದನ್ನು ಮಾಡುತ್ತಿದೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ!

    ಕೋಮಾ..ಕೋಮಾ..ಕೋಮಾ...ಪ್ರೇಮಾ! ಎಂಬ ಪ್ರಖ್ಯಾತ ಹಾಡಿನ 'ಕೋಮಾ' ಪದವನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಚಿತ್ರೀಕರಣ ಮಾಡುತ್ತಿದೆ. ಕೇಳುಗರಿಗೆ.. ನೋಡುಗರಿಗೆ.. ಇದೊಂದು ಆಸ್ಪತ್ರೆ, ರೋಗಿ, ಡಾಕ್ಟರ್ ಎನ್ನುವ ಮನಸ್ಥಿತಿಯುಳ್ಳ ಚಿತ್ರ.. ಆದರೆ ಈ ಚಿತ್ರ ನಿಮ್ಮ ಊಹೆಗೆ ಬ್ರೇಕ್ ನೀಡಿ ಹೊಸದೊಂದು ಕಥೆಯನ್ನು ಸಾರುತ್ತದೆ. ಹಾಸ್ಯ, ಪ್ರೀತಿ, ಬಾಂಧವ್ಯ, ಸ್ನೇಹ, ವಿರಸ, ಅಭಿರುಚಿ, ಸಂಬಂಧಗಳಿಗೆ ಹೆಚ್ಚಿನ ಒತ್ತು ಕೊಟ್ಟು, ಕೊಂಚ ವಿಭಿನ್ನವಾದ ಒಡವೆಗಳಿಂದ ಅಲಂಕರಿಸಿ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.

    Koma - a new love story by IT professionals

    ಇಲ್ಲಿಯ ತನಕ ಎಲ್ಲಾ ಪ್ರೇಮ ಕಥೆಗಳು ಕೊನೆಗೊಳ್ಳುವುದು ಒಂದು ಸುಖಾಂತ್ಯ -ಅಂದರೆ ಒಂದಾಗೋದು ಅಥವಾ ದುಃಖಾಂತ್ಯ- ಅಂದರೆ ಬೇರೆಯಾಗೊದು. ಇದನ್ನು ಬಿಟ್ಟು ಬೇರೆ ಏನಾದರೂ ಇದೆಯಾ? ಎನ್ನುವ ಸಾಲುಗಳಿಂದಲೇ ಶುರುವಾಗುವ ಚಿತ್ರಕತೆ, ಇನ್ನೂ ಹತ್ತು ಹಲವು ಪ್ರಶ್ನೆಗಳಿಗೆ ನಾಂದಿ ಹಾಡುತ್ತದೆ.

    ಪ್ರೇಮಲೋಕದ ಸರದಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಥೆಯನ್ನು ಆಲಿಸಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಮ್ಮ ಆಲೋಚನೆಗಳಿಗೆ ಶಹಬ್ಬಾಸ್ ಎಂದು ಬೆನ್ನು ತಟ್ಟಿ ಸ್ವತಃ ತಂಡದೊಡನೆ ಸಮಯವನ್ನು ಕಳೆದು ತಮ್ಮ ಅನುಭವದ ವಿಶೇಷತೆಗಳನ್ನು ಬಿಚ್ಚಿಡುತ್ತಾ ಕಥೆಯ ಗಟ್ಟಿತನಕ್ಕೆ ಪ್ರೇಕ್ಷಕ ಮಹಾಶಯರ ಮಿಡಿತಕ್ಕೆ ಬೇಕಾಗುವ ಕೆಲವು ಬದಲಾವಣೆಗಳ ಸಲಹೆ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ರಮೇಶ್ ಅರವಿಂದ್, ಜಗ್ಗೇಶ್, ರಕ್ಷಿತ್ ಶೆಟ್ಟಿ, ಕಾಶೀನಾಥ್ ಮತ್ತಿತರ ನಿರ್ದೇಶಕರು, ಹೊಸಬರ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸಿ ಹಸಿರು ನಿಶಾನೆ ತೋರಿಸಿದ್ದಾರೆ.

    Koma - a new love story by IT professionals

    ಚಿತ್ರತಂಡ ಮೊದಲಬಾರಿಗೆ ಕ್ಯಾರೆಕ್ಟರ್ ಫಾಂಟ್ ಅನ್ನು ಬಿತ್ತರಿಸಿ, ವಿಭಿನ್ನ ರೀತಿಯಲ್ಲಿ ಟೈಟಲ್ ರಿಲೀಸ್ ಮಾಡಿದೆ. ರಾಘವೇಂದ್ರ ರಾಜ್ ಕುಮಾರ್ ಅವರು ತುಂಬು ಹೃದಯದಿಂದ "ತಮ್ಮ ಈ ವಿನೂತನ ಪ್ರಯತ್ನಕ್ಕೆ ಪ್ರಶಂಸಿಸಿ ನಿಮ್ಮ ತಂಡಕ್ಕೆ ಒಳ್ಳೆಯ ಭವಿಷ್ಯ ಕಾದಿದೆ, ನಮ್ಮಿಂದ ಯಾವುದೇ ರೀತಿಯ ಬೆಂಬಲ ಬೇಕಾದರೂ ಕೇಳಿ. ನಿಮ್ಮಂತಹ ಹೊಸಬರೇ ಕನ್ನಡವನ್ನು ಎತ್ತರಕ್ಕೆ ಬೆಳೆಸಬೇಕು" ಎಂದು ಆಶಿರ್ವದಿಸಿದ್ದಾರೆ.

    ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಿರುಚಿತ್ರಗಳ ಪ್ರಶಸ್ತಿ ಗರಿಯನ್ನು ಅಲಂಕರಿಸಿದ ಚಿತ್ರತಂಡದಲ್ಲಿ ಬಹುತೇಕರು ಐ.ಟಿ. ಉದ್ಯೋಗಿಗಳಿದ್ದಾರೆ. ಈಗಲೇ ಹದಿನೈದು ಕಿರುಚಿತ್ರಗಳನ್ನು ನಿರ್ಮಿಸಿ ಎಲ್ಲಾ ವರ್ಗದಲ್ಲೂ ಪ್ರಶಸ್ತಿ ಹಾಗೂ ಪ್ರಶಂಸೆ ಗಳಿಸಿ, ಮೂರು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ರವಿ ಮತ್ತು ಚೇತನ್ ಎಸ್.ಪಿ. ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

    Koma - a new love story by IT professionals

    ಸೌಂದರ್ಯ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಸಹಭಾಗಿತ್ವದಲ್ಲಿ ಚಿತ್ರ ಸಿದ್ಧವಾಗಿದ್ದು, ಅನುಪಮ್ ಖೇರ್ ಗರಡಿಯ ಕಾರ್ತಿಕ ಕುಮಾರ್ ವಿ, ಉಪ್ಪಿ 2ನ ಶೃತಿ ನಂದೀಶ್, ಸುಚೇಂದ್ರ ಪ್ರಸಾದ್, ಬಿ.ಸುರೇಶ, ಸಿಳ್ಳೆ ಮಂಜು, ಆಂಡ್ರ್ಯು ಅಜಿತ್, ಮಹೇಶ್, ರಂಜನಾ ಇನ್ನಿತರರು ಭೂಮಿಕೆಯಲ್ಲಿದ್ದಾರೆ. ಕಾರ್ತಿಕ್ ಮಳ್ಳೂರ್ ಕ್ಯಾಮರಾ, ಕ್ರೇಜಿ ಮೈಂಡ್ಸ್ ಕತ್ತರಿ, ಆಶಿಕ್ ಅರುಣ್ ಸಂಗೀತ ಚಿತ್ರಕ್ಕೆ ಇನ್ನಷ್ಟು ಮೆರಗು ತಂದಿದೆ.

    ಸಾಕಷ್ಟು ವಿಭಿನ್ನ ಆಲೋಚನೆಗಳನ್ನು ಹೊಂದಿರುವ ತಂಡ ಅದನ್ನು ತೆರೆಯ ಮೇಲೆ ತರುವ ಸಂಭ್ರಮದಲ್ಲಿದ್ದಾರೆ. ಹೊಸವರ್ಷದ ಮೊದಲ ತಿಂಗಳಲ್ಲಿ ಆಡಿಯೋ ಲಾಂಚ್ ಮತ್ತು ವಿಶೇಷ ತುಣುಕುಗಳನ್ನು ಬಿತ್ತರ ಮಾಡುವುದಾಗಿ ನಿರ್ದೇಷಕರು ಹೇಳಿದ್ದಾರೆ. ಫೆಬ್ರವರಿ ತಿಂಗಳಲ್ಲಿ, ಪ್ರೇಮಿಗಳ ದಿನದ ಆಸುಪಾಸಿನಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಫಿಲ್ಮಿಬೀಟ್‌ಗೆ ಹೇಳಿದೆ.

    ಲಕ್ಷಾಂತರ ರೂಪಯಿಯ ಸಂಬಳ ಬರುತ್ತಿದ್ದರೂ ಅದಕ್ಕೆಲ್ಲಾ ವಿರಾಮ ಹಾಕಿ, ಚಂದನವನದ ಪ್ರೇಕ್ಷಕ ಬಂಧುಗಳನ್ನು ಮನರಂಜಿಸಲು ಬರುತ್ತಿರುವ ನಮ್ಮ ಐ.ಟಿ. ಹುಡುಗರಿಗೆ "ಒನ್ ಇಂಡಿಯಾ" ಮತ್ತು ಫಿಲ್ಮಿಬೀಟ್ ಕಡೆಯಿಂದ ಅಭಿನಂದನೆ ಸಲ್ಲಿಸುತ್ತಾ, ಶುಭ ಹಾರೈಸೋಣ!

    English summary
    Koma - a new love story by IT professionals from Bengaluru. The movie, which is produced under Soundarya creations, is directed by Ravi and Chethan S.P. Suchendra Prasad, B. Suresh, Karthik Kumar V, Shruthi Nandish are in the lead role. The movie by new comers is set for a release in February.
    Monday, January 11, 2016, 15:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X