ಕೋಟಿ ದಾಟಿದ ಕೋಮಲ್ ಕಮಾಲ್!!!

komal
ಸಿನಿಮಾ ನಟ-ನಟಿಯರ ವಿಷ್ಯ ಬಂದಾಗ ಅವರಿಂದ ಬರುವ ಟಿವಿ ರೈಟ್ಸ್ ಕೂಡ ಅಷ್ಟೇ ಮುಖ್ಯ. ಕೋಟಿ ಮೇಲೆ ಟಿವಿ ರೈಟ್ಸ್ ಕೊಡಬಲ್ಲ ನಟರ ಸಂಖ್ಯೆ ಈಗ ಕನ್ನಡದಲ್ಲಿ ಸಲ್ಪ ಕಡಿಮೆಯೇ. ಪುನೀತ್, ದರ್ಶನ್, ದುನಿಯಾ ವಿಜಿ ಬಿಟ್ಟರೆ ಯಾರಿದ್ದಾರೆ! ಮೊದಲಿದ್ದ ಗಣೇಶ್ ಈಗ ಕೋಟಿ ಬಾಳುವುದಿಲ್ಲವಂತೆ.

ಇದ್ದಾರೆ ನಮ್ಮಲ್ಲೊಬ್ಬ ಕಾಮಿಡಿ ಕಿಂಗ್ ಕೋಮಲ್! ಹೌದು ಇದು ನಿಜ, ಕೋಮಲ್ ಈಗ ಮಾಡಬಲ್ಲರು ಕೋಟಿ ಟಿವಿ ರೈಟ್ಸ್ ಕಮಾಲ್!! ಅವರ ಇತ್ತೀಚಿನ ಚಿತ್ರ ಮರ್ಯಾದಾ ರಾಮಣ್ಣ ಕೋಟಿಗಳ ಟಿವಿ ರೈಟ್ಸ್ ಬಾಚಿಕೊಂಡಿರುವುದು ಆಶ್ಚರ್ಯವೆನಿಸಿದರೂ ಸತ್ಯ...ರೀ.

ಅವರು ನಟ, ನಾಯಕ ನಟ, ಹಾಸ್ಯನಟ ಎಲ್ಲವೂ. ಇಷ್ಟೆಲ್ಲಾ ಸೇರಿದ ಮೇಲೆ ಕೋಟಿ ದಾಟಲೇಬೇಕಲ್ಲವೇ? ಆದರೂ ನಾಯಕನಟರನ್ನು ಹಿಂದಿಕ್ಕಿದ್ದು ಅಸಾಮಾನ್ಯ ಸಾಧನೆಯೇ.

ಮರ್ಯಾದಾ ರಾಮಣ್ಣನಿಗೆ ಈ ಪರಿ ಮರ್ಯಾದೆ ಸಿಕ್ಕದ್ದು ಹಾಸ್ಯನಟರ ಗುಂಪಿನ ಗುಂಡಿಗೆ ಗಟ್ಟಿಯಾಗಲು ನೆರವಾಗಿದೆ. ಬಂದೇ ಬರುತಾವ ಕಾಲ...! ಅಂತ ಅವರೆಲ್ಲ ಸೇರಿ ಹಾಡುತ್ತಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ, ತಗೊಳ್ರಪಾ...

More from Filmibeat

English summary
Kannada Movie Actor Komal made a big sound un industry. His Recent Movie Maryada Ramanna Sold out for more than one crore rupees. From this matter, all comedy artists happy and thinking better. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X